ಕರೀನಾ ಮಾತ್ರವಲ್ಲ, ಗರ್ಭಿಣಿಯಾದರೂ ಶೂಟಿಂಗ್ ಮಾಡಿದ ನಟಿಯರಿವರು!
ಕರೀನಾ ಕಪೂರ್ ಮುಂದಿನ ವರ್ಷ ಫೆಬ್ರವರಿಯಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ಆದರೆ, ಅವರ ಪ್ರೆಗ್ನೆಸಿ ಕಾರಣದಿಂದ, 'ಲಾಲ್ ಸಿಂಗ್ ಚಾಡ್ದಾ' ಚಿತ್ರದ ನಿರ್ಮಾಪಕರು ಆತಂಕಕ್ಕೊಳಗಾಗಿದ್ದಾರೆ. ವಾಸ್ತವವಾಗಿ, ಈ ಚಿತ್ರದಲ್ಲಿ ಕರೀನಾರದ್ದು ಲೀಡ್ ರೋಲ್. ಚಿತ್ರದ ಹೆಚ್ಚಿನ ಭಾಗವಿನ್ನೂ ಶೂಟ್ ಆಗಿಲ್ಲ. ಆದರೆ ನಟಿಯ ಬೇಬಿ ಬಂಪ್‌ನಿಂದಾಗಿ, ತಯಾರಕರು ಈಗ ಚಿತ್ರದ ಶೂಟಿಂಗ್‌ನಲ್ಲಿ ಸಮಸ್ಯೆಗಳನ್ನುಎದುರಿಸಬಹುದು. ಬೇಬಿ ಬಂಪ್ ಅನ್ನು ಮರೆಮಾಚಲು, ತಯಾರಕರು ಕಂಪ್ಯೂಟರ್ ಗ್ರಾಫಿಕ್ಸ್ ಅನ್ನು ಆಶ್ರಯಿಸಬಹುದು ಎನ್ನಲಾಗುತ್ತಿದೆ. ಈ ಪ್ರೆಗ್ನೆನ್ಸಿಯಿಂದ ಸಮಸ್ಯೆ ಎದುರಿಸಿದ ನಟಿಯರಿವರು.
ಅಂದಹಾಗೆ, ಶೂಟಿಂಗ್ ಸಮಯದಲ್ಲಿ ನಟಿಯರು ತಮ್ಮ ಪ್ರೆಗ್ನಸಿಯನ್ನು ಬಹಿರಂಗಪಡಿಸುವುದು ಇದೇ ಮೊದಲಲ್ಲ. ಇಲ್ಲಿದ್ದಾರೆ ಚಿತ್ರದ ಪ್ರೋಜೆಕ್ಟ್ ಮಧ್ಯದಲ್ಲಿಯೇ ಗರ್ಭೀಣಿಯರಾದ ಬಾಲಿವುಡ್ ನಟಿಯರು.
'ವೀರಾ ದೆ ವೆಡ್ಡಿಂಗ್' ಚಿತ್ರದ ಶೂಟಿಂಗ್ ವೇಳೆ ಕರೀನಾ ಕಪೂರ್ ಗರ್ಭಿಣಿಯಾದರು. ಆದರೆ ನಂತರವೂ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಯೇ ವಿರಾಮ ತೆಗೆದುಕೊಂಡರು.
2010 ರಲ್ಲಿ, 'ವಿ ಆರ್ ಫ್ಯಾಮಿಲಿ' ಚಿತ್ರದ ಶೂಟಿಂಗ್ ಸಮಯದಲ್ಲಿ ಕಾಜೋಲ್ ಗರ್ಭಿಣಿಯಾದರು. ಈ ಚಿತ್ರದಲ್ಲಿ ಕಾಜೋಲ್ ಮೂರು ಮಕ್ಕಳ ತಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಗರ್ಭಿಣಿಯಾಗಿದ್ದರೂ, ಕಾಜೋಲ್ ಚಿತ್ರದ ಶೂಟಿಂಗ್ ಪೂರ್ಣಗೊಳಿಸಿದ್ದಲ್ಲದೇ, ಪ್ರಮೋಷನ್‌ನಲ್ಲಿ ಸಹ ಭಾಗವಹಿಸಿದ್ದರು. ಅಜಯ್ ದೇವಗನ್ ಕಾಜೋಲ್ ವಿಶ್ರಾಂತಿ ಪಡೆಯಬೇಕೆಂದು ಬಯಸಿದ್ದರೂ, ಕಾಜೋಲ್ ಕೆಲಸ ಮುಂದುವರಿಸಿದರು. ಚಿತ್ರದ ನಂತರ ಕಾಜೋಲ್ ಮಗ ಯುಗ್‌ಗೆ ಜನ್ಮ ನೀಡಿದರು.
