Asianet Suvarna News Asianet Suvarna News

Drishyam 2 ಅಯ್ಯಯ್ಯೋ ಏನಿದು ಡಿಮ್ಯಾಂಡ್? ದೃಶ್ಯಂ 2 ಚಿತ್ರಕ್ಕೆ ಮಧ್ಯೆರಾತ್ರಿ ಶೋ ಆರಂಭಿಸಿದ ಥಿಯೇಟರ್‌ಗಳು

ಬಾಕ್ಸ್‌ ಆಫೀಸ್‌ ಕಲೆಕ್ಷನ್ ಧೂಳ್ ಎಬ್ಬಿಸುತ್ತಿರುವ ದೃಶ್ಯಂ 2 ಸಿನಿಮಾ. ವೀಕ್ಷಕರ ಒತ್ತಾಯಕ್ಕೆ ಮಧ್ಯರಾತ್ರಿ ಶೋ ಆರಂಭಿಸಿ ಚಿತ್ರಮಂದಿರಗಳ ಮಾಲೀಕರು...
 

Ajay Devgan Drishyam 2 gets extra show including midnight vcs
Author
First Published Nov 21, 2022, 11:52 AM IST

ಬಾಲಿವುಡ್ ಹ್ಯಾಂಡ್ಸಮ್ ನಟ ಅಜಯ್ ದೇವಗನ್ ನಟಿಸಿರುವ ದೃಶ್ಯಂ 2 ಸಿನಿಮಾ ನವೆಂಬರ್ 18 ರಾಜ್ಯಾದ್ಯಂತೆ ಬಿಡುಗಡೆ ಕಂಡಿತ್ತು. ಆರಂಭದಲ್ಲಿ ಸಿನಿಮಾ ಅಷ್ಟಕ್ಕೆ ಅಷ್ಟೆ ಆಗಿತ್ತು ಆದರೆ ದಿನದಿಂದ ದಿನಕ್ಕೆ ಡಿಮ್ಯಾಂಡ್ ಹೆಚ್ಚಾಗುತ್ತಿದ್ದ ಕಾರಣ ಚಿತ್ರಮಂದರಗಳ ಮಾಲೀಕರು ಶೋ ಹೆಚ್ಚಿಸಿದ್ದಾರೆ. ಅಭಿಷೇಕ್ ಪಥಾಕ್ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಅಜಯ್ ದೇವಗನ್, ತಬು, ಅಕ್ಷಯ್ ಕನ್ನ, ಶ್ರೀಯಾ ಶರಣ್ ಸೇರಿದಂತ ದೊಡ್ಡ ತಾರಾ ಬಳಗವಿದೆ. 50 ಕೋಟಿ ರೂಪಾಯಿ ಬಜೆಟ್ ಸಿನಿಮಾ ಇದಾಗಿದ್ದು ಬಾಕ್ಸ್‌ ಆಫೀಸ್‌ನಲ್ಲಿ 89 ಕೋಟಿ ಕಲೆಕ್ಷನ್ ಮಾಡಿದೆ.

ಸಿನಿಮಾ ಕಲೆಕ್ಷನ್ ಭರ್ಜರಿಯಾಗಿ ಮಾಡುತ್ತಿದೆ ಹಾಗೂ ಡಿಮ್ಯಾಂಡ್ ಹೆಚ್ಚಾಗುತ್ತಿದ್ದ ಕಾರಣ ಚಿತ್ರಮಂದಿರಗಳ ಮಾಲೀಕರು ಮಧ್ಯೆರಾತ್ರಿ ಶೋಗಳನ್ನು ಆರಂಭಿಸಿದ್ದಾರೆ. ಹೀಗಾಗಿ ಬೆಳಗ್ಗೆಯಿಂದ ರಾತ್ರಿವರೆಗೂ ದಿನಕ್ಕೆ ಕನಿಷ್ಠ 6 ಆಟ ನಡೆಯಲಿದೆ. 

Ajay Devgan Drishyam 2 gets extra show including midnight vcs

2015ರಲ್ಲಿ ದೃಶ್ಯಂ ಸಿನಿಮಾ ಬಿಡುಗಡೆಯಾಗಿತ್ತು, ಸಿನಿಮಾ ಸೂಪರ್ ಹಿಟ್ ಆದ ಕಾರಣ ಎರಡನೇ ಭಾಗ ಮಾಡಲು ಸಿನಿ ರಸಿಕರು ಡಿಮ್ಯಾಂಡ್ ಮಾಡಿದ್ದು. ಇತ್ತೀಚಿನ ದಿನಗಳಲ್ಲಿ ವೀಕ್ಷಕರು ಮುಗಿ ಬಿದ್ದು ಪದೇ ಪದೇ ನೋಡಲು ಇಷ್ಟ ಪಡುತ್ತಿರುವ ಸಿನಿಮಾನೇ ದೃಶ್ಯಂ. ಶನಿವಾರ ಮತ್ತು ಭಾನುವಾರ ಮುಂಬೈ ಮತ್ತು ಮಹಾರಾಷ್ಟ್ರದಲ್ಲಿ ಶೋ ಹೆಚ್ಚಿಗೆ ಮಾಡಿರುವುದನ್ನು ನೋಡಿ ಅಕ್ಕ ಪಕ್ಕದ ರಾಜ್ಯಗಳಲ್ಲಿ ಶೋ ಹೆಚ್ಚಿಗೆ ಮಾಡಲು ಮಾತುಕಥೆ ಮಾಡುತ್ತಿದ್ದಾರೆ. 

