ತನ್ನ ಜತೆ ಕೆಲಸ ಮಾಡುತ್ತಿದ್ದ ಸ್ಪಾಟ್‌ಬಾಯ್‌ ಉಪೇಂದ್ರ ಸಿಂಗ್‌ರನ್ನು ಆಕೆ ಈಗ ಬಿಸಿನೆಸ್‌ಮನ್‌ ಮಾಡಿದ್ದಾರೆ.

ಉಪೇಂದ್ರ ಸಿಂಗ್‌ಗೆ ಮೊದಲಿನಿಂದಲೂ ಕ್ಯಾರವಾನ್‌ ರೆಡಿ ಮಾಡುವ ಬಿಸಿನೆಸ್‌ ಶುರು ಮಾಡಬೇಕು ಎಂಬ ಆಸೆ ಇತ್ತು. ಆದರೆ ಹೇಗೆ ಅಂತ ಗೊತ್ತಿರಲಿಲ್ಲ. ಸುಮಾರು ವರ್ಷ ಈ ಕನಸನ್ನು ಹೊತ್ತು ಉಪೇಂದ್ರ ಸಿಂಗ್‌ ತಿರುಗಾಡುತ್ತಿದ್ದರು. ಒಂದು ದಿನ ಧೈರ್ಯ ಮಾಡಿ ಭೂಮಿ ಪೆಡ್ನೇಕರ್‌ರ ಬಳಿ ತಮ್ಮ ಆಸೆ ಹೇಳಿಕೊಂಡರು.

ಬೆಳ್ಳಗಿದ್ದ ನಟಿ ಕಪ್ಪಾಗಿದ್ಯಾಕೆ? ಸೋಷಿಯಲ್ ಮೀಡಿಯಾದಲ್ಲಿ ಈಕೆ ಬಗ್ಗೆ ಚರ್ಚೆಯಾಕೆ?

ಭೂಮಿ ಅದನ್ನು ಕೇಳಿ ಉಪೇಂದ್ರರಿಗೆ ಸ್ಫೂರ್ತಿ ತುಂಬಿ ಸಹಾಯ ಮಾಡಿ ಅವರ ಬಿಸಿನೆಸ್‌ ಶುರು ಮಾಡುವಂತೆ ಮಾಡಿದರು. ಅದೇ ಪ್ರೀತಿಯಿಂದ ಉಪೇಂದ್ರ ಸಿಂಗ್‌ ಮೊದಲಿಗೆ ಭೂಮಿ ಕ್ಯಾರವಾನ್‌ ಅನ್ನೇ ಚಂದಕ್ಕೆ ರೆಡಿ ಮಾಡಿ ಕೊಟ್ಟಿದ್ದಾರೆ. ತಾನು ಬಿಸಿನೆಸ್‌ ಶುರು ಮಾಡಲು ಭೂಮಿಯೇ ಕಾರಣ ಎಂದಿದ್ದಾರೆ. ಇಂಥಾ ಕತೆ ಆಗಾಗ ಕಿವಿಗೆ, ಕಣ್ಣಿಗೆ ಬೀಳುತ್ತಿದ್ದರೆ ಮನಸ್ಸು ಹಗುರಾಗುತ್ತದೆ.