Asianet Suvarna News Asianet Suvarna News

ಬಿಗ್ ಬಾಸ್‌ ಸ್ಪರ್ಧಿ ಅಶ್ಲೀಲ ವಿಡಿಯೋ ಲೀಕ್: ಚೀಪ್ ಟ್ರಿಕ್‌ಗೆ ಕಣ್ಣೀರಿಡಲ್ಲ, ವಿಡಿಯೋ ನೋಡಿಲ್ಲ!

MMS ವಿಡಿಯೋ ಲೀಕ್‌ ಬಗ್ಗೆ ಮೌನ ಮುರಿದ ನಟಿ ಅಕ್ಷರಾ ಸಿಂಗ್.  ನನ್ನ ವಿಡಿಯೋ ನಾನೇ ನೋಡಿಲ್ಲ.... 

Bhojpuri actress Akshara singh reacts to her leaked mms video vcs
Author
First Published Sep 21, 2022, 4:31 PM IST

ಭೋಜ್‌ಪುರಿ ಬ್ಯೂಟಿ, ಅದ್ಭುತ ಸಿಂಗರ್ ಅಕ್ಷರಾ ಸಿಂಗ್ ಸಿನಿಮಾ ಕ್ಷೇತ್ರದಲ್ಲಿ ಹೆಸರು ಮಾಡುವುದಕ್ಕಿಂತ ಹೆಚ್ಚಾಗಿ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಮೇಲೆ ಕಿಡಿಗೇಡಿಗಳ ಕಣ್ಣು ಬಿದ್ದಿದೆ. ಅಕ್ಷರಾ ಸಿಂಗ್ ಖಾಸಗಿ ವಿಡಿಯೋ ಲೀಕ್ ಆಗಿದ್ದು ದೊಡ್ಡ ವಿವಾದ ಸೃಷ್ಠಿ ಮಾಡಿದೆ. ನಟಿಗೆ ಬ್ಯಾಕ್ ಟು ಬ್ಯಾಕ್ ಕರೆ ಮತ್ತು ಮೆಸೇಜ್ ಬರುತ್ತಿದ್ದ ಕಾರಣ ಬೇಸತ್ತು ಪ್ರತಿಕ್ರಿಯೆ ಕೊಟ್ಟಿದ್ದಾರೆ. 

'ಯಾರೇ ಈ ನೀಚ ಕೆಲಸ ಮಾಡಿದ್ದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಬಗ್ಗೆ ಅನೇಕರು ಕಾಮೆಂಟ್‌ ಮಾಡಿ ಕೆಟ್ಟ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾನೇ ನನ್ನ MMS ವಿಡಿಯೋ ಇನ್ನೂ ನೋಡಿಲ್ಲ. ವಿಡಿಯೋದಲ್ಲಿ ಇರುವ ಹುಡುಗಿ ನಾನೇನಾ ಇಲ್ವಾ ಅಂತ ನಿಮಗೆ ಮಾಹಿತಿ ಬೇಕು ಅಲ್ವಾ? ಈ ಚೀಪ್‌ ಟ್ರಿಕ್ ಆಂಡ್ ಕೆಲಸಗಳಿಗೆ ನಾನು ತಲೆ ಭಾಗುವುದಿಲ್ಲ. ಈ ವಿಡಿಯೋಗಳು ಅಥವಾ ಘಟನೆಗಳು ನನ್ನ ಮನಸ್ಸು ಕೆಡಿಸುವುದಿಲ್ಲ' ಎಂದು ಅಕ್ಷರಾ ಸಿಂಗ್ eಟೈಮ್ಸ್‌ಗೆ ಹೇಳಿ ಕೊಟ್ಟಿದ್ದಾರೆ.

ಬಾಲಿವುಡ್‌ನ ಈ ಟಾಪ್‌ ನಟಿಯ MMS ವೈರಲ್: ಬೆಚ್ಚಿಬಿದ್ದ ನೆಟ್ಟಿಗರು

ಪವನ್ ಸಿಂಗ್ ಮತ್ತು ಅಕ್ಷರಾ ಸಿಂಗ್ ಭೋಜ್‌ಪುರಿ ಸಿನಿಮಾ ರಂಗ ಮೋಸ್ಟ್‌ ಪವರ್‌ಫುಲ್‌ ಕಪಲ್. ಇವರಿಬ್ಬರ ಸಿನಿಮಾ ವಿಡಿಯೋ ಮತ್ತು ಆಲ್ಬಂ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತದೆ. MMS ವಿಡಿಯೋ ಲೀಕ್‌ ಬಳಿ ಇವರಿಬ್ಬರ ಯೂಟ್ಯೂಬ್‌ನಲ್ಲಿರುವ ಅಕ್ಷರಾ ಪ್ರತಿಯೊಂದು ವಿಡಿಯೋ ವೈರಲ್ ಆಗುತ್ತಿದೆ. ಇತ್ತೀಚಿಗೆ ಇವರಿಬ್ಬರು ಹೆಚ್ಚಿಗೆ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಬ್ರೇಕಪ್ ಆಗಿದೆ ಎಂದು ವದಂತಿ ಹರಿದಾಡುತ್ತಿದೆ. 