'ದೃಶ್ಯಂ 2 ಸಿನಿಮಾವನ್ನು ನೋಡಲು ಜನರು ಬರುತ್ತಿರುವ ಸಾಗರ ನೋಡಿ ಶಾಕ್ ಆಗಿದ್ದೀವಿ. ಸಾಮಾನ್ಯವಾಗಿ ಟಿಕೆಟ್‌ಗಳಿ 40-50% ಹೆಚ್ಚಳ ಆಗುವುದನ್ನು ನಾನು ನೋಡಿಲ್ಲ ಅದರೆ ಈ ಚಿತ್ರಕ್ಕೆ ಆಗುತ್ತಿರುವ ಕಾರಣ ಎಲ್ಲರೊಂದಿಗೆ ಮಾತುಕಥೆ ಮಾಡಿ ಶೋ ಹೆಚ್ಚಿಗೆ ಮಾಡಲಾಗಿದೆ' ಎಂದು ಮಹಾರಾಷ್ಟ್ರದ ಎಕ್ಸಿಬಿಟರ್ ಮಾತನಾಡಿದ್ದಾರೆ.

ಸೊರಗಿದ್ದ ಬಾಲಿವುಡ್‌ಗೆ ಜೀವ ತುಂಬಿದ ಅಜಯ್ ದೇವಗನ್; ಜಿಗಿದ 'ದೃಶ್ಯಂ 2' ಕಲೆಕ್ಷನ್

ಈ ತಿಂಗಳಿನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿರುವ ಹಿಂದಿ ಸಿನಿಮಾ ಪಟ್ಟಿಗೆ ದೃಶ್ಯಂ 2 ಸೇರಲಿದೆ ಎನ್ನಬಹುದು. ಎರಡನೇ ದಿನವೇ ಹೆಚ್ಚಿಗೆ ಆಗಿರುವ ಎರಡನೇ ಸಿನಿಮಾ ಅಂದ್ರೆ ದೃಶ್ಯಂ 2 ಅದು ಬಿಟ್ಟರೆ ಬ್ರಹ್ಮಾಸ್ತ್ರ ಸಿನಿಮಾ 98 ಕೋಟಿ ಕಲೆಕ್ಷನ್ ಮಾಡಿದೆ, ಬೂಲ್ ಬುಲಯಾ 2 ಸಿನಿಮಾ 56 ಕೋಟಿ ಕಲೆಕ್ಷನ್ ಮಾಡಿದೆ. 

'ಇತ್ತೀಚಿಗೆ ದಿನಗಳಲ್ಲಿ ಚಿತ್ರಮಂದಿರಕ್ಕೆ ಫ್ಯಾಮಿಲಿ ಬಂದು ಸಿನಿಮಾ ನೋಡುವುದು ಕಡಿಮೆ ಆಗಿತ್ತು ಆದರೆ ದೃಶ್ಯಂ 2 ರಿಲೀಸ್‌ನಿಂದಾಗಿ ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಹಂತ ಹಂತವಾಗಿ ಹೇಗೆ ಕಥೆ ವೀಕ್ಷಕರನ್ನು ಕರೆದುಕೊಂಡು ಹೋಗುತ್ತಿದೆ ಅದು ಥ್ರಿಲಿಂಗ್ ಆಗಿದೆ' ಎಂದು ಪಿವಿರ್  ಮಾಲೀಕರು ಹೇಳಿದ್ದಾರೆ.

ಅಜಯ್ ಸಂಭಾವನೆ:

ಅಜಯ್ ದೇವಗನ್ ದೃಶ್ಯಂ 2 ನಲ್ಲಿ ಕೆಲಸ ಮಾಡಲು 30 ಕೋಟಿ ಚಾರ್ಜ್ ಮಾಡಿದ್ದಾರೆ. ಚಿತ್ರದ ಬಜೆಟ್ 50 ಕೋಟಿ ಅಂದರೆ ಅಜಯ್ ಅವರ ಅರ್ಧಕ್ಕಿಂತ ಹೆಚ್ಚು ಬಜೆಟ್ ಪಡೆದಿದ್ದಾರೆ ಈ ದಿನಗಳಲ್ಲಿ ಅಜಯ್ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಟಬು ಅದರಲ್ಲಿ ಕೆಲಸ ಮಾಡಲು 3.5 ಕೋಟಿ ರೂ. ಅಜಯ್ ದೇವಗನ್ ಪತ್ನಿಯಾಗಿ ನಟಿಸಿರುವ ಶ್ರಿಯಾ ಸರಣ್ 2 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ದೃಶ್ಯಂ 2 ರಲ್ಲಿ ಅಕ್ಷಯ್ ಖನ್ನಾ ಎಂಟ್ರಿ. ಚಿತ್ರದಲ್ಲಿ ಕೆಲಸ ಮಾಡಲು 2.50 ಕೋಟಿ ತೆಗೆದುಕೊಂಡಿದ್ದಾರೆ. 

Follow Us:
Download App:
  • android
  • ios