ಆರಂಭವಾದಾಗಿನಿಂದಲೂ  ಸಿಕ್ಕಾಪಟ್ಟೆ ಟ್ವಿಸ್ಟ್‌ ಆಂಡ್‌ ಟರ್ನ್‌ಗಳನ್ನು ಪಡೆದುಕೊಂಡು ಸಾಗುತ್ತಿದ್ದ ತೆಲುಗು ಬಿಗ್ ಬಾಸ್ ಸೀಸನ್‌ 4 ಅಂತ್ಯ ಕಂಡಿದೆ. ಕಾಲಿವುಡ್ ನಟ ಆರಿ ಅರ್ಜುನ್ ಮೊದಲ ಸ್ಥಾನ ಪಡೆದುಕೊಂಡರೆ, ಬಾಲಾಜಿ ಮುರುಗದಾಸ್‌ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಬಿಗ್‌ಬಾಸ್‌ ಆರಂಭಕ್ಕೆ ದಿನಾಂಕ್ ಫಿಕ್ಸ್‌; ಇದರಲ್ಲೊಂದಿದೆ ವಿಶೇಷ! 

ಜನವರಿ 17ರಂದು ನಡೆದ ಫಿನಾಲೆ ಹಂತಕ್ಕೆ ಬಾಲಾಜಿ ಮುರುಗದಾಸ್, ಅರಿ ಅರ್ಜುನ್, ರಮ್ಯಾ, ರಿಯೋ ರಾಜ್ ಹಾಗೂ ಸೋಮಶೇಖರ್ ತಲುಪಿದ್ದರು. ಸೀಸನ್‌ 4ರ ಬಿಗ್ ಬಾಸ್‌ ಎನಿಸಿಕೊಂಡಿರುವ ಆರಿ ಅರ್ಜುನ್ 50 ಲಕ್ಷ ರೂ ಹಾಗೂ ಪ್ರಾಯೋಜಕರಿಂದ ಬಹುಮಾನಗಳನ್ನು ಪೆಡದುಕೊಂಡಿದ್ದಾರೆ. 

ಅಕ್ಷತಾ ಪಾಂಡವಪುರ ಮಗಳ ಫೋಟೋ ವೈರಲ್; ಹೇಗಿದ್ದಾಳೆ ಲಕ್ಷ್ಮಿ? 

ಈಗಷ್ಟೇ ಮನೆಯಿಂದ ಹೊರಗೆ ಬಂದಿರುವ ಆರಿ ಅರ್ಜುನ್‌ ಖಾಸಗಿ ಸಂದರ್ಶನಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಬಿಗ್‌ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಬಿಬಿ ಪ್ರವೇಶಿಸುವ ಮುನ್ನವೇ ಜನಪ್ರಿಯತೆ  ಪಡೆದಿದ್ದ ಆರಿ ಈಗ ಯಾವ ಪ್ರಜೆಕ್ಟ್‌ಗೆ ಕೈ ಹಾಕಲಿದ್ದಾರೆ ಎಂದು ಕಾದು ನೋಡಬೇಕಿದೆ.