'ಹೀರೋಯಿನ್' ಚಿತ್ರದ ಶೂಟಿಂಗ್ ಸಮಯದಲ್ಲಿ ಐಶ್ವರ್ಯಾ ರೈ ಗರ್ಭಿಣಿಯಾದ ಕಾರಣದಿಂದ ಚಿತ್ರದ ಶೂಟಿಂಗ್ ಅನ್ನು ನಿಲ್ಲಿಸಲಾಯಿತು. ಈ ಚಿತ್ರದ ಕೆಲವು ದೃಶ್ಯಗಳು ಐಶ್ವರ್ಯಾ ಅವರೊಂದಿಗೆ ಶೂಟ್ ಆಗಿದ್ದವು. ಚಿತ್ರದಲ್ಲಿ ಕರೀನಾ ಕಪೂರ್ ಅವರ ಸ್ಥಾನವನ್ನು ನಿರ್ವಹಿಸಿದರು.
ಜಯಾ ಮತ್ತು ಅಮಿತಾಬ್ 'ಶೋಲೆ' ಚಿತ್ರಕ್ಕೂ ಮೊದಲೇ ಮದುವೆಯಾಗಿದ್ದರು ಮತ್ತು ಚಿತ್ರದ ಶೂಟಿಂಗ್ ಸಮಯದಲ್ಲಿ ಜಯಾ ಗರ್ಭಿಣಿಯಾಗಿದ್ದರು. ಜಯಾ ಬಚ್ಚನ್‌ರ ಬೇಬಿ ಬಂಪ್ ಈ ಚಿತ್ರದ ಒಂದು ದೃಶ್ಯದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ. ನಂತರ ಮಗಳು ಶ್ವೇತಾಳಿಗೆ ಜನ್ಮ ನೀಡಿದರು.
1995ರಲ್ಲಿ ಉದ್ಯಮಿ ಜೈ ಮೆಹ್ತಾಳನ್ನು ವಿವಾಹವಾದ ಜುಹಿ ಚಲನಚಿತ್ರಗಳಲ್ಲಿ ಕೆಲಸ ಮಾಡುವುದು ಬಿಡಲಿಲ್ಲ. ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗಲೇ ಜುಹಿ ಅಮೆರಿಕ ದ ಸ್ಟೇಜ್ ಶೋ ಪ್ರಪೋಸಲ್ ಒಪ್ಪಿಕೊಂಡಿದ್ದರು. ಝೇಂಕರ್ ಬೀಟ್ಸ್' ಚಿತ್ರದ ಸಮಯದಲ್ಲಿ ಎರಡನೇ ಬಾರಿ ಜುಹಿ ಗರ್ಭಿಣಿಯಾಗಿದ್ದಳು.
ಯಾವುದೇ ಪರಿಸ್ಥಿತಿಯಲ್ಲಿ ತನ್ನ ಕೆಲಸದಲ್ಲಿ ರಾಜಿ ಮಾಡಿಕೊಳ್ಳದ ನಟಿಯರಲ್ಲಿ ಮಾಧುರಿ ದೀಕ್ಷಿತ್ ಕೂಡ ಒಬ್ಬರು. ವಾಸ್ತವವಾಗಿ, 'ದೇವದಾಸ್' ಚಿತ್ರದ ಸಮಯದಲ್ಲಿ ಪ್ರೆಗ್ನೆಂಟ್ ಆಗಿದ್ದ ಮಾಧುರಿ 'ಹಂಪೆ ಯೆ ಕಿಸ್ನೆ ಹರ್ ರಂಗ್ ಡಲಾ' ಹಾಡಿಗೆ ಉತ್ತಮವಾಗಿಯೇ ಡ್ಯಾನ್ಸ್ ಮಾಡಿದರು.
