ಬಟ್ಟೆ ಬಿಚ್ಚುತ್ತಾ ಬೆನ್ನು ತೋರಿಸೋ ಸುಂದರಿ! ಬಾಲಿವುಡ್ ಸಿನಿಮಾದ ಕುತೂಹಲದ ಪೋಸ್ಟರ್ ರಿಲೀಸ್
ಬೆನ್ನಿನ ಭಾಗ ತೋರಿಸುತ್ತಾ, ಬಟ್ಟೆಯನ್ನು ತೆಗೆಯುತ್ತಿರುವಂಥ ಫೋಟೋ ಒಂದು ರಿಲೀಸ್ ಆಗಿದೆ. ಇದು ಬಾಲಿವುಡ್ ಸಿನಿಮಾ ಒಂದರ ಪೋಸ್ಟರ್. ಏನಿದು ವಿಷಯ?

ಒಂದು ಚಿತ್ರ ಹಿಟ್ ಆಗಬೇಕೆಂದರೆ ಹಲವಾರು ರೀತಿಯಲ್ಲಿ ಸರ್ಕಸ್ ಮಾಡುವ ಅನಿವಾರ್ಯತೆ ಇಂದು ಇದೆ. ಎಷ್ಟೇ ದೊಡ್ಡ ಬಜೆಟ್ ಹಾಕಿ ಚಿತ್ರ ಮಾಡಿದರೂ ಅದು ಹಿಟ್ ಆಗುತ್ತದೆ ಎನ್ನಲಾಗದು, ಆದ್ದರಿಂದ ಜನರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿರುವ ನಡುವೆಯೇ ಒಂದು ಚಿತ್ರ ಬ್ಲಾಕ್ಬಸ್ಟರ್ ಎನಿಸಿಕೊಳ್ಳಬೇಕಾದರೆ ನಸೀಬೂ ಇರಬೇಕಾಗುತ್ತದೆ ಎನ್ನುತ್ತಾರೆ ಸಿನಿ ಕ್ಷೇತ್ರದವರು. ಕೆಲವೊಂದು ದೊಡ್ಡ ದೊಡ್ಡ ಸ್ಟಾರ್ಸ್ಗಳನ್ನು (Stars) ಹಾಕಿಕೊಂಡಿ ಸಿನಿಮಾ ಮಾಡಿದರೂ ಫ್ಲಾಪ್ ಎನಿಸಿಕೊಳ್ಳುವುದು ಇದೆ. ಇದೇ ಕಾರಣಕ್ಕೆ ಒಂದು ಚಿತ್ರವನ್ನು ಬಿಡುಗಡೆ ಮಾಡುವ ಪೂರ್ವದಲ್ಲಿ ಅದರ ಪೋಸ್ಟರ್ ರಿಲೀಸ್ನಿಂದ ಹಿಡಿದು, ಟ್ರೇಲರ್, ಟೀಸರ್, ಫಸ್ಟ್ ಲುಕ್... ಹೀಗೆ ಎಲ್ಲವುಗಳಲ್ಲಿಯೂ ಹೊಸಹೊಸ ಬಗೆಯನ್ನು ಮಾಡುವ ಅನಿವಾರ್ಯತೆ ಇಂದು ಇದೆ. ಈಗ ಅಂಥದ್ದೇ ಒಂದು ವಿನೂತನ ರೀತಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ಅದರಲ್ಲಿ ಯುವತಿಯೊಬ್ಬಳು ಬೆನ್ನು ತೋರಿಸುವ ಚಿತ್ರವಿದೆ. ಬಟ್ಟೆ ಬಿಚ್ಚುವಂತೆ ಕಾಣಿಸುತ್ತಿರುವ ಈ ಪೋಸ್ಟರ್ ವೈರಲ್ ಆಗಿದ್ದು, ಅಸಲಿಗೆ ಇದೊಂದು ಸಿನಿಮಾ ಪೋಸ್ಟರ್ ಆಗಿದೆ.
ಹೌದು. ಈ ಚಿತ್ರದ ಹೆಸರು 'ಥ್ಯಾಂಕ್ಯೂ ಫಾರ್ ಕಮಿಂಗ್' (Thank You For Coming). ಚಿತ್ರದ ಶೀರ್ಷಿಕೆಯಂತೆಯೇ ಇದರ ಪೋಸ್ಟರ್ ಕೂಡ ಕುತೂಹಲ ಎನಿಸುವಂತಿದೆ. ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಅವರ ಮುಂಬರುವ ಸಿನಿಮಾ ಇದಾಗಿದ್ದು, ಮೊದಲ ಪೋಸ್ಟರ್‌ನಲ್ಲಿ ಈ ರೀತಿಯ ದೃಶ್ಯವಿದೆ. ಕರಣ್ ಬೂಲಾನಿ ಅವರ ಚೊಚ್ಚಲ ಚಿತ್ರವಾಗಿರುವ ಥ್ಯಾಂಕ್ಯೂ ಫಾರ್ ಕಮಿಂಗ್' ಈಗ ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸುದ್ದಿಯಾಗುತ್ತಿದೆ. ಈ ಚಿತ್ರದಲ್ಲಿ ಭೂಮಿ ಪಡ್ನೇಕರ್, ಸಹನಾಜ್ ಗಿಲ್, ಖುಷ್ ಕಪಿಲಾ, ಡಾಲಿ ಸಿಂಗ್ ಅಭಿನಯಿಸಿದ್ದಾರೆ. ಆದರೆ ಈಗ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಬೆನ್ನು ತೋರಿಸಿರೋ ಆ ಸುಂದರಿ ಯಾರು? ಏಕಿಂತ ಪೋಸ್ಟರ್ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಹೆಣ್ಣಿನ ಎಲ್ಲ ಪಾರ್ಟ್ಸ್ ಮುಗೀತು, ಈ ಹುಡುಗೀಯ ಕಾಲು ವರ್ಣಿಸಿದ ರಾಮ್ ಗೋಪಾಲ್ ವರ್ಮಾ!
