ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಗದ್ದಲ ಸೃಷ್ಟಿಸಿರುವ ಸಿಡಿ ವಿಚಾರದ ಬಗ್ಗೆ ಬಿಗ್‌ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಸಾಕಷ್ಟು ಸುದ್ದಿಯಾಗಿರುವ ಸಿಡಿ ಪ್ರಕರಣದ ಬಗ್ಗೆ ಪ್ರಥಮ್ ಹೇಳಿದ್ದೇನು..?

ಅಧಿವೇಶನಕ್ಕೆ ಅದರದ್ದೇ ಆದ ಗೌರವವಿದೆ.ಕೆಲಸಕ್ಕೆಬಾರದ CD,cameraಯಾರಿಟ್ಟಿದ್ದು? focusಹೋಗಿದೆ,colour correctionಮಾಡ್ಸಿಲ್ಲ.CDಬದಲುpendrive useಮಾಡ್ಬೇಕಿತ್ತು ಅನ್ನೋ ಚರ್ಚೆ ಬೇಡ!ನಾಳಿನ ಅಧಿವೇಶನದಲ್ಲಿ ಅಗತ್ಯವಸ್ತು ಬೆಲೆಏರಿಕೆ,ಅಭಿವೃದ್ಧಿ ಕಾರ್ಯದ ಚರ್ಚೆಯಾಗಲಿ!ಸಾಕಾಗೋಗಿದೆ ಎಂದು ಬೇಸರದಿಂದ ಟ್ವೀಟ್ ಮಾಡಿದ್ದಾರೆ ಪ್ರಥಮ್.

'ಒಬ್ಬೊಬ್ಬರಾಗಿ ಬೆತ್ತಲಾಗುತ್ತಿದ್ದಾರೆ : ಎಫ್‌ಐಆರ್‌ ಹಾಕಿ'

ತಮ್ಮ ಟ್ವೀಟ್‌ನಲ್ಲಿ ಬಿಎಸ್‌ವೈ, ಸಿದ್ದರಾಮಯ್ಯ ಸೇರಿ ಪ್ರಮುಖರನ್ನು ಟ್ಯಾಗ್ ಮಾಡಿದ್ದಾರೆ. ರಾಜ್ಯದಲ್ಲಿ ಸಿಡಿ ಕುರಿತು ಬಹಳಷ್ಟು ಚರ್ಚೆಯಾಗುತ್ತಿದ್ದು, ಇನ್ನಷ್ಟು ಜನರ ಸಿಡಿಗಳಿವೆ ಎಂದ ಮಾತೂ ಕೇಳಿ ಬರುತ್ತಿದೆ.

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ. ರಿಲೀಸ್ ಆಗಿತ್ತು. ಸರ್ಕಾರಿ ಕೆಲಸ ಕೊಡಿಸುತ್ತೇನೆಂದು ಯುವತಿಯನ್ನು ಮಂಚಕ್ಕೆ ಕರೆದಿದ್ದಾರೆ ಎನ್ನಲಾಗಿದೆ.

ರಾಸಲೀಲೆ ಕೇಸ್ : ಬಿಜೆಪಿಯಲ್ಲಿರುವ ರಮೇಶ್ ವಿರೋಧಿಗಳ ಬಗ್ಗೆ ಸತೀಶ್ ಎಚ್ಚರಿಕೆ

ಸಾಮಾಜಿಕ ಕಾರ್ಯಕರ್ತ ದಿನೇಶ್ ಹಲ್ಲಹಳ್ಳಿ ಎನ್ನುವವರು ರಮೇಶ್ ಜಾರಕಿಹೊಳಿ ಅವರ ರಾಸಲೀಲೆ  ಸಿ.ಡಿ. ರಿಲೀಸ್ ಮಾಡಿದ್ದು, ಯುವತಿಯ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ದಿನೇಶ್ ಹಲ್ಲಹಳ್ಳಿ, ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು