ಪತಿಯರಿಂದ ಟಾರ್ಚರ್​ ಸಹಿಸಿಕೊಂಡ ಖ್ಯಾತ ಬಾಲಿವುಡ್​ ನಟಿಯರಿವರು...

ರಾಖಿ ಸಾವಂತ್​, ಪತಿಯ ವಿರುದ್ಧ ದೂರು ದಾಖಲಿಸಿದ ಬಳಿಕ ಇವರಂತೆಯೇ ಕೌಟುಂಬಿಕ ದೌರ್ಜನ್ಯ ಸಹಿಸಿಕೊಂಡ ಕೆಲ ಬಾಲಿವುಡ್​ ತಾರೆಯರ ಹೆಸರು ಬೆಳಕಿಗೆ ಬಂದಿದೆ. ಅವರು ಯಾರು? 

Bollywood actress accused husband of domestic violence

ಚಿತ್ರ ತಾರೆಯರ ಬದುಕು ಬಲು ಸುಂದರ. ಹೋದಲ್ಲಿ, ಬಂದಲ್ಲಿ ಅಭಿಮಾನಿಗಳ ದಂಡು, ಆಟೋಗ್ರಾಫ್​ (Autograph) ಪಡೆಯಲು ಮುಗಿಬೀಳುವುದು ಒಂದೆಡೆಯಾದರೆ ಎಲ್ಲಿ ಹೋದರೂ ರೆಡ್​ ಕಾರ್ಪೆಟ್​ ಸ್ವಾಗತ... ಹೀಗೆ ಏನೇನೋ ಅಂದುಕೊಳ್ಳುವುದು ಉಂಟು. ಆದರೆ ಅಸಲಿಗೆ ಎಲ್ಲವೂ ಅಂದುಕೊಂಡಷ್ಟು ನಡೆದಿರುವುದಿಲ್ಲ. ಕೆಲವೇ ಕೆಲವು ನಟ-ನಟಿಯರಿಗೆ ಸಕಲ ಸೌಲಭ್ಯ ಲಭಿಸುವುದು ನಿಜವಾದರೂ ಹಲವರ ರಿಯಲ್​ ಸ್ಟೋರಿ, ರೀಲ್​ ಸ್ಟೋರಿಗಳಷ್ಟು ಖುಷಿಯಾಗಿ ಇರುವುದಿಲ್ಲ. ಎಷ್ಟೋ ನಟಿಯರ ನಿಜ ಬದುಕು ಕತ್ತಲೆಯ ಕೂಪವಾಗಿದ್ದರೆ, ಇನ್ನು ಕೆಲವು ನಟಿಯರ ಬದುಕು ಅಕ್ಷರಶಃ ನಕರವಾಗಿರುತ್ತದೆ. ಕೌಟುಂಬಿಕ ದೌರ್ಜನ್ಯದ (Torture) ವಿಷಯಕ್ಕೆ ಬಂದಾಗ ಸಾಮಾನ್ಯ ಮಹಿಳೆಯರು ಮಾತ್ರವಲ್ಲದೇ ಖ್ಯಾತ ನಟಿಯರೂ ಇದನ್ನು ಅನುಭವಿಸುವುದು ಉಂಟು.

