ನಾನು ತಂದೆ ಆಗಬೇಕು ಆದರೆ...; ಮಗು ಪಡೆಯುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್

ನಾನು ತಂದೆ ಆಗಬೇಕು ಆದರೆ  ಭಾರತದ ಕಾನೂನು ಅವಕಾಶ ನೀಡುತ್ತಿಲ್ಲ ಎಂದು ಮಗು ಪಡೆಯುವ ಆಸೆ ವ್ಯಕ್ತಪಡಿಸಿದ ಸಲ್ಮಾನ್ ಖಾನ್ 

Bollywood Actor Salman Khan says he wants to be a dad but Indian law does not allow it sgk

ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸ್ಟಾರ್ ಸಲ್ಮಾನ್ ಮದುವೆ ವಿಚಾರವಾಗಿ ಇನ್ನೂ ಸುದ್ದಿಯಾಗುತ್ತಲೇ ಇದ್ದಾರೆ. ಈಗಲೂ ಸಲ್ಮಾನ್ ಖಾನ್‌ಗೆ ಮದುವೆ ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತಲೆ ಇರುತ್ತೆ. ಇದೀಗ ಮತ್ತೆ ಸಲ್ಮಾನ್ ಖಾನ್ ಮದುವೆ ಮತ್ತು ಮಗು ಪಡೆಯುವ ವಿಚಾರವಾಗಿ ಮಾತನಾಡಿದ್ದಾರೆ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದ್ಯ  ಕಿಸಿ ಕಾ ಭಾಯ್ ಕಿಸಿ ಜಾನ್ ಸಿನಿಮಾದ ಸಕ್ಸಸ್‌ನ ಖುಷಿಯಲ್ಲಿದ್ದಾರೆ. ಇದೇ ಸಂತಸದಲ್ಲಿ ಸಲ್ಮಾನ್ ಖಾನ್ ಪ್ರಸಿದ್ಧ ಆಪ್ ಕಿ ಅದಾಲತ್ ಶೋನಲ್ಲಿ ಭಾಗಿಯಾಗಿದ್ದರು. ರಜತ್ ಶರ್ಮಾ ನಡೆಸಿಕೊಡುವ ಈ ಶೋ ಸಿಕ್ಕಾಪಟ್ಟೆ ಫೇಮಸ್.

ಸಂದರ್ಶನದಲ್ಲಿ ಸಲ್ಮಾನ್ ಖಾನ್ ಪ್ರೀತಿ, ಮದುವೆ ಮತ್ತು ಮಗುವನ್ನು ಪಡೆಯುವ ಬಗ್ಗೆ ಮಾತನಾಡಿದ್ದಾರೆ.  ಪ್ರೀತಿಯಲ್ಲಿ ಅನ್‌ಲಕ್ಕಿ ಎಂದಿರುವ ಸಲ್ಮಾನ್ ಇದೀಗ ಮಗುವನ್ನು ಪಡೆಯುವ ಆಸೆ ಇದೆ ಎಂದು ಹೇಳಿದ್ದಾರೆ. 'ಮಗುವನ್ನು ಪಡೆಯಲು ಯೋಚಿಸಿದ್ದೆ ಆದರೆ ಭಾರತದ ಕಾನೂನು ಅವಕಾಶ ನೀಡುತ್ತಿಲ್ಲ' ಎಂದು ಹೇಳಿದ್ದಾರೆ. 

ಸಲ್ಮಾನ್‌ ಖಾನ್‌ಗೆ ಮಕ್ಕಳೆಂದರೆ ತುಂಬಾ ಪ್ರೀತಿ. ತನ್ನ ತಂಗಿಯ ಮಕ್ಕಳನ್ನು ತುಂಬಾ ಮುದ್ದಾಡುತ್ತಾರೆ, ಇಷ್ಟಪಡುತ್ತಾರೆ. ಸಲ್ಮಾನ್ ಮಕ್ಕಳ ಜೊತೆ ಆಟವಾಡುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ಪ್ರೀತಿಯಲ್ಲಿ ನಾನು ಅನ್‌ಲಕ್ಕಿ, ಈಗ ಕೇವಲ ಭಾಯ್ ಅಷ್ಟೆ; ಸಲ್ಮಾನ್ ಖಾನ್

ಮಕ್ಕಳನ್ನು ಪಡೆಯುವ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್ 'ಏನು ಹೇಳಬೇಕು, ಮಗುವನ್ನು ಪಡೆಯಬೇಕು  ಎನ್ನವ ಯೋಜನೆ ಇತ್ತು. ಆದರೆ ಭಾರತೀಯ ಕಾನೂನಿನ ಪ್ರಕಾರ, ಅದು ಸಾಧ್ಯವಿಲ್ಲ. ಈಗ ನಾವು ಏನು ಮಾಡಬೇಕೆಂದು ನೋಡೋಣ' ಎಂದು ಹೇಳಿದರು. ಕರಣ್ ಜೋಹರ್ ಇಬ್ಬರೂ ಮಕ್ಕಳ ತಂದೆಯಾಗಿದ್ದಾರೆ. ಆ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, 'ಅದನ್ನೇ ನಾನು ಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ, ಆ ಕಾನೂನು ಬದಲಾಗಿರಬಹುದು, ನೋಡೋಣ. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಆದರೆ ಮಕ್ಕಳು ಬಂದಾಗ ಅವರ ತಾಯಿ ಕೂಡ ಬರುತ್ತಾರೆ. ಅವರಿಗೆ ತಾಯಿ ಒಳ್ಳೆಯದು ಆದರೆ ನಮ್ಮ ಮನೆಯಲ್ಲಿ ಬಹಳಷ್ಟು ತಾಯಂದಿರಿದ್ದಾರೆ. ನಮಗೆ ಇಡೀ ಜಿಲ್ಲೆ, ಇಡೀ ಗ್ರಾಮವಿದೆ. ಅವರೇ ನೋಡಿಕೊಳ್ಳುತ್ತಾರೆ. ಆದರೆ ನನ್ನ ಮಗುವಿನ ನಿಜವಾದ ತಾಯಿ ನನ್ನ ಹೆಂಡತಿಯೂ ಆಗಿರುತ್ತಾರೆ' ಎಂದು ಹೇಳಿದ್ದಾರೆ. 

ಐಶ್ವರ್ಯಾನ ಕಿತ್ತಾಕಿ ಕತ್ರಿನಾನ ಹಾಕೊಳ್ಳಿ; ನಿರ್ದೇಶಕ ಬನ್ಸಾಲಿಗೆ ಸಲ್ಮಾನ್ ಖಾನ್ ಹೇಳಿದ್ದ ಮಾತು ಈಗ ವೈರಲ್

ಪ್ರೀತಿ ಬಗ್ಗೆ ಮಾತು 

'ಪ್ರೀತಿಯಲ್ಲಿ ನಾನು ಅನ್ ಲಕ್ಕಿ. ಈಗ ನಾನು ಕೇವಲ ಭಾಯಿ ಅಷ್ಟೇ ಸರ್' ಎಂದು ಹೇಳಿದ ಸಲ್ಮಾನ್ ಖಾನ್, 'ನನ್ನನ್ನು ಜಾನ್ ಎಂದು ಕರೆಯಲಿ ಅಂತ ನಾನು ಬಯಸಿದವಳು ಕೂಡ ನನ್ನನ್ನು ಭಾಯ್ ಎಂದು ಕರೆಯುತ್ತಾಳೆ. ನಾನೇನು ಮಾಡಲಿ?' ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios