Asianet Suvarna News Asianet Suvarna News

ಸಿನಿಮಾ ಇಂಡಸ್ಟ್ರಿಗೆ ಆಘಾತ, ನಟಿ ಅಮೃತಾ ಪಾಂಡೆ ಅಪಾರ್ಟ್‍‌ಮೆಂಟ್‌ನಲ್ಲಿ ಶವವಾಗಿ ಪತ್ತೆ!

ಸಿನಿಮಾ ಇಂಡಸ್ಟ್ರಿಗೆ ಆಘಾತ ಎದುರಾಗಿದೆ. ಖ್ಯಾತ ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆಯಾಗಿದ್ದಾರೆ. ಸಾವಿಗೂ ಮೊದಲು ಮಾರ್ಮಿಕ ಸ್ಟೇಟಸ್ ಹಾಕಿದ್ದ ನಟಿ ಕೆಲವೇ ಗಂಟೆಗಳಲ್ಲಿ ಬದುಕು ಅಂತ್ಯಗೊಳಿಸಿದ್ದಾರೆ.

Bhojpuri Film Actress Amrita pandey found dead in Apartment Bihar ckm
Author
First Published Apr 28, 2024, 11:20 PM IST

ಬಾಘಲಪುರ(ಏ.28)  ಭೋಜ್‌ಪುರಿ ಖ್ಯಾತ ನಟಿ ಅಮೃತಾ ಪಾಂಡೆ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಅಮೃತಾ ಪಾಂಡೆ ಮದುವೆ ಕಾರ್ಯಕ್ರಮ ನಿಮಿತ್ತ ಬಿಹಾರದ ಭಾಘಲಪುರಕ್ಕೆ ಆಗಮಿಸಿದ್ದರು. 4 ದಿನಗಳ ಮದುವೆ ಕಾರ್ಯಕ್ರಮ ಮುಗಿಸಿ ಮುಂಬೈಗೆ ಮರಳಬೇಕಿದ್ದ ಅಮೃತಾ ಪಾಂಡೆ ನಿಧನರಾಗಿ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿದ್ದ ಅಮೃತಾ ಪಾಂಡೆ ಸೀಲಿಂಗ್ ಫ್ಯಾನ್‌ಗೆ ಸೀರೆ ಕಟ್ಟಿ ತಮ್ಮ ಬದುಕು ಅಂತ್ಯಗೊಳಿಸಿದ್ದಾರೆ. ಅಮೃತಾ ಕೋಣೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಭೋಜ್‌ಪುರಿಯಲ್ಲಿ ಬಹು ಬೇಡಿಕೆ ನಟಿ ಎಂದೇ ಗುರುತಿಸಿಕೊಂಡಿದ್ದ ಅಮೃತಾ ಪಾಂಡೆ ಹಲವು ಚಿತ್ರಗಳಲ್ಲಿ ನಟಿಸಿ ಭಾರಿ ಮೆಚ್ಚುಗೆಗಳಿಸಿದ್ದರು. ಮುಂಬೈನಲ್ಲಿ ನೆಲೆಸಿರುವ ಅಮೃತಾ ಪಾಂಡೆ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕಾಗಿ ಬಿಹಾರದ ಭಾಘಲಪುರಕ್ಕೆ ಆಗಮಿಸಿದ್ದರು. ಆದರೆ ಕಾರ್ಯಕ್ರಮದ ನಡುವೆ ಅಪಾರ್ಟ್‌ಮೆಂಟ್‌ಗೆ ತೆರಳಿದ ಅಮೃತಾ ಪಾಂಡೆ ಬದುಕು ಅಂತ್ಯಗೊಳಿಸಿದ್ದಾರೆ.

ಕಿರುತೆರೆಯಲ್ಲಿಯೂ ಕಾಸ್ಟಿಂಗ್​ ಕೌಚ್​? ರೂಮಿನಲ್ಲಿ ಕೂಡಾಕಿದ್ರು, ಬಟ್ಟೆ ಬದಲಿಸುವಾಗ... ನಟಿಯ ಕರಾಳ ಅನುಭವ

ಸಾವಿಗೂ ಮುನ್ನ ವ್ಯಾಟ್ಸ್ಆ್ಯಪ್ ಮೂಲಕ ಭೋಜ್‌ಪುರಿಯಲ್ಲಿ ಮಾರ್ಮಿಕ ಸ್ಟೇಟಸ್ ಅಪ್‌ಡೇಟ್ ಮಾಡಿದ್ದರು. ಸ್ಟೇಟಸ್ ಹಾಕಿದ ಕೆಲವೇ ಗಂಟೆಗಳಲ್ಲಿ ಅಮೃತಾ ಪಾಂಡೆ ಶವವಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು, ಆಪ್ತರ ಪ್ರಕಾರ, ಅಮೃತಾ ಪಾಂಡೆ ಖಿನ್ನತೆ ಒಳಗಾಗಿದ್ದರು. ಖಿನ್ನತೆಯಿಂದ ಬಳಲಿದ್ದ ಅಮೃತಾ ಪಾಂಡೆ ಚಿಕಿತ್ಸೆಯನ್ನೂ ಪಡೆದುಕೊಳ್ಳುತ್ತಿದ್ದರು. 

ನಿರಂತರ ವೈದ್ಯರ ಸಂಪರ್ಕದಲ್ಲಿದ್ದ ಅಮೃತಾ ಪಾಂಡೆ ಇದೀಗ ದಿಢೀರ್ ಶವವಾಗಿ ಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಮಾನಸಿಕ ಖಿನ್ನತೆಯಿಂದ ಬದುಕು ಅಂತ್ಯಗೊಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯಲಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಗಂಡು ಮಗುವಿಗಾಗಿ ಪತ್ನಿಯ ಒಪ್ಪಿಗೆಯಿಂದ 2ನೇ ಮದುವೆಯಾದ ಪತಿ, ಇಬ್ರಿಗೂ ಕೈಕೊಟ್ಟು ಮತ್ತೊಬ್ಬಳ ಹಿಂದೆ ಬಿದ್ದ!

ಮದುವೆ ಬಳಿಕ ಅಮೃತಾ ಪಾಂಡೆ ಖಿನ್ನತೆಗೆ ಜಾರಿದ್ದಾರೆ ಎಂದ ಮೂಲಗಳು ಹೇಳಿವೆ. ಇದೀಗ ಪೊಲೀಸರು ಅಮೃತಾ ಪಾಂಡೆ ಪತಿಯನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದಾರೆ. ಇಷ್ಟೇ ಅಲ್ಲ ವಿಚಾರಣೆ ಒಳಪಡಿಸುವ ಸಾಧ್ಯತೆ ಇದೆ. ದೀವಾನಾಪನ್ ಸೇರಿದಂತೆ ಹಲವು ಜನಪ್ರಿಯ ಭೋಜ್‌ಪುರಿ ಚಿತ್ರದಲ್ಲಿ ಅಮೃತಾ ಪಾಂಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
 

Latest Videos
Follow Us:
Download App:
  • android
  • ios