ಬೆಳಗಾವಿ (ಮಾ.04):  ಯುವ​ತಿಯನ್ನು ಲೈಂಗಿ​ಕ​ವಾಗಿ ಬಳ​ಸಿ​ಕೊಂಡಿ​ರುವ ಆರೋ​ಪದ ಮೇಲೆ ನೈತಿಕ ಹೊಣೆ ಹೊತ್ತು ರಮೇಶ್‌ ಜಾರಕಿಹೊಳಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪ್ರಕ​ರ​ಣ​ದಲ್ಲಿ ನೈತಿಕತೆಯ ಒಂದು ಹಂತ ಮುಗಿದಿದೆ, ಇನ್ನೇನಿದ್ದರೂ ಕಾನೂನು ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

ಸೋದ​ರನ ರಾಸ​ಲೀಲೆ ಪ್ರಕ​ರಣ ಬಹಿ​ರಂಗ​ವಾದ ಬಳಿಕ ಇದೇ ಮೊದಲ ಬಾರಿ​ಗೆ ಗೋಕಾಕ ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕ​ರ​ಣ​ದ​ಲ್ಲಿ ಜಾರಕಿಹೊಳಿ ಕುಟುಂಬ ಬೆರೆಸುವ ಅವಶ್ಯಕತೆ ಇಲ್ಲ. ಇದು ರಮೇಶ್‌ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರ, ರಮೇಶ್‌ ಜಾರಕಿಹೊಳಿ ಮಂಗ​ಳ​ವಾ​ರ​ವೇ ರಾಜೀನಾಮೆ ನೀಡಿದ್ದರೆ ಚೆನ್ನಾ​ಗಿ​ರು​ತ್ತಿತ್ತು. ಯಾವುದೇ ಆರೋಪ ಬಂದಾಗ ತನಿಖೆ ಆಗುವವರೆಗೂ ತಮ್ಮ ಹುದ್ದೆಗೆ ರಾಜೀ​ನಾಮೆ ನೀಡ​ಬೇಕು. ಆದಷ್ಟುಬೇಗ ಪೊಲೀಸರು ತನಿಖೆ ನಡೆಸಿ ಪ್ರಕ​ರ​ಣಕ್ಕೆ ಸಂಬಂಧಿಸಿ ಸತ್ಯಾಂಶ ಹೊರತರಬೇಕು. ಪ್ರಕ​ರ​ಣ​ದಲ್ಲಿ ಈಗಾಗಲೇ ನೈತಿಕ ಹೊಣೆಹೊತ್ತು ರಮೇಶ್‌ ಜಾರ​ಕಿ​ಹೊಳಿ ರಾಜೀನಾಮೆ ನೀಡಿದ್ದಾರೆ. ಇನ್ನು ಮುಂದೆ ಅವರು ಕಾನೂನು ಹೋರಾಟ ಮಾಡಬೇಕು ಎಂದ​ರು.

ಪಲ್ಲಂಗದಾಟ CD: ಬೇಸರಗೊಂಡು ಪಕ್ಷದ ಕಾರ್ಯಕ್ರಮದಿಂದ ದೂರ ಉಳಿದ ಸಹೋದರ ...  

ಇದೇ ವೇಳೆ ರಮೇಶ್‌ ಜಾರಕಿಹೊಳಿಯವರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಬೇಕು ಎಂದು ಅಭಿ​ಪ್ರಾ​ಯ​ಪ​ಟ್ಟಸಹೋ​ದರ, ಅವರ ಪಕ್ಷದಲ್ಲೂ ಅವ​ರಿಗೆ ಆಗದೇ ಇರುವವರು ಇರ್ತಾರೆ ಎಚ್ಚರಿಕೆಯಿಂದ ಇರಬೇಕು. ಐದಾರು ತಿಂಗಳಿಂದ ನಡೆದ ಘಟನೆ ಇದು. ಪೊಲೀಸರು ಆದಷ್ಟುಬೇಗ ತನಿಖೆ ಮಾಡಿ ಸತ್ಯಾಂಶ ಹೊರ​ತ​ರ​ಬೇಕು ಎಂಬುದು ನಮ್ಮ ಆಗ್ರಹ ಎಂದರು.