#BetheREALMAN ಖ್ಯಾತ ನಿರ್ದೇಶಕರ ಕೈಯಲ್ಲಿ ಕ್ಯಾಮೆರಾ ಬದಲು ಬಂತು ಕಸ ಪೊರಕೆ, ಎಂಜಲು ಪಾತ್ರೆ!
ಲಾಕ್‌ಡೌನ್ ವೇಳೆ ವರ್ಕೌಟ್, ಫೇಸ್‌ಬುಕ್ ಲೈವ್, ಇನ್‌ಸ್ಟಾಗ್ರಾಂ ಲೈವ್ ಮಾಡುತ್ತಿದ್ದ ನಟ ಹಾಗೂ ನಿರ್ದೇಶಕರಿಗೆ ಹೊಸ ಚಾಲೆಂಜ್ ಎದುರಾಗಿದೆ...
ಕೊರೋನಾ ವೈರಸ್ ಲಾಕ್‌ಡೌನ್ 2.0ನಲ್ಲಿರುವ ನಾವೆಲ್ಲರೂ ಮೇ 3ರ ವರೆಗೂ ಗೃಹಬಂಧಿತರಾಗಿರುತ್ತೇವೆ, ದಿನದ ಅಗತ್ಯ ವಸ್ತುಗಳನ್ನು ಖರೀದಿಸಲು ಮಾತ್ರ ಮನೆಯಿಂದ ಹೊರಗೆ ಬರುತ್ತೇವೆ ಅದೂ ಮಾಸ್ಕ್ ಹಾಗೂ ಸ್ಯಾನಿಟೈಸರ್ ಹಿಡಿದು. ವೃತ್ತಿ ಜೀವನದಲ್ಲಿ ಫುಲ್ ಬ್ಯುಸಿಯಾಗಿರುವವರಿಗೆ ಕುಟುಂಬಸ್ಥರ ಜೊತೆ ಸಮಯ ಕಳೆಯುವುದಕ್ಕೆ ಇದು ರೈಟ್ ಟೈಂ ಎಂದೇ ಹೇಳಬಹುದು.
ಇನ್ನು ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿರುವ ಕಾರಣ ಸಿನಿಮಾ ನಟ-ನಟಿರಯ ಲೈವ್ ವಿಡಿಯೋಗಳ ಮೂಲಕ ಅಭಿಮಾನಿಗಳ ಜೊತೆ ಮಾತನಾಡುತ್ತಿದ್ದಾರೆ. ಈ ಲೈವ್ ಚ್ಯಾಟ್ ನಡುವೆ ನಟರು, ನಿರ್ಮಾಪಕರು ಹಾಗೂ ನಿರ್ದೇಶಕರು ಹೊಸ ಚ್ಯಾಲೆಂಜ್ ಶುರು ಮಾಡಿದ್ದಾರೆ ಅದುವೇ #BetheREALMAN ಎಂದು.
ಕಥೆ ಹಿಂದಿನ ವ್ಯಥೆ ಎಂದಿಗೂ ಸ್ಪೂರ್ತಿದಾಯಕ: ಕೇಳಿ ನವೀನ್ ಕೃಷ್ಣ ಅವರ ಕ್ಲೋಸಪ್ ಕಥೆ
ಅರ್ಜುನ್ ರೆಡ್ಡಿ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಈ ಚಾಲೆಂಚ್‌ಗೆ ಕಾರಣ. ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವ ವಿಡಿಯೋ ಶೇರ್ ಮಾಡಿಕೊಂಡು 'Man can be a great domestic worker and a real man will never let his woman work all by herself specially during this No maid times & Quarantine' ಎಂದು ಬರೆದುಕೊಂಡು ಬಾಹುಬಲಿ ನಿರ್ದೇಶಕ ರಾಜಮೌಳಿಗೆ ಚಾಲೆಂಜ್ ಮಾಡಿದ್ದಾರೆ.
ಚಾಲೆಂಜ್ ಸ್ವೀಕರಿಸಿದ ರಾಜಮೌಳಿ ಮನೆಯಲ್ಲಿ ಕಸ ಪೊರಕೆ ಹಿಡಿದು ಕೆಲಸ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ನಂತರ ಇನ್ನಿತ್ತರಿಗೆ ಟ್ಯಾಗ್ ಮಾಡಿ ಸವಾಲು ಸ್ವೀಕರಿಸಲು ಹೇಳಿದ್ದಾರೆ.