ಪ್ರಿಯಾಂಕಾ ಪಂಡಿತ್ ವಿಡಿಯೋ ಲೀಕ್:

ಭೋಜ್‌ಪುರಿ ನಟಿ ತ್ರಿಷಾ ಕಾರ್ ಮಧು ತನ್ನ ಗೆಳೆಯನೊಂದಿಗಿನ ಇಂಟಿಮೇಟ್ ವಿಡಿಯೋ ವೈರಲ್ ಆಗಿದೆ. ಅಂತದ್ದೇ ಕ್ಲಿಪಿಂಗ್ ಅಂತರ್ಜಾಲದಲ್ಲಿ ಹರಿದಾಡಿದ್ದು, ಇದು ಇನ್ನೊಬ್ಬ ಭೋಜ್‌ಪುರಿ ತಾರೆ ಪ್ರಿಯಾಂಕಾ ಪಂಡಿತ್ ಎಂದು ಅನೇಕರು ಆರೋಪಿಸಿದ್ದಾರೆ.ನ್ಯೂಡ್ ವಿಡಿಯೋ ಕ್ಲಿಪಿಂಗ್ ವೈರಲ್ ಆದ ಕೆಲ ದಿನಗಳ ನಂತರ, ಭೋಜ್‌ಪುರಿ ನಟಿ ಪ್ರಿಯಾಂಕಾ ಪಂಡಿತ್ ಈ ವಿಷಯದಲ್ಲಿ ಮೌನ ಮುರಿದ್ದಾರೆ. ವಿಡಿಯೋದಲ್ಲಿರುವ ಹುಡುಗಿ ತಾನಲ್ಲ ಎಂದು ಆಕೆ ಸಮರ್ಥಿಸಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ತ್ರಿಷಾ ಅವರ ಎಂಎಂಎಸ್ ಹಗರಣದ ನಂತರ ಮತ್ತೆ ಮರುಕಳಿಸಿದ ಹಳೆಯ ವಿಡಿಯೋ ಎಂದು ಹೇಳಿದ್ದಾರೆ. ಪ್ರಿಯಾಂಕಾ ಯಾರೋ ತನ್ನ ಇಮೇಜ್ ಹಾಳುಮಾಡಲು ಯತ್ನಿಸುತ್ತಿರುವುದರಿಂದ ಅದು ತನ್ನ ಸಿನಿಮಾ ವೃತ್ತಿಜೀವನಕ್ಕೆ ತೊಂದರೆಯಾಗುತ್ತಿದೆ. ಅದಕ್ಕಾಗಿಯೇ ಈ ನಿರ್ದಿಷ್ಟ ವಿಡಿಯೋ ವೈರಲ್ ಆಗಿದೆ ಎಂದು ಆರೋಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆಕೆ ಲಿಖಿತ ದೂರು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಪ್ರಿಯಾಂಕಾ ಪಂಡಿತ್ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅವರ ಪೋಸ್ಟ್‌ಗಳನ್ನು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ.

MMS ಲೀಕ್ ಬೆನ್ನಲ್ಲೇ ಅಂಜಲಿ ಅರೋರ ಮತ್ತೊಂದು ವಿವಾದ, ತುಂಡುಡುಗೆಯಲ್ಲಿ ತಿರಂಗ!

 ತ್ರಿಷಾ ಕರ್ ಮಧು ಲೈವ್ ವಿಡಿಯೋ:

ನಟಿ ತ್ರಿಷಾ ಕರ್ ಅಶ್ಲೀಲ ವಿಡಿಯೋ ಕೂಡ ಲೀಕ್ ಆಗಿತ್ತು.ಭೋಜ್‌ಪುರಿ ನಟಿ ತ್ರಿಷಾ ಕರ್ ಮಧು ಲೈವ್ ಗೆ ಬಂದು ಅನೇಕ ವಿಚಾರಗಳನ್ನು ಹೇಳಿದ್ದಾರೆ.  ಯುವಕನ ಜೊತೆಗಿನ ತ್ರಿಷಾ ಕರ್  ಮಧು  ಇದ್ದಾರೆ ಎನ್ನಲಾದ ಖಾಸಗಿ ವಿಡಿಯೋ ಲೀಕ್ ಆಗಿದ್ದು ಬಗ್ಗೆ ಸ್ವತಃ ಲೈವ್‌ಗೆ ಬಂದು ತ್ರಿಷಾ ಕರ್ ಮಧು ಬೇಸರ ವ್ಯಕ್ತಪಡಿಸಿದ್ದಾರೆ. ಲೀಕ್ ಆಗಿರುವ ವಿಡಿಯೋದಲ್ಲಿ ಯುವತಿ ಜತೆ ಜೊತೆಗೆ ಓರ್ವ ಯುವಕ ಇದ್ದಾನೆ.  ಆ ಯುವಕ ನಟಿಯ  ಬಾಯ್‌ಫ್ರೆಂಡ್ ಎನ್ನಲಾಗಿದ್ದು ನೆಟ್ಟಿಗರು ಪ್ರಶ್ನೆ  ಎಸೆದಿದ್ದಾರೆ. ನೊಂದು ಲೈವ್ ಗೆ ಬಂದಿದ್ದ ನಟಿ ನಿಮ್ಮ ಮನೆಯಲ್ಲೂ ಅಕ್ಕ-ತಂಗಿಯರಿದ್ದಾರೆ..  ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.  ಆನ್ ಲೈನ್ ಜಗದಲ್ಲಿ ಎಲ್ಲವೂ ಜೋಪಾನ ಎನ್ನುವುದು ಮತ್ತೇ ಸಾಬೀತಾಗಿದೆ.

Follow Us:
Download App:
  • android
  • ios