ಇತ್ತೀಚೆಗೆ ಕೌಟುಂಬಿಕ ದೌರ್ಜನ್ಯದ ಕುರಿತು ಸುದ್ದಿಯಲ್ಲಿ ಇರುವವರು ರಾಖಿ ಸಾವಂತ್​ (Rakhi Sawant). ಇವರ ಮದುವೆಯೇ ವಿಚಿತ್ರ ಕುತೂಹಲದ ಬೀಡು. ಮೊದಲಿಗೆ ಮದುವೆಯೇ ಆಗಿಲ್ಲ ಎಂದು ಹೇಳಿದ್ದ ರಾಖಿ ಪತಿ ಆದಿಲ್​ ಖಾನ್​ ಕೊನೆಗೂ ಅದನ್ನು ಒಪ್ಪಿಕೊಂಡ ಬೆನ್ನಲ್ಲೇ ರಾಖಿ ಅವರ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್​ ದಾಖಲಿಸಿದ್ದಾರೆ. ಆದಿಲ್​ ಖಾನ್​ ಅರೆಸ್ಟ್​ ಕೂಡ ಆಗಿದ್ದಾರೆ. ತಮಗೆ ಚಿತ್ರಹಿಂಸೆ ನೀಡುತ್ತಿರುವುದಾಗಿ ರಾಖಿ ದೂರಿದ್ದು, ತಮ್ಮ ಮೇಲೆ ಆಗಿರುವ ಹಲ್ಲೆಯ ಗುರುತುಗಳನ್ನೂ ತೋರಿಸಿದ್ದಾರೆ. ಇನ್ನೊಬ್ಬಳ ಮೋಹಪಾಶಕ್ಕೆ ಬಿದ್ದಿರುವ ತಮ್ಮ ಪತಿ, ತಮಗೆ ಮೋಸ ಮಾಡಿರುವುದಾಗಿಯೂ ರಾಖಿ ಹೇಳಿಕೊಂಡಿದ್ದಾರೆ.  ಆದರೆ ಇಂಥ ದೌರ್ಜನ್ಯ ಎದುರಿಸುತ್ತಿರುವುದು ಕೇವಲ ರಾಖಿ ಮಾತ್ರವಲ್ಲ, ಹಿಂದೆ ಕೂಡ ಹಲವರು ತಾರೆಯರು ತಮ್ಮ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್​ ದಾಖಲಿಸಿದ್ದಾರೆ.

ರಾಮ್ ಚರಣ್​ಗೆ ಇಷ್ಟವಿಲ್ಲದಿದ್ರೂ ಲಿಪ್​ಲಾಕ್​ ಮಾಡಿದ್ರಾ ಸಮಂತಾ?

ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಇರುವುದು ಖ್ಯಾತ ನಟಿ ನಿಶಾ ರಾವಲ್ (Nisha Rawal) ದಾಂಪತ್ಯ ಜೀವನ. ಇವರು  ಕರಣ್ ಮೆಹ್ರಾ ಅವರನ್ನು ಮದುವೆಯಾಗಿದ್ದರು. 9 ವರ್ಷಗಳಿಗೂ ಹೆಚ್ಚು ಕಾಲ ಇವರು ಒಟ್ಟಿಗೇ ಇದ್ದರು. ಆದರೆ  2021 ರಲ್ಲಿ, ನಿಶಾ,  ಪತಿಯ ವಿರುದ್ಧ ಹಲ್ಲೆ ಆರೋಪ ಮಾಡಿದರು. ಅದೇ ಇನ್ನೊಂದೆಡೆ, ನಿಶಾಗೆ ವಿವಾಹೇತರ ಸಂಬಂಧವಿದೆ ಎಂದು ಕರಣ್ ಆರೋಪಿಸಿದ್ದರು. ಆದರೆ ಪತಿಯ ಮೇಲೆ ನಿಶಾ ಪೊಲೀಸರಿಗೆ ನೀಡಿದ ದೂರಿನ ನಂತರ ಕರಣ್ ವಿರುದ್ಧ ಎಫ್​ಐಆರ್​ ದಾಖಲಾಗಿತ್ತು. ನಂತರ ಅವರನ್ನು  2021ರ ಮೇ ತಿಂಗಳಿನಲ್ಲಿ ಅರೆಸ್ಟ್​ ಮಾಡಲಾಯಿತು. ಜೈಲಿನಲ್ಲಿ ಕೆಲ ಕಾಲ ಕಳೆದ ಬಳಿಕ ಅವರು ಜಾಮೀನಿನ ಮೇಲೆ ಹೊರಬಂದರು.