'ಜುದಾಯಿ' ಚಿತ್ರದ ಶೂಟಿಂಗ್ ವೇಳೆ ಶ್ರೀದೇವಿ ಗರ್ಭಿಣಿಯಾಗಿದ್ದರು. ಆ ಸಮಯದಲ್ಲಿ ಅವರು ತನ್ನ ಹಿರಿಯ ಮಗಳು ಜಾನ್ವಿ ಕಪೂರ್‌ಗೆ ಜನ್ಮ ನೀಡಲಿದ್ದರು. ಆ ಸಮಯದಲ್ಲಿ ನಿರ್ಮಾಪಕ ಬೋನಿ ಕಪೂರ್ ಹಾಗೂ ಶ್ರೀದೇವಿ ಇನ್ನೂ ಮದುವೆಯಾಗಿರಲಿಲ್ಲ. ಗರ್ಭಿಣಿಯಾದ ನಂತರ ಶ್ರೀದೇವಿ ಮತ್ತು ಬೋನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
'ಐ ಆಮ್' ಚಿತ್ರದ ಶೂಟಿಂಗ್ ಸಮಯದಲ್ಲಿ ಗರ್ಭಿಣಿಯಾಗಿದ್ದ ನಟಿ ಮತ್ತು ನಿರ್ದೇಶಕಿ ನಂದಿತಾ ದಾಸ್ ಮನೆಯಲ್ಲಿ ವಿಶ್ರಾಂತಿ ಪಡೆಯುವ ಬದಲು ಶೂಟಿಂಗ್‌ಗೆ ಹೋಗುವುದು ಉತ್ತಮ ಎಂದು ಭಾವಿಸಿದರು. ಈ ಚಿತ್ರದಲ್ಲಿ ನಂದಿತಾ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಹೆಣ್ಣು, ತಾಯಿಯಾಗಬೇಕೆಂದು ಬಯಸಿದ್ದ ಹುಡುಗಿಯ ಪಾತ್ರವನ್ನು ಮಾಡಿದ್ದಾರೆ.
'ಓಂ ಶಾಂತಿ ಓಂ' ಚಿತ್ರವನ್ನು ನಿರ್ದೇಶಿಸುವಾಗ ಗರ್ಭಿಣಿಯಾಗಿದ್ದ ಫರ್ಹಾ ಖಾನ್ ಕೆಲಸವನ್ನು ಮುಂದುವರೆಸಿದರು. ಫರ್ಹಾ ನಂತರ 3 ಮಕ್ಕಳಿಗೆ ಜನ್ಮ ನೀಡಿದರು, ಅವರಲ್ಲಿ ಒಬ್ಬ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳು.
ರೋಟಿ ಕಪ್ಡಾ ಔರ್ ಮಕಾನ್ ಚಿತ್ರದ ಶೂಟಿಂಗ್ ಸಮಯದಲ್ಲಿ ಮೌಶುಮಿ ಚಟರ್ಜಿ ಪ್ರೆಗ್ನೆಂಟ್ ಇದ್ದರು. ಮನೋಜ್ ಕುಮಾರ್ ಮುಖ್ಯ ಪಾತ್ರದಲ್ಲಿದ್ದ ಈ ಚಿತ್ರದಲ್ಲಿ ಮೌಸುಮಿಯೊಂದಿಗೆ ಅತ್ಯಾಚಾರದ ದೃಶ್ಯವನ್ನು ಚಿತ್ರೀಕರಿಸಬೇಕಿತ್ತು. ಆ ಸಮಯದಲ್ಲಿ ಇದು ಗರ್ಭಿಣಿಯಾಗಿದ್ದರಿಂದ ಮತ್ತು ಆರೋಗ್ಯವೂ ಸರಿಯಿರದ ಕಾರಣ ಅತ್ಯಾಚಾರದ ದೃಶ್ಯವನ್ನು ಹೇಗೆ ಚಿತ್ರೀಕರಿಸುವುದು ಎಂಬ ಬಗ್ಗೆ ಮೌಶುಮಿ ಚಿಂತಿತರಾಗಿದ್ದರು. ಆದಾಗ್ಯೂ, ಈ ದೃಶ್ಯವನ್ನು ಆಮೇಲೆ ಶೂಟ್ ಮಾಡಲಾಯಿತು.
ಕೊಂಕಣಾ ಸೇನ್‌ರ ಪ್ರೆಗ್ನೆಸಿ ಸಮಯದಲ್ಲಿಯೇ ರಾಹತ್ ಅಥವಾ ರಂಗ್ ಚಿತ್ರವನ್ನು ಶೂಟ್ ಮಾಡಲಾಗಿತ್ತು. ಫೋಟೊಶೂಟ್ ಕೂಡ ಮಾಡಲಾಯಿತು. ಚಿತ್ರದ ಪ್ರಚಾರದಲ್ಲೂ ಅವರು ಭಾಗಿಯಾಗಿದ್ದರು.