ಬಾಲಿವುಡ್ ಹಿರಿಯ ನಟನ ಬಗ್ಗೆ ಬಿಜೆಪಿ ಮುಖಂಡ ಟೀಕೆ ಹಿಂದೂ ಹೆಸರಿನಲ್ಲಿ ಬಾಲಿವುಡ್‌ನಲ್ಲಿ ಹಣ ಮಾಡಿದ ಎಂದ ಮುಖಂಡ 

ಮುಂಬೈ(ಜು.08): ಪ್ರಸಿದ್ಧ ನಟ ದಿಲೀಪ್ ಕುಮಾರ್ ತಮ್ಮ 21 ನೇ ವಯಸ್ಸಿನಲ್ಲಿ 2021 ರ ಜುಲೈ 7 ರಂದು ನಿಧನರಾದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳು ದಿವಂಗತ ನಟನಿಗೆ ಗೌರವ ಸಲ್ಲಿಸುತ್ತಿದ್ದಾರೆ.

ಬಿಜೆಪಿ ಹರಿಯಾಣದ ಐಟಿ ಮತ್ತು ಸೋಷಿಯಲ್ ಮೀಡಿಯಾದ ರಾಜ್ಯ ಮುಖ್ಯಸ್ಥ ರಾಜಕಾರಣಿ ಅರುಣ್ ಯಾದವ್ ಅವರು ದಿಲೀಪ್ ಕುಮಾರ್ ಸಾವಿನ ಬಗ್ಗೆ ಟ್ವೀಟ್ ಮಾಡಿ ಟೀಕೆಗೆ ಗುರಿಯಾಗಿದ್ದಾರೆ.

ಪಾಕ್‌ ಗ್ರೀನ್‌ ಸಿಗ್ನಲ್ ಕೊಟ್ರೂ ನನಸಾಗಲೇ ಇಲ್ಲ ದಿಲೀಪ್ ಕುಮಾರ್ ಆ ಆಸೆ!...

ಚಲನಚಿತ್ರ ಜಗತ್ತಿನಲ್ಲಿ ಹಿಂದೂ ಹೆಸರನ್ನು ಇಟ್ಟುಕೊಂಡು ಹಣ ಸಂಪಾದಿಸಿದ ಮೊಹಮ್ಮದ್ ಯೂಸುಫ್ ಖಾನ್ (ದಿಲೀಪ್ ಕುಮಾರ್) ಅವರ ಸಾವು ಭಾರತೀಯ ಚಲನಚಿತ್ರೋದ್ಯಮಕ್ಕೆ ಭರಿಸಲಾಗದ ನಷ್ಟ! ದುಃಖಿತ ಕುಟುಂಬಕ್ಕೆ ಆಳವಾದ ಸಂತಾಪ! ಎಂದು ಟೀಕಿಸಿದ್ದಾರೆ.

Scroll to load tweet…

ನರೇಂದ್ರ ಮೋದಿ ಅವರು ದಿಲೀಪ್ ಕುಮಾರ್ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ, ದಿಲೀಪ್ ಕುಮಾರ್ ಜಿ ಅವರನ್ನು ಸಿನಿಮೀಯ ದಂತಕಥೆ ಎಂದು ನೆನಪಿಸಿಕೊಳ್ಳಲಾಗುವುದು. ತಲೆಮಾರುಗಳ ಪ್ರೇಕ್ಷಕರು ಅವರ ನಟನೆ ಮೆಚ್ಚಿದರು. ಅವರ ನಿಧನ ನಮ್ಮ ಸಾಂಸ್ಕೃತಿಕ ಜಗತ್ತಿಗೆ ನಷ್ಟವಾಗಿದೆ ಎಂದು ಟ್ವೀಟಿಸಿದ್ದಾರೆ.

Scroll to load tweet…