ಬಾಲಿವುಡ್ ಕ್ವೀನ್ ನಟಿ ಕಂಗನಾ ರಣಾವತ್ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಆಗಿದೆ. ಈ ಸಂದರ್ಭ ನಟಿ ಸ್ಪೆಷಲ್ ಮೆಸೇಜ್ ಕೂಡಾ ಕೊಟ್ಟಿದ್ದಾರೆ. ಟ್ವಿಟರ್ ಸೇರಿದ ಒಂದೇ ವಾರದಲ್ಲಿ ಕಂಗನಾ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ಆಗಿದೆ.

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಬಾಲಿವುಡ್ ನೆಪೊಟಿಸಂನ್ನು ತೀವ್ರವಾಗಿ ಟೀಕಿಸುತ್ತಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ವಿಡಿಯೋ ಮಾಡಿದ ನಟಿ ತಮ್ಮ ಫಾಲೋವರ್ಸ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ.

ಮೂವಿ ಮಾಫಿಯಾ ಗೂಂಡಾಗಳಿಗಿಂತ ನಂಗೆ ಮುಂಬೈ ಪೊಲೀಸರ ಭಯ: ಕಂಗನಾ

ಮಣಿಕರ್ಣಿಕಾ ನಟಿ ಮಣಿಪುರಿ ಡ್ರೆಸ್‌ ಫಾನೆಕ್‌ನಲ್ಲಿ ಕಾಣಿಸಿಕೊಂಡು ಭಾರತದ ಫ್ಯಾಷನ್‌, ವಿಶೇಷವಾಗಿ ಈಶಾನ್ಯ ಭಾಗದ ಫ್ಯಾಷನ್‌ ಪ್ರೇರಣೆಯಾಗಿ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ಬೇರೆಯವರನ್ನು ಅಳವಡಿಸಿಕೊಂಡು ನಮ್ಮದನ್ನು ತಿರಸ್ಕರಿಸುವುದು ಫ್ಯಾಷನ್ ಅಲ್ಲ. ರಾಷ್ಟ್ರೀಯತೆಯ ನಿಜವಾದ ಅರ್ಥ ರಾಷ್ಟ್ರ ಮೊದಲು, ನಮ್ಮದಕ್ಕೆ ಮೊದಲ ಆದ್ಯತೆ. ನನ್ನ 1 ಮಿಲಿಯನ್ ಟ್ವಿಟರ್ ಕುಟುಂಬಕ್ಕೆ ಚೀಯರ್ಸ್ ಎಂದು ಬರೆದಿದ್ದಾರೆ.

ಬಾಲಿವುಡ್‌ನಲ್ಲಿ ಹೇಗಿರುತ್ತೆ ಗೊತ್ತಾ ಡ್ರಗ್‌ ಮಾಫಿಯಾ?

ಕಂಗನಾ ತಲೈವಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು,  ಮಾರ್ಚ್ ತನಕ ನಟಿ ಈ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿ ಇದ್ದರು.  ಇನ್ನು ತೇಜಸ್‌ ಸಿನಿಮಾ ಶೂಟಿಂಗ್ ಕೂಡಾ ಶೀಘ್ರ ಆರಂಭವಾಗಲಿದೆ. ಇದರಲ್ಲಿ ನಟಿ ಏರ್ ಫೋರ್ಸ್‌ ಪೈಲಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.