ಸಹೋದರನಿಗೆ ಬರ್ತ್‌ಡೇ ವಿಶ್ ಮಾಡಿದ ಬಾಬಿ ಡಿಯೋಲ್ ಏನೀ ಬರ್ತ್‌ಡೇ ವಿಶ್‌ನ ವಿಶೇಷತೆ ?

ಬರ್ತ್‌ಡೇ ಅಲರ್ಟ್. ನಟ ಸನ್ನಿ ಡಿಯೋಲ್ ಅವರಿಗಿಂದು ಹ್ಯಾಪಿ ಬರ್ತ್‌ಡೇ. ಸನ್ನಿ ಡಿಯೋಲ್ ಅವರ ಕಿರಿಯ ಸಹೋದರ, ನಟ ಬಾಬಿ ಡಿಯೋಲ್ ಷ್ಪೆಷಲ್ ವಿಶ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡ ಬಾಬಿ ಡಿಯೋಲ್, ಜನ್ಮದಿನದ ಶುಭಾಶಯಗಳು, ಭಯ್ಯಾ, ನೀವು ನನ್ನ ಜಗತ್ತು ಎಂದು ಬರೆದಿದ್ದಾರೆ.

ಇದಕ್ಕೆ ಹೃದಯದ ಎಮೋಜಿಗಳ ಮಹಾಪೂರವಬೇ ಹರಿದುಬಂದಿದೆ. ಫೋಟೋ ವಿಶ್‌ಗೆ ಲಗತ್ತಿಸಲಾದ ಫೋಟೋ ಒಡಹುಟ್ಟಿದ ಪ್ರೀತಿಯನ್ನು ತೋರಿಸುತ್ತದೆ. ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಮತ್ತು ಅವರ ಸಹೋದರಿಯರಾದ ಅಜಿತಾ ಡಿಯೋಲ್ ಮತ್ತು ವಿಜೇತಾ ಡಿಯೋಲ್ ಅವರನ್ನು ಒಟ್ಟಿಗೆ ಅಪ್ಪುಗೆಯಿಂದ ಕೂಡಿರುವ ಫೊಟೋ ಕ್ಯೂಟ್ ಆಗಿದೆ.

Photos: ಶಾರುಖ್ ಖಾನ್ ಐಷಾರಾಮಿ ವ್ಯಾನಿಟಿ ವ್ಯಾನ್ ಇದು!

ಒಡಹುಟ್ಟಿದವರ ಸಂಭ್ರಮವನ್ನು ನೋಡಿ ಅಭಿಮಾನಿಗಳು ಹರ್ಷಗೊಂಡಿದ್ದಾರೆ. ಹಾರ್ಟ್ ಮತ್ತು ಕೇಕ್ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದಾರೆ. ಚಿತ್ರಕ್ಕೆ ಉತ್ತರಿಸುತ್ತಾ, ನಟ ದರ್ಶನ್ ಕುಮಾರ್, ಹುಟ್ಟುಹಬ್ಬದ ಶುಭಾಶಯಗಳು ಸನ್ನಿ ಸರ್ ಎಂದು ಬರೆದಿದ್ದಾರೆ.

View post on Instagram

ಬಾಬಿ ಡಿಯೋಲ್ ಅವರ ಇನ್‌ಸ್ಟಾಗ್ರಾಮ್ ಟೈಮ್‌ಲೈನ್ ನೋಡಿದರೆ ಅವರಿಗೆ ಕುಟುಂಬದ ಜೊತೆಗಿನ ಸಂಬಂಧ ಗೊತ್ತಾಗುತ್ತದೆ. ಅವರ ಆತ್ಮೀಯರ ಹಲವಾರು ಫೋಟೋಗಳು ಮತ್ತು ವೀಡಿಯೊಗಳೇ ತುಂಬಿರುತ್ತವೆ. ಕೆಲವು ದಿನಗಳ ಹಿಂದೆ, ಅವರ ತಾಯಿ ಪ್ರಕಾಶ್ ಕೌರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಟ ಆಕೆಯೊಂದಿಗೆ ಸೆಲ್ಫಿ ಪೋಸ್ಟ್ ಮಾಡಿದ್ದಾರೆ.

View post on Instagram

ಇತ್ತೀಚೆಗೆ, ಬಾಬಿ ಡಿಯೋಲ್ ಅವರ ತಂದೆ, ಹಿರಿಯ ನಟ ಧರ್ಮೇಂದ್ರ ಅವರು ಹಂಚಿಕೊಂಡ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ಕ್ಲಿಪ್‌ನಲ್ಲಿ ಧರ್ಮೇಂದ್ರ ಅವರ ಮೊದಲ ಕಾರು ಕುರಿತು ಮಾತನಾಡಿದ್ದಾರೆ. ಇದಕ್ಕೆ ಬಾಬಿ ಡಿಯೋಲ್, ಲವ್ ಯು, ಪಾಪಾ. 9144 ಒಂದು ಕಾರು ಮಾತ್ರವಲ್ಲ. ಇದುವರೆಗೆ ನಮ್ಮನ್ನು ಕರೆತಂದ ಪ್ರಯಾಣದ ಸುಂದರ ಸಂಕೇತವಾಗಿದೆ. ಅನೇಕ ಸುಂದರ ನೆನಪುಗಳನ್ನು ಅಲ್ಲಿದೆ ಎಂದಿದ್ದಾರೆ.

View post on Instagram