ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂದ್ರಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಆರೋಪಿ ಶರೀಫುಲ್ಲಾ ಇಸ್ಲಾಂ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ: ಜನವರಿಯಲ್ಲಿ ನಟ ಸೈಫ್ ಅಲಿಖಾನ್ ಮೇಲೆ ನಡೆದಿದ್ದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಬಾಂದ್ರಾ ಪೊಲೀಸರು ಘಟನೆ ನಡೆದು 3 ತಿಂಗಳ ಬಳಿಕ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ದಾಳಿಕೋರ ಶರೀಫುಲ್ಲಾ ಇಸ್ಲಾಂ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ತಿಳಿಸಲಾಗಿದೆ. ಜ.16ರಂದು ಬಾಂದ್ರಾದಲ್ಲಿನ ಸೈಫ್ ಅಲಿಖಾನ್ ಅವರ 12ನೇ ಮಹಡಿಯ ಅಪಾರ್ಟ್‌ಮೆಂಟ್‌ನಲ್ಲಿ ನುಗ್ಗಿದ್ದ ವ್ಯಕ್ತಿ ಸೈಫ್‌ಗೆ ಚಾಕು ಇರಿದು ಪರಾರಿಯಾಗಿದ್ದನು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜ.19 ರಂದು ಬಾಂಗ್ಲಾ ಪ್ರಜೆ ಶರೀಫುಲ್ಲಾ ಇಸ್ಲಾಂ ಎಂಬಾತನನ್ನು ಥಾಣೆಯಲ್ಲಿ ಬಂಧಿಸಿ, ವಿಚಾರಣೆ ನಡೆಸಿದ್ದರು.
ಇದೀಗ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದು, ದಾಳಿಯ ಸಂದರ್ಭದಲ್ಲಿ ನಟನ ಬೆನ್ನುಮೂಳೆಯ ಬಳಿ ಸಿಲುಕಿಕೊಂಡಿದ್ದ ಚಾಕು ತುಂಡು, ಅಪರಾಧ ಸ್ಥಳದಲ್ಲಿ ಸಿಕ್ಕ ಭಾಗ ಮತ್ತು ಆರೋಪಿಯಿಂದ ವಶಪಡಿಸಿಕೊಂಡ ಚಾಕುವಿಗೆ ಹೊಂದಿಕೆಯಾಗುತ್ತದೆ. ಈ ಅಪರಾಧವು ಗಂಭೀರಾದದ್ದು ಮತ್ತು ಆರೋಪಿಯ ವಿರುದ್ಧ ಬಲವಾದ ಸಾಕ್ಷ್ಯಗಳಿವೆ ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಕೆಲಸ ಕಟ್, ಮದುವೆ ಬ್ರೇಕ್, ಕಳಂಕ
ನಟ ಸೈಫ್ ಆಲಿ ಖಾನ್‌ಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಶಂಕೆ ಆಧಾರದಲ್ಲಿ ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದ ಛತ್ತೀಸ್‌ಗಢ ಮೂಲದ ವ್ಯಕ್ತಿ ಜೀವನವೇ ಇದೀಗ ಕೊಚ್ಚಿ ಹೋಗಿದೆ.
ಇದನ್ನೂ ಓದಿ: ಕರೀನಾ ಕಪೂರ್ ಬಾಳಲ್ಲೂ ಬಿರುಗಾಳಿ? ಮದುವೆ, ವಿಚ್ಛೇದನದ ಬಗ್ಗೆ ಬರೆದುಕೊಂಡ ಸೈಫ್ ಅಲಿ ಖಾನ್ ಪತ್ನಿ!
ಸೈಫ್‌ಗೆ ಚಾಕು ಇರಿತ ಕೇಸಿನ ಆರೋಪಿಯ ಚಹರೆಗೆ ಹೋಲಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಛತ್ತೀಸ್‌ಗಡದಲ್ಲಿ ಚಾಲಕ ಅಕ್ಷಯ್ ಕನೋಜಿಯಾ (31)ನನ್ನು ಮುಂಬೈ ಪೊಲೀಸರ ಸುಳಿವಿನ ಮೇರೆಗೆ ಛತ್ತೀಸ್‌ಗಢ ಪೊಲೀಸರು ವಶಕ್ಕೆ ಪಡೆದು ನಂತರ ವಿಚಾರಣೆ ನಡೆಸಿ ಬಿಡುಗಡೆಗೊಳಿಸಿದ್ದರು. ಪೊಲೀಸರು ವಶಕ್ಕೆ ಪಡೆದ ಬಳಿಕ ನನ್ನ ಫೋಟೋ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಇದರಿಂದ ನನ್ನ ಜೀವನವೇ ಬದಲಾಯಿತು. ಇದ್ದ ಕೆಲಸ ಕಳೆದುಕೊಳ್ಳಬೇಕಾಯಿತು, ಮಾಲೀಕನಿಗೆ ಎಷ್ಟೇ ಸಮುಜಾಯಿಶಿ ನೀಡಿದರೂ ಆತ ಕೇಳುತ್ತಿಲ್ಲ. ಮದುವೆ ಮಾತುಕತೆಯೂ ಮುರಿದುಬಿತ್ತು ಮತ್ತು ತನ್ನ ಕುಟುಂಬ ಸಂಕಷ್ಟ ಎದುರಿಸಬೇಕಾಯಿತು ಎಂದು ಆಕಾಶ್ ಅವಲತ್ತುಕೊಂಡಿದ್ದಾರೆ.
ಇದನ್ನೂ ಓದಿ: ₹50,000 ಕೋಟಿ ಆಸ್ತಿ ಇದ್ರೂ ಸರಳ ಬದುಕು ನಡೆಸ್ತಾರೆ ರಾಜಮನೆತನದ ಈ ಹೀರೋ: ಅಷ್ಟಕ್ಕೂ ಯಾರಿದು?
