Asianet Suvarna News Asianet Suvarna News

'ದೃಶ್ಯಂ-2' ಸಕ್ಸಸ್ ಬಳಿಕ ಮತ್ತೊಂದು ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಅಜಯ್ ದೇವನ್; ಟೀಸರ್ ವೈರಲ್

ನಟ ಅಜಯ್ ದೇವಗನ್ ದೃಶ್ಯಂ-2 ಸಕ್ಸಸ್ ಬಳಿಕ ಸೌತ್‌ನ ಮತ್ತೊಂದು ಸೂಪರ್ ಹಿಟ್ ಸಿನಿಮಾದ ರಿಮೇಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

Bholaa teaser; After Drishyam 2 Success Ajay Devgn Treats Fans With Kaithi Remake sgk
Author
First Published Nov 22, 2022, 1:08 PM IST

ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ನಲ್ಲಿ ರಾರಾಜಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ಸೌತ್ ಸಿನಿಮಾಗಳ ಹವಾ ಜೋರಾಗಿದೆ, ದೇಶ-ವಿದೇಶಗಳಲ್ಲಿ ಸದ್ದು ಮಾಡುತ್ತಿವೆ. ಅಷ್ಟೆಯಲ್ಲ ದಕ್ಷಿಣ ಭಾರತದ ಅನೇಕ ಸಿನಿಮಾಗಳು ಬಾಲಿವುಡ್‌ಗೆ ರಿಮೇಕ್ ಆಗಿವೆ ಮತ್ತು ಆಗುತ್ತಿವೆ. ಇತ್ತೀಚಿಗಷ್ಟೆ ಅಜಯ್ ದೇವನ್ ನಟನೆಯ ದೃಶ್ಯಂ-2 ಸಿನಿಮಾ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಬಾಕ್ಸ್ ಆಫೀಸ್ ನಲ್ಲೂ ದೃಶ್ಯಂ-2 ಭರ್ಜರಿ ಕಮಾಯಿ ಮಾಡಿದೆ. ಅಂದಹಾಗೆ ಈ ಸಿನಿಮಾ ಕೂಡ ಮಲಯಾಳಂನ ಸೂಪರ್ ಹಿಟ್ ದೃಶ್ಯಂ-2 ಸಿನಿಮಾದ ರಿಮೇಕ್ ಆಗಿದೆ. ಮೋಹನ್ ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮೋಹನ್ ಲಾಲ್ ಪಾತ್ರದಲ್ಲಿ ಅಜಯ್ ದೇವಗನ್ ಬಣ್ಣ ಹಚ್ಚಿದ್ದರು. ಸದ್ಯ ಈ ಸಿನಿಮಾ ಹಿಂದಿಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಅಜಯ್ ದೇವಗನ್ ಮತ್ತೊಂದು ಸೌತ್ ಸೂಪರ್ ಹಿಟ್ ಸಿನಿಮಾದ ರಿಮೇಕ್ ನಲ್ಲಿ ನಟಿಸಲು ಸಜ್ಜಾಗಿದ್ದು ಟೀಸರ್ ಕೂಡ ರಿಲೀಸ್ ಆಗಿದೆ. 

ಬಾಲಿವುಡ್ ಸ್ಟಾರ್ಸ್ ಸೌತ್ ಸಿನಿಮಾಗಳ ರಿಮೇಕ್ ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನವ ಆರೋಪದ ನಡುವೆಯೂ ಅಜಯ್ ದೇವಗನ್ ಬ್ಯಾಕ್ ಟು ಬ್ಯಾಕ್ ರಿಮೇಕ್ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ದೃಶ್ಯಂ-2 ಸಕ್ಸಸ್ ಬಳಿಕ ಅಜಯ್ ದೇವಗನ್ ಇದೀಗ ತಮಿಳಿನ ಬ್ಲಾಕ್ ಬಸ್ಟರ್ ಹಿಟ್ ಕೈದಿ ಸಿನಿಮಾದ ರಿಮೇಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ಕೈದಿ 'ಬೋಲಾ' ಹೆಸರಿನಲ್ಲಿ ಹಿಂದಿಗೆ ರಿಮೇಕ್ ಆಗುತ್ತಿದೆ. ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಅಂದಹಾಗೆ ಕೈದಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. 2019ರಲ್ಲಿ ರಿಲೀಸ್ ಆಗಿದ್ದ ಕೈದಿ ಸಿನಿಮಾದಲ್ಲಿ ತಮಿಳು ಸ್ಟಾರ್ ಕಾರ್ತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿತ್ತು. ಅಂದಹಾಗೆ ಇತ್ತೀಚಿಗೆ ರಿಲೀಸ್ ಆದ ಕಮಲ್ ಹಾಸನ್ ನಟನೆಯ ವಿಕ್ರಮ್ ಸಿನಿಮಾಗೂ ಕೈದಿ ಚಿತ್ರದ ಲಿಂಕ್ ಕೊಡಲಾಗಿತ್ತು. ಇದೀಗ ಕೈದಿ -2 ಕೂಡ ಸೆಟ್ಟೇರುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯದಲ್ಲೇ ಕೈದಿ -2 ಸೆಟ್ಟೇರಲಿದೆ ಎಂದು ನಟ ಕಾರ್ತಿ ಹೇಳಿದ್ದಾರೆ. ಈ ನಡುವೆ ಅಜಯ್ ದೇವಗನ್ ಕೈದಿ ಸಿನಿಮಾವನ್ನು ಬಾಲಿವುಡ್‌ಗೆ ರಿಮೇಕ್ ಮಾಡುತ್ತಿದ್ದಾರೆ. 

Drishyam 2 ಅಯ್ಯಯ್ಯೋ ಏನಿದು ಡಿಮ್ಯಾಂಡ್? ದೃಶ್ಯಂ 2 ಚಿತ್ರಕ್ಕೆ ಮಧ್ಯೆರಾತ್ರಿ ಶೋ ಆರಂಭಿಸಿದ ಥಿಯೇಟರ್‌ಗಳು

ವಿಶೇಷ ಎಂದರೆ ಬೋಲಾ ಸಿನಿಮಾ ಮೂಲಕ ಅಜಯ್ ದೇವಗನ್ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಈಗಾಗಲೇ ಅಜಯ್ ದೇವಗನ್ 2008ರಲ್ಲಿ ಯು ಮಿ ಔರ್ ಹಮ್,  2016ರಲ್ಲಿ ಶಿವಾಯ್ ಮತ್ತು ರನ್‌ವೇ 34 ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಇದೀಗ ಮತ್ತೆ ಬೋಲಾ ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಷನ್ ಕ್ಯಾಪ್ ಧರಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಬೋಲಾ ಸಿನಿಮಾದ ಟೀಸರ್ ಅಜಯ್ ದೇವಗನ್ ಶೇರ್ ಮಾಡಿದ್ದಾರೆ. ಬೋಲಾ ಸಿನಿಮಾದಲ್ಲಿ ಅಜಯ್ ದೇವಗನ್‌ಗೆ ಜೊತೆ ನಟಿ ತಬು ನಟಿಸಿದ್ದಾರೆ. ಸದ್ಯ ಟೀಸರ್ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದೆ. ವಿಶೇಷ ಎಂದರೆ ಈ ಟೀಸರ್ ವರುಣ್ ಧವನ್ ಮತ್ತು ಕೃತಿ ನಟನೆಯ ಬೇಡಿಯಾ ಸಿನಿಮಾದ ಜೊತೆ ದೊಡ್ಡ ಪರದೆ ಮೇಲೆ ರಾರಾಜಿಸಲಿದೆ. ಅಂದಹಾಗೆ ಬೇಡಿಯಾ ಸಿನಿಮಾ ನವೆಂಬರ್ 25ರಂದು ರಿಲೀಸ್ ಆಗುತ್ತಿದೆ.

ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ ಅಜಯ್ ದೇವಗನ್; ಜಿಗಿದ 'ದೃಶ್ಯಂ 2' ಕಲೆಕ್ಷನ್

ಅಂದಹಾಗೆ ಅಜಯ್ ದೇವಗನ್ ಅವರಿಗೆ ನೆಟ್ಟಿಗರು ಬ್ಯಾಕ್ ಟು ಬ್ಯಾಕ್ ರಿಮೇಕ್ ಸಿನಿಮಾ ರಿಲೀಸ್ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಈಗಾಗಲೇ ದೃಶ್ಯಂ-2 ಸಿನಿಮಾ ರಿಲೀಸ್ ಆಗಿದೆ. ಮತ್ತೆ ಬೋಲಾ ರಿಲೀಸ್ ಆದರೆ ಬಾಲಿವುಡ್‌ ಮೇಲೆ ಪರಿಣಾಮ ಬೀರಲಿದೆ. ಮೈದಾನ್ ಸಿನಿಮಾ ರಿಲೀಸ್ ಮಾಡಿ ಬಳಿಕ ಬೋಲಾ ಮೂಲಕ ಬನ್ನಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ. ಆದರೆ ದೃಶ್ಯಂ-2 ಸಕ್ಸಸ್ ನಲ್ಲಿರುವ ಅಜಯ್ ದೇವಗನ್ ಮತ್ತೆ ಬೋಲಾ ಮೂಲಕ ಬರ್ತಿದ್ದಾರೆ. ಆದರೆ ಯಾವಾಗ ರಿಲೀಸ್ ಎಂದು ರಿವೀಲ್ ಮಾಡಿಲ್ಲ. 

 

Follow Us:
Download App:
  • android
  • ios