Asianet Suvarna News Asianet Suvarna News

ಬೆಂಗಳೂರು ರೇವ್‌ ಪಾರ್ಟಿ ಪ್ರಕರಣ: ಮಾಧ್ಯಮ ಹೇಳಿಕೆ ನೀಡದಂತೆ ನಟಿ ಹೇಮಾಗೆ ಕಲಾವಿದರ ಸಂಘ ವಾರ್ನ್!

ನಟಿ ಹೇಮಾರನ್ನು ಬೆಂಗಳೂರು ರೇವ್ ಪಾರ್ಟಿ ಪ್ರಕರಣದ ಬಳಿಕ ತೆಲುಗು ಚಲನಚಿತ್ರ ಕಲಾವಿದರ ಸಂಘದಿಂದ ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ನಟಿಗೆ ಶುಭ ಸುದ್ದಿ ಸಿಕ್ಕಿದೆ.

Bengaluru rave party case  Movie Artist Association  revokes actress Hema  suspension gow
Author
First Published Aug 24, 2024, 7:41 PM IST | Last Updated Aug 24, 2024, 7:41 PM IST

ಬೆಂಗಳೂರು ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು  ನಟಿ ಹೇಮಾ ಬಂಧನಕ್ಕೊಳಗಾಗಿದ್ದರು. ಈ ಪಾರ್ಟಿಗೆ ಹಾಜರಾಗಿದ್ದನ್ನು ಹೇಮಾ ಒಪ್ಪಿಕೊಂಡಿದ್ದರು. ಎಲ್ಲಿಗಾದರೂ ಹೋಗುತ್ತೇನೆ, ನನ್ನ ಜೀವನ ನನ್ನ ಇಷ್ಟ ಎಂದು ಹೇಳಿದ್ದರು. ಹೇಮಾ ಮಾದಕ ವಸ್ತು ಸೇವಿಸಿದ್ದಾರೆ ಎಂದು ಬೆಂಗಳೂರು ಪೊಲೀಸರು ಕೆಲವು ದಿನಗಳ ಕಾಲ ಜೈಲಿನಲ್ಲಿಯೇ ಇಟ್ಟಿದ್ದರು. ಆ ಬಳಿಕ ಹೇಮಾಗೆ ಷರುತ್ತುಬದ್ಧ ಜಾಮೀನು ಸಿಕ್ಕಿ  ಬಿಡುಗಡೆಗೊಂಡರು.

ಬೆಂಗಳೂರು ಹೊರವಲಯದ ತೋಟದ ಮನೆಯಲ್ಲಿ ಹುಟ್ಟುಹಬ್ಬದ ನೆಪದಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ನಟಿ ಹೇಮಾ ಸೇರಿ 100ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಆದರೆ, ಸಿಸಿಬಿ ಪೊಲೀಸರು ದಾಳಿ ಮಾಡಿದಾಗ ತಾನು ಪಾರ್ಟಿಗೆ ಹೋಗಿಲ್ಲ ಎಂದು ವಿಡಿಯೋ ಹರಿಬಿಟ್ಟಿದ್ದ ನಟಿ ಹೇಮಾ, ಕೊನೆಗೆ ಕೆಲವು ದಿನ ಬೆಂಗಳೂರಿನಲ್ಲಿ ಜೈಲು ಶಿಕ್ಷೆಯನ್ನೂ ಅನುಭವಿಸಿ ಹೋಗಿದ್ದರು.  ಮಾದಕ ವಸ್ತು ಸೇವನೆ ಮಾಡಲಾಗಿದೆ ಎಂದು ಜೈಲಿನಲ್ಲಿಡಲಾಗಿತ್ತು.

ಅತ್ಯಂತ ಜನಪ್ರಿಯ 10 ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣಗೆ ಸ್ಥಾನ, ಬಾಲಿವುಡ್ ಗೆ ಮಣೆ ಹಾಕೋರೇ ಇಲ್ಲ!

ಮೇ ತಿಂಗಳ 19ರ ಮಧ್ಯರಾತ್ರಿಯಿಂದ 20ರ ಬೆಳಗ್ಗಿನವರೆಗೂ ಸನ್‌ ಸೆಟ್ ಟು ಸನ್ ರೈಸ್ ಥೀಮ್ ಅಡಿಯಲ್ಲಿ ರೇವ್ ಮಾರ್ಟಿ ಮಾಡಲಾಗಿತ್ತು. ಈ ವೇಳೆ ನಟಿ ಹೇಮಾ ನಿಷೇಧಿತ MDMA ಮಾತ್ರೆ (ಡ್ರಗ್ಸ್) ಸೇವನೆ ಮಾಡಿದ್ದಾರೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಟಿ ಹೇಮಾ ಅವರನ್ನು ವಶಕ್ಕೆ ಪಡೆದು ರಕ್ತದ ಮಾದರಿ ಪರೀಕ್ಷೆ ಮಾಡಿದ್ದರು. ಇದರಲ್ಲಿ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆ ಪಾಸಿಟಿವ್ ಫಲಿತಾಂಶ ಬಂದಿತ್ತು. ನಂತರ, ಜೈಲಿಗೆ ಹೋದ ಹೇಮಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಆದರೆ ಇತ್ತೀಚೆಗೆ ಹೇಮಾ ತಾನು ನಿರಪರಾಧಿ  ತನ್ನನ್ನು ಬಲಿಪಶುವನ್ನಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ತನಗೆ ಮಾದಕ ವಸ್ತು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಹೇಮಾ ಕೆಲವು ವರದಿಗಳನ್ನು ಸಹ ತೋರಿಸಿದ್ದಾರೆ. ಹೇಮಾ ಈ ವಿಡಿಯೋ ಬಿಡುಗಡೆ ಮಾಡಿದ ