ನಟ, ಚಿತ್ರಕಥೆಗಾರ ಶಿವ್ ಕುಮಾರ್ ಸುಬ್ರಹ್ಮಣ್ಯಂ ಕೊನೆ ಉಸಿರೆಳೆದಿದ್ದಾರೆ.
ಏಪ್ರಿಲ್ 11ರಂದು ಬೆಳಗ್ಗೆ ಬಾಲಿವುಡ್ ಚಿತ್ರರಸಿಕರಿಗೆ ಶಾಕಿಂಗ್ ನ್ಯೂಸ್ ಕೇಳಿಬಂದಿದೆ. ಹಿರಿಯ ನಟ, ಚಿತ್ರಕಥೆಗಾರ ಶಿವ್ ಕುಮಾರ್ ಸುಬ್ರಹ್ಮಣ್ಯಂ ಇಹಲೋಕ ತ್ಯಜಿಸಿದ್ದಾರೆ. ಶಿವ ಅವರ ಅಗಲಿಕೆಗೆ ಕಾರಣ ಏನೆಂದು ಇನ್ನೂ ತಿಳಿದುಬಂದಿಲ್ಲ ಆದರೆ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.
1989ರಲ್ಲಿ ಪರಿಂದಾ ಚಿತ್ರದ ಮೂಲಕ ಬರಹಗಾರನಾಗಿ ಜರ್ನಿ ಆರಂಭಿಸಿದ ಶಿವ ಸುಬ್ರಹ್ಮಣ್ಯಂ ನೂರಾರೂ ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪರಿಂದಾ ಚಿತ್ರದಲ್ಲಿ ಜಾಕಿ ಶ್ರಾಪ್, ಅನಿಲ್ ಕಪೂರ್, ಮಾಧುರಿ ದೀಕ್ಷಿತ್ ಮತ್ತು ಅನುಪಮ್ ಖೇರ್ ನಟಿಸಿದ್ದಾರೆ, ವಿಧು ವಿನೋದ್ ಚೋಕ್ರಾ ನಿರ್ದೇಶನ ಮಾಡಿದ್ದಾರೆ. ಹಿರಿಯ ಸಿನಿಮಾ ಪತ್ರಕರ್ತೆ ಬೀನಾ ಸರ್ವಾರ್ ಅವರು ಟ್ಟೀಟ್ ಮಾಡುವ ಮೂಲಕ ಶಿವ್ ಅವರ ಸಾವಿ ವಿಚಾರ ಖಚಿತ ಪಡಿಸಿದ್ದಾರೆ.
'ಶಿವ ಕುಮಾರ್ ಸುಬ್ರಹ್ಮಣ್ಯಂ ಅವರ ಸಾವಿನ ವಿಚಾರ ಕೇಳುವುದಕ್ಕೆ ಬೇಸರವಾಗುತ್ತಿದೆ. ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಏಕೆಂದರೆ ಎರಡು ತಿಂಗಳ ಹಿಂದೆ ಶಿವ್ ಮತ್ತು ದಿವ್ಯಾ ಅವರ ಏಕೈಕಾ ಪುತ್ರ ಜಹಾನ್ ಬ್ರೈನ್ ಟ್ಯೂಮರ್‌ನಿಂದ ಕೊನೆ ಉಸಿರೆಳೆದರು. ಜಹಾನ್ 16 ವರ್ಷದ ಹುಟ್ಟುಹಬ್ಬಕ್ಕೆ ಎರಡು ವಾರಗಳಿತ್ತು' ಎಂದು ಬೀನಾ ಟ್ಟೀಟ್ ಮಾಡಿದ್ದಾರೆ.
RIP Kalatapasvi Rajesh: ಸ್ಯಾಂಡಲ್‌ವುಡ್ ಹಿರಿಯ ನಟ 'ಕಲಾತಪಸ್ವಿ' ರಾಜೇಶ್ ವಿಧಿವಶ!
ಚಿತ್ರ ನಿರ್ದೇಶಕ ಹನ್ಸಲ್ ಮೆಹ್ತಾ ತಮ್ಮ ಟ್ಟೀಟ್‌ನಲ್ಲಿ ಸಂತಾಪ ಸೂಚಿಸಿದ್ದಾರೆ ಹಾಗೂ ಅಂತ್ಯಕ್ರಿಯೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. 'ತುಂಬಾ ನೋವಿನಿಂದ ನಿಮ್ಮೊಂದಿಗೆ ನಮ್ಮ ಚಿತ್ರರಂಗದ ಹಿರಿಯ ನಟ ಇನ್ನಿಲ್ಲ ಎಂದು ಹೇಳಿಕೊಳ್ಳುವುದಕ್ಕೆ ಬೇಸರವಾಗುತ್ತಿದೆ. ನೋಬೆಲ್ ಸೋಲ್, ಟ್ಯಾಲೆಂಟೆಡ್ ವ್ಯಕ್ತಿ ಆಗಿದ್ದರು ನಮ್ಮ ಶಿವ್ ಸುಬ್ರಹ್ಮಣ್ಯಂ. ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನದಲ್ಲಿ ಅಪಾರ ಸಂಖ್ಯೆಯಲ್ಲಿ ಜನರ ಪ್ರೀತಿಯನ್ನು ಗಳಿಸಿದ್ದರು. ಅವರ ಪತ್ನಿ ದಿವ್ಯಾ, ಅವರ ತಾಯಿ ತಂದೆ, ರೋಹನ್,ರಿನ್ಕಿ ಮತ್ತು ಕುಟುಂಬಕ್ಕೆ ದೇವರು ಶಕ್ತಿ ಕೊಡಲು ಎಂದು ಪಾರ್ಥಿಸುತ್ತೇನೆ. ಶಿವ್ ಅವರ ಅಂತಿಮ ಯಾತ್ರೆ ಶಿಶಿರಾ, ಯಮುನಾ ನಗರ್,ಲೋಕಂದ್‌ವಾಲಾ ಬ್ಯಾಕ್ ರೋಡ್, ಆಂಧೇರಿ ವೆಸ್ ಸಾಗಲಿದೆ ಬೆಳಗ್ಗೆ 10 ಗಂಟೆಯಿಂದ ಶುರುವಾಗಲಿದೆ. ಅಂತಿಮಕ್ರಿಯೆ 11 ಗಂಟೆಗೆ ಮೋಕ್ಷದಾಮ ಆಂಧೇರಿನಲ್ಲಿ ನಡೆಯಲಿದೆ' ಎಂದು ಬರೆದುಕೊಂಡಿದ್ದರು.
ಹಜಾರೋನ್ ಖ್ವೈಶೆನ್ ಒಂದು ರಾಜಕೀಯ ನಾಟಕ ಚಿತ್ರಕ್ಕೆ ಶಿವ ಸುಬ್ರಹ್ಮಣ್ಯಂ ಅವರು ಕಥೆ ಮತ್ತು ಚಿತ್ರಕಥೆಯನ್ನು ಬರೆದಿದ್ದರು, ಉತ್ತಮ ವಿಮರ್ಶೆ ಪಡೆದುಕೊಂಡು ಆರು ತಿಂಗಳಲ್ಲಿ 12 ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಲಾಯಿತ್ತು.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುಕ್ತಿ ಬಂಧನ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿದ್ದರು ಅಲ್ಲಿ ಉದ್ಯಮಿ ಐಎಂ ವಿರಾನಿಯಾಗಿ ಕಾಣಿಸಿಕೊಂಡಿದ್ದರು. ಶಿವ ಅವರ ಕೆಲವು ಚಿತ್ರಗಳಲ್ಲಿ ರಾಕಿ ಹ್ಯಾಂಡ್ಸಮ್, ಉಂಗ್ಲಿ, ಕಮಿನೆ 1942: ಎ ಲವ್ ಸ್ಟೋರಿ ಮತ್ತು 2 ಸ್ಟೇಟ್ ಸಿನಿಮಾ ಜನಪ್ರಿಯತೆ ತಂದುಕೊಟ್ಟಿತ್ತು.
