ಪರಿಶುದ್ಧ ಪ್ರೀತಿಯ ಸಿನಿಮಾ 'ಜಿಂದಗಿ ನಾ ಮಿಲೇಗಿ ದೂಬಾರ'. ಸ್ನೇಹದ ಬಾಂಧವ್ಯ ಬೆಸೆಯುವ ಸಿನಿಮಾ. ಒಬ್ಬ ನಟನ ಜೀವನಕ್ಕೆ ಈ ಚಿತ್ರವೇ ಮುಳುವಾಯ್ತಾ?
ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾ 'ಜಿಂದಗಿ ನಾ ಮಿಲೇಗಿ ದೂಬಾರ'. ಮೂವರು ಆಪ್ತ ಸ್ನೇಹಿತರು ಸಾಹಸ ಪ್ರವಾಸಕ್ಕೆ ತೆರಳಿ ತಮ್ಮ ಸಂಗಾತಿಯನ್ನು ಭೇಟಿ ಮಾಡುವ ಮಧುರ ಕ್ಷಣಗಳನ್ನು ನೆನಪಿಸಿಕೊಂಡರೆ, ನಿಜಕ್ಕೂ ಸಿನಿಮಾ ತೆರೆ ಕಂಡು 9 ವರ್ಷ ಕಳೆದಿದೆ ಎಂಬುದನ್ನು ನಂಬುವುದೂ ಅಸಾಧ್ಯ. ನಿರ್ದೇಶಕಿ ಜೋಯಾ ಅಖ್ತರ್ ಕೈ ಚಳಕದಲ್ಲಿ ಮೂಡಿ ಬಂದ ಈ ಚಿತ್ರದಲ್ಲಿ ಹೃತಿಕ್ ರೋಷನ್, ಅಭಯ್ ಡಿಯೋಲ್, ಫರಾನ್ ಅಖ್ತರ್, ಕತ್ರಿನಾ ಕೈಫ್, ಕಲ್ಕಿ ಕೊಚ್ಚಿನ್ ಮಿಂಚಿದ್ದಾರೆ.
ಪೂಜಾ ಮದುವೆ ಆಗಿದ್ದು ಒಬ್ರನ್ನ ಆದ್ರೆ ಗೂಗಲ್ ತೋರಿಸ್ತಾ ಇರೋದೇ ಇನ್ನೊಬ್ರನ್ನ!
ಈಗೇನು ವಿವಾದ?
ನಟ ಸುಶಾಂತ್ ಸಿಂಗ್ ಅಗಲಿಕೆ ನಂತರ ಬಾಲಿವುಡ್‌ನ ಅನೇಕ ನಟ-ನಟಿಯರು ಚಿತ್ರೋದ್ಯಮದಲ್ಲಿ ನಡೆಯುತ್ತಿರುವ ಮಾಫಿಯಾದ ಬಗ್ಗೆ ಬಹಿರಂಗವಾಗಿ ಮಾತನಾಡಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಹಿಸ್ಟರಿ ಕ್ರಿಯೇಟ್ ಮಾಡಿರುವ ಸಿನಿಮಾ ಜಿಂದಗಿ ನಾ ಮಿಲೇಗಿ ದೂಬಾರ ಬಗ್ಗೆ ಮಾತನಾಡಿರುವುದು ನಿಜಕ್ಕೂ ಎಲ್ಲಿರಿಗೂ ಶಾಕ್ ಆಗಿದೆ.

ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳುತ್ತಿರುವ ನಟ ಅಭಯ್ ಡಿಯೋಲ್ ಅವಾರ್ಡ್ ಕಾರ್ಯಕ್ರಮಗಳನ್ನು ನಡೆಸುವಾಗ ನಡೆಯುವ ಬ್ಯಾಕ್ ಗ್ರೌಂಡ್ ಡೀಲಿಂಗ್ ಬಗ್ಗೆ ಮಾತನಾಡಿದ್ದಾರೆ. ಸದಾ ನೇರ ನುಡಿ ಯಾರಿಗೂ ಕೆಟ್ಟದ್ದನ್ನು ಬಯಸದೆ ಇದ್ದ ನಟ ಅಭಿಯ್ ಮಾತುಗಳನ್ನು ಇನ್ನಿತರೆ ಸಹ ನಟರೂ ಸಮರ್ಥಿಸಿದ್ದಾರೆ.
'ನಾನು ಒಂದು ವಿಚಾರವನ್ನು ನೇರವಾಗಿ ಹೇಳಲು ಇಷ್ಟ ಪಡುತ್ತೇನೆ. ನನ್ನನ್ನು ಹಾಗೂ ಫರಾನ್ ಆಖ್ತರ್‌ನನ್ನು ಲೀಡ್ ರೋಲ್ ಪಟ್ಟಿಯಿಂದ ತೆಗೆದು ಹಾಕಲು ಇಂಥ ಅವಾರ್ಡ್ ಕಾರ್ಯಕ್ರಮಗಳೇ ಕಾರಣ. ನಾವು ಸದಾ ಸಪೋರ್ಟಿಂಗ್ ಪಾತ್ರಧಾರಿಗಳಾಗಿ ಕಾಣಿಸಿಕೊಂಡೆವು. ಹೃತಿಕ್ ಹಾಗೂ ಕತ್ರಿನಾ ಮಾತ್ರ ಚಿತ್ರದ ಪ್ರಮುಖ ಪಾತ್ರಗಳೆಂದು ಪರಿಗಣಿಸಲಾಗಿತ್ತು. ಚಿತ್ರ ಮಾಡಿರುವ ರೀತಿ ಹಾಗೂ ಜನರು ಒಪ್ಪಿಕೊಂಡಿರುವ ರೀತಿ ಒಂದೇ. ಒಬ್ಬ ಹುಡುಗ, ಒಬ್ಬ ಹುಡುಗಿ ಪ್ರೀತಿಸಲು ಆರಂಭಿಸುತ್ತಾರೆ ಹಾಗೂ ಹುಡುಗ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳಲ್ಲೂ ಆತನ ಸ್ನೇಹಿತ ಭಾಗಿಯಾಗಿರುತ್ತಾರೆ. ಆದರೆ ಇದರ ಅರ್ಥವೇ ಬದಲಾಯಿಸುತ್ತಿರುವುದು ಈ ಅವಾರ್ಡ್ ಕಾರ್ಯಕ್ರಮಗಳು' ಎಂದು ಅಭಯ್ ಡಿಯೋಲ್ ಹೇಳಿದ್ದು, ಅಂಥ ಕಾರ್ಯಕ್ರಮಗಳ ಆಯೋಜನೆಯಲ್ಲಿಯೂ ನಡೆಯುವ ಗೋಲ್ ಮಾಲ್ ಬಗ್ಗೆ ಬಹಿರಂಗಗೊಳಿಸಿದ್ದಾರೆ.
ಫೇರ್‌ನಿಂದ ದೂರ:
ಇದನ್ನು ಇಷ್ಟಕ್ಕೆ ಬಿಡದ ಅಭಯ್, ಎಲ್ಲ ಫ್ಯಾಮಿಲಿ ಫೇರ್ (ಚಿತ್ರರಂಗದವರ ನಡುವೆ ನಡೆಯುವ ಅವಾರ್ಡ್ ಕಾರ್ಯಕ್ರಮಗಳು)ನಿಂದ ಹೊರ ಬಂದಿದ್ದಾರೆ. ' ಈ ಅವಾರ್ಡ್ ಕಾರ್ಯಕ್ರಮದ ಹಿಂದೆ ತುಂಬ ನಿಗೂಢ ಚಟುವಟಿಕೆಗಳು ನಡೆಯುತ್ತವೆ. ಇದನ್ನು ಬಹಿರಂಗ ಮಾಡುತ್ತೇನೆ. ಇದರಿಂದ ನಮ್ಮ ಚಿತ್ರರಂಗವನ್ನೇ ಜನರು ದ್ವೇಷಿಸಲು ಆರಂಭಿಸುತ್ತಾರೆ. ನಾನು ಇದರಿಂದ ದೂರು ಬಂದೆ. ಆದರೆ ಕಾರಣಾಂತರಗಳಿಂದೆ ಫರಾನ್ ಅಖ್ತರ್ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಗಿದೆ,' ಎಂದು ಹೇಳಿದ್ದಾರೆ.

ಈ ಹಿಂದೆಯೂ ಅಭಯ್ ಡಿಯೋಲ್ ಫೇರ್‌ನೆಸ್ ಕ್ರೀಮ್ ಜಾಹಿರಾತುಗಳಲ್ಲಿ ಸಿನಿಮಾ ತಾರೆಯರು ಕಾಣಿಸಿಕೊಳ್ಳುವ ಬಗ್ಗೆ ಧ್ವನಿ ಎತ್ತಿದ್ದರು. ಆದರೆ ಅಂದೂ ಬಿ-ಟೌನ್‌ನಲ್ಲಿ ನಡೆಯುವ ರಾಜಕಾರಣದ ಮಾತುಗಳನ್ನು ಜನರು ನಂಬದಂತೆ ಮಾಡಿತ್ತು.
ಒಟ್ಟಿನಲ್ಲಿ ಯುವ, ಭರವಸೆಯ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾದ ಕಾರಣ, ಇದೀಗ ಒಂದೊಂದಾಗಿ ಬಾಲಿವುಡ್‌ನ ಹುಳುಕುಗಳು ತೆರೆದುಕೊಳ್ಳುತ್ತಿವೆ. ಧೈರ್ಯವಾಗಿ ಎಲ್ಲರೂ ಮಾತನಾಡಲು ಆರಂಭಿಸಿದ್ದಾರೆ. ನೋಡಬೇಕು, ಯಾರ ಯಾರ ಬಂಡವಾಳ ಏನು, ಎಲ್ಲವೂ ಹೇಗೆ ಹೊರ ಬರುತ್ತೆ ಎಂಬುದನ್ನು. 2-3 ಗಂಟೆಗಳ ಕಾಲ ಜನರನ್ನು ರಂಜಿಸುವ ನಟ, ನಟಿಯರಲ್ಲಿ ಇಷ್ಟು ನೋವುಗಳು ಇರುತ್ತವಾ? ದೊಡ್ಡ ಮಹಾನ್ ಹೀರೋಗಳಂತೆ ನಟಿಸುವ ಇವರ ಹೃದಯದಲ್ಲಿ ಇಷ್ಟೊಂದು ಹುಳುಕುಗಳು ತುಂಬಿವೆಯಾ? ಒಟ್ಟಿನಲ್ಲಿ ಅಂಡರ್‌ಗ್ರೌಂಡ್ ಮಾಫಿಯಾದ ಲಿಂಕ್ ಇರುವ ಬಗ್ಗೆ ಕೇಳಿದ್ದ ಭಾರತೀಯರಿಗೆ, ಅದನ್ನು ಹೊರತು ಪಡಿಸಿ ಮತ್ತೂ ಒಂದಿಷ್ಟು ರಾಜಕಾರಣವೂ ಬಾಲಿವುಡ್‌ನಲ್ಲಿ ಬೆಸೆದಿದೆ. ಅದು ಅಲ್ಲಿರುವ ಕೆಲವು ಪ್ರತಿಭಾನ್ವಿತರನ್ನು ತಿಂದು ತೇಗುತ್ತಿದೆ, ಎಂಬುವುದು ಅರಿವಿಗೆ ಬರುತ್ತಿದೆ.
