ಮುಂಬೈ(ಮೇ.23):  ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ಸರ್ಕಾರಕ್ಕಿಂತ ಚುರುಕಾಗಿ ಹಾಗೂ ಸಮಪರ್ಕವಾಗಿ ಬಾಲಿವುಡ್ ನಟ ಸೋನು ಸೂದ್ ನೆರವಾಗುತ್ತಿದ್ದಾರೆ. ಸೋಂಕಿತರಿಗೆ ಬೆಡ್, ಆಕ್ಸಿಜನ್, ವೆಂಟಿಲೇಟರ್, ಚಿಕಿತ್ಸೆಗೆ ನೆರವು ನೀಡುತ್ತಿರುವುದು ಮಾತ್ರವಲ್ಲ, ನಿರ್ಗತಿಕರಿಗೆ ಆರ್ಥಿಕ ಸಹಾಯ, ಆಹಾರ ಕಿಟ್ ನೀಡೋ ಮೂಲಕ ಅಗತ್ಯ ನೆರವು ನೀಡಿದ್ದಾರೆ. ಇದೀಗ ಸೋನು ಸೂದ್ ಆಂಧ್ರ ಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ.

ಕೊರೋನಾ ಸಲಕರಣೆಗಳಿಗಾಗಿ ಸೋನು ಸೂದ್‌ಗೆ ಪತ್ರ ಬರೆದ ಆರ್ಮಿ ಆಫೀಸರ್

ಆಂಧ್ರ ಪ್ರದೇಶದ ಕರ್ನೂಲ್ ಸರ್ಕಾರಿ ಆಸ್ಪತ್ರೆ ಹಾಗೂ ನೆಲ್ಲೂರು ಜಿಲ್ಲಾ ಆಸ್ಪತ್ರೆ ಕೇಂದ್ರದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪಿಸಿದ್ದಾರೆ. ಜೂನ್ ತಿಂಗಳಿಂದ ಈ ಉತ್ಪಾದನೆ ಘಟಕಗಳು ಕಾರ್ಯಾರಂಭಿಸಲಿದೆ. ಈ ಕುರಿತು ಸೋನು ಸೂದ್ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. 

 

ಆಕ್ಸಿಜನ್ ಸಮಸ್ಯೆ ಪರಿಹರಿಸಲು ಇದೀಗ ನಮ್ಮ ಮೊದಲ ಪ್ರಯತ್ನವಾಗಿ ಕರ್ನೂಲ್ ಸರ್ಕಾರಿ ಆಸ್ಪತ್ರೆ ಹಾಗೂ ನೆಲ್ಲೂರಿನ ಆತ್ಮಕೂರ್ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿನ್ ಘಟಕ ಯಶಸ್ವಿಯಾಗಿ ಸ್ಥಾಪಿಸಲಾಗಿದೆ. ಈ ವಿಚಾರ ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಈ ನೆರವನ್ನು ಅಗತ್ಯವಿರುವ ಇತರ ರಾಜ್ಯಗಳಿಗೆ ವಿಸ್ತರಿಸಲಾಗುವುದು. ಇದು ಗ್ರಾಮೀಣ ಭಾರತವನ್ನು ಬೆಂಬಲಿಸುವ ಸಮಯ ಎಂದು ಸೋನು ಸೂದ್  ಟ್ವೀಟ್ ಮಾಡಿದ್ದಾರೆ.

ರಿಯಲ್ ಹೀರೋ ಸೋನು ಸೂದ್‌ ಪೋಸ್ಟರ್‌ಗೆ ಹಾಲಿನ ಅಭಿಷೇಕ!

ಸೋನು ಸೂದ್ ಸ್ಥಾಪಿಸಿರುವ ಆಕ್ಸಿಜನ್ ಘಟಕದಿಂದ ಕರ್ನೂಲ್ ಸರ್ಕಾರಿ ಆಸ್ಪತ್ರೆಯಲ್ಲಿ 150 ರಿಂದ 200 ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಲಿದೆ. ಸೂದ್ ಅವರ ಮಾನವೀಯ ನಡೆಗೆ ನಾವು ಕೃತಜ್ಞರಾಗಿದ್ದೇವೆ ಎಂದು  ಜಿಲ್ಲಾಧಿಕಾರಿ ಎಸ್ .ರಾಮಸುಂದ್ ರೆಡ್ಡಿ ಹೇಳಿದ್ದಾರೆ.