ಚಿತ್ರದ ಮೊದಲ ಪೋಸ್ಟರ್‌ನಲ್ಲಿ ಕ್ಯಾಮೆರಾಕ್ಕೆ ಬೆನ್ನೆಲುಬಾಗಿರುವ ಮಹಿಳೆ ಮತ್ತು ಆಕೆಯ ಹಿಂಭಾಗದ (Back) ಅರ್ಧಭಾಗವನ್ನು ತೋರಿಸಲಾಗಿದೆ. ಭೂಮಿ ಪೆಡ್ನೇಕರ್ ತಮ್ಮ ಇನ್‌ಸ್ಟಾದಲ್ಲಿ ಈ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ 'ರಿಯಾ ಕಪೂರ್ ಅವರ ಪತಿ ಕರಣ್ ಬೂಲಾನಿ ಅವರು ಬಂದಿದ್ದಕ್ಕಾಗಿ ಧನ್ಯವಾದ' ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಇಷ್ಟು ಬಿಟ್ಟರೆ ಸಿನಿಮಾದ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕಳೆದ ವರ್ಷ, ಭೂಮಿ ಪೆಡ್ನೇಕರ್ ಮತ್ತು ಅನಿಲ್ ಕಪೂರ್ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಸೂಚಿಸುವ ವರದಿಗಳು ಬಂದಿದ್ದವು. ಈ ಚಿತ್ರದಲ್ಲಿ ಶೆಹನಾಜ್ ಗಿಲ್, ಡಾಲಿ ಸಿಂಗ್, ಕುಶಾ ಕಪಿಲಾ, ಶಿಬಾನಿ ಬೇಡಿ, ಕರಣ್ ಕುಂದ್ರಾ ಮತ್ತು ಸುಶಾಂತ್ ದಿವ್ಗಿಕ್ರ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಥ್ಯಾಂಕ್ಯೂ ಫಾರ್ ಕಮಿಂಗ್ ತಮ್ಮ ಜೈವಿಕ ತಂದೆಯನ್ನು ಹುಡುಕುತ್ತಿರುವ ಇಬ್ಬರು ಹುಡುಗಿಯರ ಸುತ್ತ ಸುತ್ತುತ್ತದೆ. ಚಿತ್ರವು ಆಧುನಿಕ ಸಂಬಂಧಗಳ ಕಥೆಯನ್ನು ಹೇಳುತ್ತದೆ ಎನ್ನಲಾಗಿದೆ. ಬಾಲಾಜಿ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಏಕ್ತಾ ಕಪೂರ್ ಮತ್ತು ಶೋಭಾ ಕಪೂರ್ (Shobha Kapoor) ಜೊತೆಗೆ ರಿಯಾ ಕಪೂರ್ ಈ ಚಿತ್ರ ರಚಿಸಿದ್ದಾರೆ. ಸದ್ಯಕ್ಕೆ, ಚಿತ್ರವು ಇನ್ನೂ ಬೆಳವಣಿಗೆಯ ಹಂತದಲ್ಲಿದೆ. ಏತನ್ಮಧ್ಯೆ, ದಿ ಲೇಡಿ ಕಿಲ್ಲರ್ ಚಿತ್ರದಲ್ಲಿ ಅರ್ಜುನ್ ಕಪೂರ್ ಮತ್ತು ರಾಕುಲ್ಪ್ರೀತ್ ಸಿಂಗ್ ಜೊತೆಗೆ ಭೂಮಿ ಪೆಡ್ನೇಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಅವರು ಕೊನೆಯದಾಗಿ ಅಫ್ವಾದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸೋಲನ್ನು ಅನುಭವಿಸಿತು.
ಆಲಿಯಾ ಮದುವೆ ಮೆಹಂದಿ ಡಿಸೈನ್ಗಾಗಿ ಮಹಿಳೆಯರ ಕಿತ್ತಾಟ! ವಾದ-ಪ್ರತಿವಾದಗಳ ಸುರಿಮಳೆ