ವಾರಾಣಸಿ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟಿ ಆಕಾಂಕ್ಷಾ ದುಬೆ; ಆತ್ಮಹತ್ಯೆ ಶಂಕೆ
ಭೋಜ್‌ಪುರಿ ಸಿನಿಮಾರಂಗದ ಖ್ಯಾತ ನಟಿ ಆಕಾಂಕ್ಷಾ ದುಬೆ ಉತ್ತರ ಪ್ರದೇಶದ ವಾರಣಾಸಿಯ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಭೋಜ್‌ಪುರಿ ಸಿನಿಮಾರಂಗದ ಖ್ಯಾತ ನಟಿ ಆಕಾಂಕ್ಷಾ ದುಬೆ ಉತ್ತರ ಪ್ರದೇಶದ ವಾರಣಾಸಿಯ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆಕಾಂಕ್ಷಾ ದುಬೆ ಸಾವು ಭೋಜ್‌ಪುರಿ ಸಿನಿಮಾರಂಗವನ್ನೇ ಬೆಚ್ಚಿಬೀಳಿಸಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಅಕಾಂಕ್ಷಾ ಶವ ಪತ್ತೆಯಾಗಿದೆ. 'ಮೇರಿ ಜಂಗ್ ಮೇರಾ ಫೈಸ್ಲಾ' ಸಿನಿಮಾ ಮೂಲಕ ಸಿನಿಮಾರಂಗ ಪ್ರವೇಶ ಮಾಡಿದ್ದ ನಟಿ ಆಕಾಂಕ್ಷಾ ದುಬೆ ಅವರಿಗೆ 25 ವರ್ಷ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಆಕಾಂಕ್ಷಾ ದುಬೆ ಮುಂದಿನ ಸಿನಿಮಾದ ಶೂಟಿಂಗ್‌ಗಾಗಿ ವಾರಣಾಸಿಯಲ್ಲಿದ್ದರು ಎಂದು ವರದಿಯಾಗಿದೆ. ಚಿತ್ರೀಕರಣದ ನಂತರ ಆಕಾಂಕ್ಷಾ ಅಲ್ಲಿನ ಸಾರನಾಥ್ ಹೋಟೆಲ್‌ಗೆ ತೆರಳಿದ್ದರು. ಆದರೆ ಅಲ್ಲೇ ಶವವಾಗಿ ಪತ್ತೆಯಾಗಿರುವುದು ಶಾಕ್ ನೀಡಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಆಕಾಂಕ್ಷಾ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾಗುವ ಕೆಲವೇ ಗಂಟೆಗಳ ಮೊದಲು ಭೋಜ್‌ಪುರಿಯ 'ಹಿಲೋರ್ ಮೇರ್' ಹಾಡಿಗೆ ಬೆಲ್ಲಿ ಡಾನ್ಸ್ ಮಾಡಿರುವ ವಿಡಿಯೋ ಪೋಸ್ಟ್ ಮಾಡಿದ್ದರು. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ನಟಿಯ ಆಪ್ತರೊಬ್ಬರು, ಹೊಸ ಸಿನಿಮಾ ನಾಯಕ್ ಚಿತ್ರೀಕರಣದ ಮೊದಲ ದಿನವಾಗಿತ್ತು. ವಾರಣಾಸಿಯಲ್ಲಿ ಚಿತ್ರೀಕರಣ ನಡೆಸುತ್ತಿದ್ದರು. ಇಂದು ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಅವರ ಮೇಕಪ್ ಬಾಯ್ ಅವರನ್ನು ಕರೆಯಲು ಹೋದಾಗ ಹೋಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು' ಎಂದು ಹೇಳಿದ್ದಾರೆ.
ಸ್ಯಾಂಡಲ್‌ವುಡ್‌ಗೆ ಮತ್ತೊಂದು ಶಾಕ್, ಹೃದಯಾಘಾತದಿಂದ ಖ್ಯಾತ ನಿರ್ದೇಶಕ ಕಿರಣ್ ಗೋವಿ ನಿಧನ!
ಭೋಜ್‌ಪುರಿಯ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಆಕಾಂಕ್ಷಾ ಮುಜ್ಸೆ ಶಾದಿ ಕರೋಗಿ, ವೀರೋನ್ ಕೆ ವೀರ್ ಮತ್ತು ಫೈಟರ್ ಕಿಂಗ್ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಿನಿಮಾರಂಗಕ್ಕೆಎಂಟ್ರಿ ನಟಿ ಆಕಾಂಕ್ಷಾ ಅದ್ಭತ ನಟನೆ ಮೂಲಕ ಅಭಿಮಾನಿಗಳ ಹೃದಯಗೆದ್ದಿದ್ದರು. ಸದ್ಯ ಆಕಾಂಕ್ಷಾ ದುಬೆ ಇತ್ತೀಚೆಗೆ ಭೋಜ್‌ಪುರಿ ಗಾಯಕ-ನಟ ಯಶ್ ಕುಮಾರ್ ಅವರೊಂದಿಗೆ 'ಮಿಟ್ಟಿ' ಚಿತ್ರೀಕರಣವನ್ನು ಪೂರ್ಣಗೊಳಿಸಿದರು. ದುರಂತ ಎಂದರೆ ಆಕಾಂಕ್ಷಾ ದುಬೆ ಕಾಣಿಸಿಕೊಂಡಿದ್ದ ಯೇ ಆರಾ ಕಭಿ ಹರಾ ನಹಿ ಮ್ಯೂಸಿಕ್ ಆಲ್ಬಂ ಬಿಡುಗಡೆಯಾದ ದಿನವೇ ಕೊನೆಯುಸಿರೆಳೆದಿದ್ದಾರೆ. ಈ ಹಾಡಿನಲ್ಲಿ ಆಕಾಂಕ್ಷಾ ಪವನ್ ಸಿಂಗ್ ಜೊತೆ ನಟಿಸಿದ್ದರು.
ನಿನ್ನನ್ನ ನೀನು ಸಾಯಿಸಿಕೊಳ್ಳಬೇಡ ಅಂದಿದ್ದೆ; ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸ್ಮೃತಿ ಇರಾನಿ
ನಟಿ ಅಕಾಂಕ್ಷಾ ಸಹ-ನಟ ಸಮರ್ ಸಿಂಗ್ ಜೊತೆ ಡೇಟಿಂಗ್ ಮಾಡಿದ್ದರು ಎನ್ನುವ ಸುದ್ದಿ ಇದೆ. ಈ ಬಗ್ಗೆ ಪೋಸ್ಟ್ ಗಳನ್ನು ಶೇರ್ ಮಾಡುವ ಮೂಲಕ ಪರೋಕ್ಷವಾಗಿ ಪ್ರತಿ ವ್ಯಕ್ತಪಡಿಸಿತ್ತುದ್ದರು. 2023 ರ ಪ್ರೇಮಿಗಳ ದಿನದಂದು ಶೇರ್ ಮಾಡಿದ್ದ ಪೋಸ್ಟ್ ಅನುಮಾನ ಮತ್ತಷ್ಟು ಬಲವಾಗುವಂತೆ ಮಾಡಿದ್ದರು.