ಬಾಲಿವುಡ್ ನಟ, ಕೇಸರಿ ಹೀರೋ ಅಕ್ಷಯ್ ಕುಮಾರ್ ವೋಟ್ ಮಾಡದ್ದಕ್ಕೆ ಟ್ರೋಲ್ ಆಗುತ್ತಿದ್ದಾರೆ. 

ಬಾಲಿವುಡ್ ಈ ಸೆಲಬ್ರಿಟಿಗಳಿಗಿಲ್ಲ ವೋಟ್ ಹಾಕುವ ಅಧಿಕಾರ!

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನದಲ್ಲಿ ಬಾಲಿವುಡ್ ನ ಐಶ್ವರ್ಯಾ ರೈ, ಅಜಯ್ ದೇವಗನ್, ಕಾಜಲ್, ಪ್ರಿಯಾಂಕ ಚೋಪ್ರಾ, ಕರೀನಾ ಕಪೂರ್, ಅನುಷ್ಕಾ ಶರ್ಮಾ ಸೇರಿದಂತೆ ಸಾಕಷ್ಟು ನಟ-ನಟಿಯರು ವೋಟ್ ಮಾಡಿದ್ದಾರೆ. ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ವೋಟ್ ಮಾಡಿ ಶಾಹಿ ಹಾಕಿರುವ ಬೆರಳನ್ನು ತೋರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಅಕ್ಷಯ್ ಕುಮಾರ್ ಎಲ್ಲಿ? ಅವರು ವೋಟ್ ಮಾಡಿಲ್ವಾ? ವೋಟ್ ಮಾಡಲು ನಿಮ್ಮ ಪತಿಯನ್ನು ಕರೆದುಕೊಂಡು ಹೋಗಿಲ್ವಾ? ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. 

 

ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮದ ಬಗ್ಗೆ ಅಕ್ಷಯ್ ಕುಮಾರ್ ಯಾವಾಗಲೂ ಮಾತನಾಡುತ್ತಿರುತ್ತಾರೆ. ದೇಶ ಪ್ರೇಮ ಸಾರುವ ಕೇಸರಿ, ಟಾಯ್ಲೆಟ್;ಏಕ್ ಪ್ರೇಮ್ ಕಥಾ, ಏರ್ ಲಿಫ್ಟ್ ನಂತಹ ಸಿನಿಮಾವನ್ನು ಕೊಟ್ಟವರು ಅಕ್ಷಯ್ ಕುಮಾರ್. ಇತ್ತೀಚಿಗೆ ಪ್ರಧಾನಿ ಮೋದಿಯವರನ್ನು ಸಂದರ್ಶನ ಮಾಡಿದ್ದರು. ಮತದಾನ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಇವರೇ ವೋಟ್ ಮಾಡದೇ ಇರುವುದು ನೆಟ್ಟಿಗರ ಟ್ರೋಲ್ ಗೆ ಕಾರಣವಾಗಿದೆ. 

'ಅಕ್ಕಿ' ಜೊತೆ ಮೋದಿ ಮಾತುಕತೆ: 'ಮಮತಾ ದೀದಿ ವರ್ಷಕ್ಕೆರಡು ಕುರ್ತಾ ಕಳುಹಿಸಿಕೊಡ್ತಾರೆ'

ಆದರೆ ಅಕ್ಷಯ್ ಕುಮಾರ್ ಭಾರತದ ಪ್ರಜೆಯಲ್ಲ. ಅವರು ಕೆನಡಾ ಪ್ರಜೆ ಎಂಬ ಕಾರಣಕ್ಕೆ ವೋಟ್ ಮಾಡಿಲ್ಲ ಎನ್ನಲಾಗಿದೆ.