ಇನ್ನೋರ್ವ ನಟಿ ವಿವಾದಾತ್ಮಕ ಹೇಳಿಕೆಗಳೇ ಖ್ಯಾತರಾಗಿರುವ  ಪೂನಂ ಪಾಂಡೆ (Poonam Pandey). ಇವರು ಕೂಡ ಕೌಟುಂಬಿಕ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದರು.  ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಸ್ಯಾಮ್ ತನ್ನೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದನ್ನು ಅವರು 'ಲಾಕಪ್' ಎಂಬ ರಿಯಾಲಿಟಿ ಶೋನಲ್ಲಿ ಬಹಿರಂಗಪಡಿಸಿದ್ದರು. ಅಂತೆಯೇ, 42 ವರ್ಷದ ಶ್ವೇತಾ ತಿವಾರಿ ಅವರು ಕೂಡ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲು ಮಾಡಿದದರು. ಇವರಿಗೆ ಎರಡು ಮದುವೆಗಳಾಗಿದ್ದು, ಎರಡೂ ಯಶಸ್ವಿಯಾಗಲಿಲ್ಲ.  18 ನೇ ವಯಸ್ಸಿನಲ್ಲಿ ಇವರ ವಿವಾಹ ರಾಜಾ ಚೌಧರಿ ಅವರ ಜೊತೆ ನಡೆದಿತ್ತು.  ಅವರಿಗೆ ಪಾಲಕ್ ತಿವಾರಿ (Palak Tiwari) ಎಂಬ ಪುತ್ರಿಯಿದ್ದಾಳೆ. ನಂತರ ಶ್ವೇತಾ ಪತಿಯ  ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಮಾಡಿದ್ದರು. ಅವರಿಂದ ಬೇರ್ಪಟ್ಟ ನಂತರ  2013 ರಲ್ಲಿ ಅಭಿನವ್ ಕೊಹ್ಲಿಯನ್ನು ವಿವಾಹವಾದರು. ಅವರಿಗೆ ರೆಯಾನ್ಶ್ ಎಂಬ ಮಗನಿದ್ದಾನೆ. 2017ರಲ್ಲಿ ಇಬ್ಬರ ನಡುವೆ ಜಗಳವಾಗಿ ದೂರವಾದರು. ತಮ್ಮ ಮೊದಲ ಪತಿಯಿಂದ ಹುಟ್ಟಿದ ಮಗಳ ಮೇಲೆ ಈ ಪತಿ ಹಲ್ಲೆ ನಡೆಸುತ್ತಾರೆ, ತಮ್ಮ ಮೇಲೂ ಪತಿ ಹಲ್ಲೆಗೆ ಮುಂದಾಗಿರುವುದಾಗಿ ಶ್ವೇತಾ ದೂರಿದ್ದರು.

Rakul Preeth Singh: ಎರಡು ಕಾಂಡೋಮ್ ಒಟ್ಟಿಗೇ​ ಧರಿಸಿದ್ರೆ ಏನಾಗತ್ತೆ? ನಟಿ ವಿವರಿಸಿದ್ದು ಹೀಗೆ!

ಇನ್ನು ರಾಹುಲ್ ಮಹಾಜನ್ ಅವರ ಪತ್ನಿಯಾಗಿದ್ದ ಡಿಂಪಿ ಕೂಡ ಪತಿಯ ವಿರುದ್ಧ ಕೇಸ್​ ದಾಖಲು ಮಾಡಿದ್ದರು. ರಾಹುಲ್‌ ಮಹಾಜನ್‌ (Rahul Mahajan) ಕಿರುತೆರೆಯ ಚಿರಪರಿಚಿತ ಮುಖ.  ಕೇಂದ್ರ ಮಾಜಿ ಸಚಿವ, ದಿವಂಗತ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್‌ ಹಿಂದೆ ಪೈಲಟ್‌ ಆಗಿದ್ದರು. ಹಲವು ರಿಯಾಲಿಟ್‌ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ರಾಹುಲ್ ಮಹಾಜನ್‌ ಈ ಹಿಂದೆ  ಶ್ವೇತಾ ಸಿಂಗ್ ಮತ್ತು ಡಿಂಪಿ ಗಂಗೂಲಿ ಅವರನ್ನು ಮದುವೆಯಾಗಿದ್ದರು. ಎರಡು ಮದುವೆ ಮತ್ತು ಡಿವೋರ್ಸ್‌ ನಂತರ ರಾಹುಲ್‌ ಮೂರನೇ ಬಾರಿ ರಷ್ಯಾದ ಮಾಡೆಲ್‌  ನಟಾಲಿಯಾ ಅವರನ್ನು 2018ರಲ್ಲಿ ಮದುವೆಯಾದರು. ಇವರ ಪೈಕಿ ಎರಡನೆಯ ಪತ್ನಿ, ಕೋಲ್ಕತ್ತಾದ ನಿವಾಸಿ ಡಿಂಪಿ ಗಂಗೂಲಿಯವರು (Dimpy Ganguly) ರಾಹುಲ್ ಮಹಾಜನ್  ವಿರುದ್ಧ ಹಲ್ಲೆ ಆರೋಪ ಮಾಡಿ ದೂರು ದಾಖಲಿಸಿದ್ದರು. 
 

Latest Videos
Follow Us:
Download App:
  • android
  • ios