ಸಾಯುವ ಮೊದಲು ಅದೆಂಥಾ ಲೈಪ್ ಲೆಸನ್ ಟಿಪ್ಸ್ ಕೊಟ್ಟು ಹೋಗಿದ್ದಾರೆ ನೋಡಿ ಸುಶಾಂತ್ ಸಿಂಗ್ ರಜಪೂತ್!
ಲವ್‌ನಲ್ಲಿ ನಾವು ಬಿದ್ದಾಗ ಅದು ವ್ಯಕ್ತಿಯೇ ಆಗಿರಲಿ, ಸಮಾಜವೇ ಆಗಿರಲಿ ಅಥವಾ ಇಡೀ ಜಗತ್ತೇ ಆಗಿರಲಿ, ನಮಗೆ ಏನಾದರೂ ಕೊಡಬೇಕು ಎನಿಸುತ್ತದೆ. ಅದು ವ್ಯಕ್ತಿಗತವಾಗಿದ್ದರೆ ಅದನ್ನು ಶುರು ಎನ್ನಬಹುದು. ಸಮಾಜಮುಖಿ ಆಗಿದ್ದರೆ ಅದಕ್ಕಿಂತ ಸ್ವಲ್ಪ ಹೆಚ್ಚು ಎನ್ನಬೇಕು. ಅದು ಇಡೀ ಪ್ರಪಂಚವನ್ನು ವ್ಯಾಪಿಸಿಬಿಟ್ಟರೆ...
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ಲವ್ ಹಾಗೂ ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ. 'ನೀವು ಕೊಡಬೇಕು ಎಂದಿದ್ದರೆ ಲವ್‌ನಲ್ಲಿ ಬೀಳಬೇಕು. ಲವ್ ಎಂದರೆ ಗಂಡು-ಹೆಣ್ಣು ಮಧ್ಯೆ ನಡೆಯುವ ಲವ್ ಅಂತ ನಾನು ಹೇಳುತ್ತಿಲ್ಲ. ನೀವೇ ನಿಮ್ಮೊಂದಿಗೆ ಲವ್‌ನಲ್ಲಿ ಬೀಳಬೇಕು, ನೀವೇ ಲವ್ ಆಗಿಬಿಡಬೇಕು. ಒಮ್ಮೆ ಕೊಡಲು ಶುರು ಮಾಡಿದರೆ ಅದು ಅಭ್ಯಾಸಕ್ಕೆ ತಿರುಗುತ್ತದೆ. ಕೊಡುತ್ತಾ ಕೊಡುತ್ತಾ ಹೋದಂತೆ ನೀವೂ ಬೆಳೆಯುತ್ತೀರಿ, ಅಕ್ಕಪಕ್ಕದವರನ್ನೂ ಬೆಳೆಸುತ್ತೀರಿ.
ಬೆಳವಣಿಗೆ ಎಂದರೆ ಯಾವತ್ತೂ ಕೇವಲ ಹೊರಗಿನ ಪ್ರಪಂಚದ ಬೆಳವಣಿಗೆ ಎಂದೇ ಯೋಚಿಸಬೇಡಿ. ಆಂತರಿಕ ಬೆಳವಣಿಗೆ ಕೂಡ ತುಂಬಾ ಮುಖ್ಯ. ನೀವು ಆಂತರಿಕವಾಗಿ ಬೆಳೆಯುತ್ತಾ ಹೋದಂತೆಲ್ಲ ನಿಮ್ಮೊಳಗೆ ಶಾಂತಿ, ನೆಮ್ಮದಿ ಹೆಚ್ಚುತ್ತಾ ಹೋಗುತ್ತದೆ. ಮಾನವೀಯತೆ ಕೂಡ ಜಾಸ್ತಿಯಾಗುತ್ತ ಹೋಗುತ್ತದೆ. ಜೀವನ ಮುಂದುವರೆದಂತೆಲ್ಲಾ ಅಂತ ಬೆಳವಣಿಗೆ ಕೂಡ ತೀರಾ ಇಂಪಾರ್ಟೆಂಟ್. ಸರ್ವತೋಮುಖ ಬೆಳವಣಿಗೆ ಎಂದರೆ ಅದೇ, ಕೇವಲ ಹೊರಜಗತ್ತಿನ ಥಳುಕು-ಬಳುಕು ಅಲ್ಲವೇ ಅಲ್ಲ. ಅಚ್ಚರಿ ಎಂದರೆ, ನಮ್ಮ ಆಂತರಿಕ ಬೆಳವಣಿಗೆ ನಮ್ಮ ಮುಖ್ಯ ಎನಿಸಿಲ್ಲ, ಅದು ನಮ್ಮ ಗಮನಕ್ಕೂ ಬರುತ್ತಿಲ್ಲ.
