ಹಿಂದಿ ಕಿರುತೆರೆಯ ಜನಪ್ರಿಯ ನಟ, ಭಾಬಿಜಿ ಘರ್ ಪರ್ ಹೈನ ಮಲ್ಕಾನ್ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ನಟ ದೀಪೇಶ್ ಭಾನ್ ನಿಧನಹೊಂದಿದ್ದಾರೆ.  ದೀಪೇಶ್ ಶನಿವಾರ (ಜುಲೈ 23) ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು.

ಹಿಂದಿ ಕಿರುತೆರೆಯ ಜನಪ್ರಿಯ ನಟ, ಭಾಬಿಜಿ ಘರ್ ಪರ್ ಹೈನ ಮಲ್ಕಾನ್ ಪಾತ್ರದಲ್ಲಿ ಹೆಸರುವಾಸಿಯಾಗಿದ್ದ ನಟ ದೀಪೇಶ್ ಭಾನ್ ನಿಧನಹೊಂದಿದ್ದಾರೆ. ದೀಪೇಶ್ ಶನಿವಾರ (ಜುಲೈ 23) ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 41 ವರ್ಷ ವಯಸ್ಸಾಗಿತ್ತು. ಕಿರುತೆರೆ ಮೂಲಕ ವೃತ್ತಿ ಜೀವನ ಪ್ರಾರಂಭ ಮಾಡಿದ ನಟ ದೀಪೇಶ್ ಹಲವಾರು ಹಾಸ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ್ದಾರೆ. ದೀಪೇಶ್ ನಿಧನಕ್ಕೆ ಅವರ ಅಭಿಮಾನಿಗಳು ಮತ್ತು ಆಪ್ತರು ಸಾಮಾಜಿಕ ಮಾಧ್ಯಮದ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಖ್ಯಾತ ನಟಿ ಕವಿತಾ ಕೌಶಿಕ್ ಟ್ವೀಟ್ ಮಾಡಿ ದೀಪೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ದೀಪೇಶ್ ನಿಧನ ನಿಜಕ್ಕೂ ಆಘಾತ ತಂದಿದೆ. 41 ನೇ ವಯಸ್ಸಿನಲ್ಲಿ ದೀಪೇಶ್ ಭಾನ್ ನಿಧನರಾಗಿದ್ದಾರೆ ತೀವ್ರ ನೋವಿನ ಸಂಗತಿ. ಎಫ್‌ಐಆರ್‌ನಲ್ಲಿ ಬಹಳ ಮುಖ್ಯವಾದ ಪಾತ್ರವರ್ಗದ ಸದಸ್ಯ, ಫಿಟ್ ಆಗಿದ್ದ ದೀಪೇಶ್ ಗೆ ಕುಡಿಯುವುದು ಮತ್ತು ಧೂಮಪಾನ ಮಾಡುತ್ತಿರಲಿಲ್ಲ. ಹೆಂಡತಿ ಮತ್ತು ಒಂದು ವರ್ಷದ ಮಗು ಮತ್ತು ಹೆತ್ತವರು ಮತ್ತು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ' ಎಂದು ಭಾವುಕ ಟ್ವೀಟ್ ಮಾಡಿದ್ದಾರೆ. 

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ದೀಪೇಶ್ ಇಂದು ಬೆಳಗ್ಗೆ ಕ್ರಿಕೆಟ್ ಆಡುತ್ತಿದ್ದಾಗ ಕುಸಿದು ಬಿದ್ದರು ತಕ್ಷಣ ಅವರನ್ನು ವೈದ್ಯರ ಬಳಿಗೆ ಕರೆದೊಯ್ಯಲಾಯಿತು ಎಂದು ವರದಿ ಮಾಡಿದೆ. ದೀಪೇಶ್ ಸಹ ನಟ ಚಾರುಲ್ ಮಲಿಕ್ ದೀಪೇಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿ, 'ನನಗೆ ಇನ್ನೂ ನಂಬಲಾಗುತ್ತಿಲ್ಲ. ನಾನು ಅದರ ಬಗ್ಗೆ ಬೆಳಿಗ್ಗೆ ತಿಳಿದುಕೊಂಡೆ. ನಾನು ನಿನ್ನೆಯಷ್ಟೇ ಅವರನ್ನು ಭೇಟಿ ಮಾಡಿದ್ದೇನೆ ಮತ್ತು ಅವರು ಚೆನ್ನಾಗಿದ್ದರು. ನಾವು ಒಟ್ಟಿಗೆ ಕೆಲವು ರೀಲ್ ವೀಡಿಯೊಗಳನ್ನು ಮಾಡಿದ್ದೇವೆ. ನಾನು ಅವನನ್ನು ಎಂಟು ವರ್ಷಗಳಿಂದ ಬಲ್ಲೆ ಮತ್ತು ಅವನು ಸೆಟ್‌ಗಳಲ್ಲಿ ನನಗೆ ತುಂಬಾ ಹತ್ತಿರವಾಗಿದ್ದರು.ನಾವು ಒಟ್ಟಿಗೆ ಊಟ ಸೇವಿಸುತ್ತಿದ್ದೆವು.ಪ್ರತಿಭಾನ್ವಿತ ನಟನ ಹೊರತಾಗಿ ಅವರು ಅದ್ಭುತ ಮನುಷ್ಯರೂ ಆಗಿದ್ದರು. ಅದ್ಭುತ ಮನುಷ್ಯ ಮತ್ತು ನಟನನ್ನು ಕಳೆದುಕೊಂಡಿದ್ದೇವೆ' ಎಂದು ಹೇಳಿದರು.

Scroll to load tweet…

ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ; ಅರ್ಜುನ್ ಸರ್ಜಾ ತಾಯಿ ಲಕ್ಷ್ಮೀದೇವಿ ನಿಧನ

ಕಳೆದ ವರ್ಷ ದೀಪೇಶ್ ತಾಯಿಯನ್ನು ಕಳೆದುಕೊಂಡಿದ್ದರು. ಅಮ್ಮನ್ನು ಕಳೆದುಕೊಂಡ ದುಃಖವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಭಾವನಾತ್ಮಕ ಪೋಸ್ಟ್ ನಲ್ಲಿ ದೀಪೇಶ್, 'ಅಮ್ಮಾ, ನೀವು ಯಾಕೆ ಹೊರಟಿದಿರಿ. ಲವ್ ಯೂ ಅಮ್ಮ. ನಾನು ನಿನ್ನನ್ನು ಕಳೆದುಕೊಳ್ಳುತ್ತೇನೆ' ಎಂದು ಹೇಳಿದ್ದರು. ಆದರೀಗ ಪುತ್ರನು ಸಹ ಅಮ್ಮನಿರುವ ಜಾಗಕ್ಕೆ ಹೋಗಿರಿವುದು ಅಭಿಮಾನಿಗಳಲ್ಲಿ ನೋವು ತಂದಿದೆ.