ಆರತಿಗೇಕೆ ಪ್ರಚಾರವೆಂದರೆ ಅಲರ್ಜಿ; ಅಮೆರಿಕಾದಿಂದ ಗುಟ್ಟಾಗಿ ಪದೇಪದೇ ಬರುವುದೇಕೆ, ಮತ್ತೆ ಹೋಗುವುದೇಕೆ?
ನನ್ನ ಪ್ರಕಾರ, ಲವ್‌ನಲ್ಲಿ ನಾವು ಬಿದ್ದಾಗ ಅದು ವ್ಯಕ್ತಿಯೇ ಆಗಿರಲಿ, ಸಮಾಜವೇ ಆಗಿರಲಿ ಅಥವಾ ಇಡೀ ಜಗತ್ತೇ ಆಗಿರಲಿ, ನಮಗೆ ಏನಾದರೂ ಕೊಡಬೇಕು ಎನಿಸುತ್ತದೆ. ಅದು ವ್ಯಕ್ತಿಗತವಾಗಿದ್ದರೆ ಅದನ್ನು ಶುರು ಎನ್ನಬಹುದು. ಸಮಾಜಮುಖಿ ಆಗಿದ್ದರೆ ಅದಕ್ಕಿಂತ ಸ್ವಲ್ಪ ಹೆಚ್ಚು ಎನ್ನಬೇಕು. ಅದು ಇಡೀ ಪ್ರಪಂಚವನ್ನು ವ್ಯಾಪಿಸಿಬಿಟ್ಟರೆ ಅದನ್ನು ಯೋಗ ಎನ್ನಬೇಕಾಗುತ್ತದೆ. ಆಗ ನಮ್ಮ ಆಂತರಿಕ ಖುಷಿಗೆ ಮಿತಿಯೇ ಇರುವುದಿಲ್ಲ. ಒಳಗಿನ ಖುಷಿಯೇನೂ ಅಲ್ಲೇ ಇರುವುದಿಲ್ಲ, ಹೊರ ಪ್ರಪಂಚಕ್ಕೆ ಹರಿಯುತ್ತದೆ, ಹರಿಯಲೇಬೇಕು' ಎಂದಿದ್ದಾರೆ ನಟ ಸುಶಾಂತ್ ಸಿಂಗ್ ರಜಪೂತ್.
ಅಮೃತಂ ಕೊಟ್ಟ ಕಾಟಕ್ಕೆ ಬೇಸತ್ತು ಅತ್ಮಹತ್ಯೆ ಮಾಡಿಕೊಂಡರೇ ನಟಿ ಮಂಜುಳಾ; ಅಂಥ ದುರಂತ ಸಾವಿನ ರಹಸ್ಯವೇನು?
ಅಂದಹಾಗೆ, ಬಾಲಿವುಡ್ ಸಿನಿಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಬಿಹಾರದ ಪಾಟ್ನಾದಲ್ಲಿ 21 ಜನವರಿ 1986ರಲ್ಲಿ ಜನಿಸಿದವರು. ಸಿನಿಮಾ ನಟನೆಯನ್ನು ಬಯಸಿ ಅದನ್ನು ಬೆನ್ನುಹತ್ತಿದ ಸುಶಾಂತ್ ಸಿಂಗ್, ಮುಂಬೈಗೆ ಬಂದು ಅದೃಷ್ಟ ಪರೀಕ್ಷೆಗೆ ಇಳಿದರು. ಆದರೆ ಶುರುವಿನಲ್ಲಿ ಅವರಿಗೆ ಕಿರುತೆರೆಯಲ್ಲಿ ಅವಕಾಶ ಸಿಕ್ಕಿತು.
ಸರಿತಾ ಬಿಟ್ಟರೆ ಸುಧಾರಾಣಿ ನನ್ನ ಫೇವರೆಟ್ ನಟಿ; ಹೀಗಂದಿದ್ರು ಕನ್ನಡದ ಮೋಸ್ಟ್ Top ಸ್ಟಾರ್ ನಟ!
ಅದನ್ನೇ ಮೆಟ್ಟಿಲಾಗಿ ಮಾಡಿಕೊಂಡ ಸುಶಾಂತ್, ಅಲ್ಲಿಂದಲೇ ಬಾಲಿವುಡ್ ಸಿನಿಮಾಕ್ಕೆ ಜಿಗಿದು ಸಿನಿಮಾ ನಟರಾಗಿಯೂ ಹೆಸರು, ಹಣ ಗಳಿಸಿದರು. ಆದರೆ, ತೀರಾ ಚಿಕ್ಕ ವಯಸ್ಸಿಗೇ, ಅಂದರೆ 34 ವರ್ಷಕ್ಕೇ (14 June 2020) ದುರಂತ ಸಾವನ್ನು ಕಂಡು ಇಹಲೋಕ ತ್ಯಜಿಸಿದರು.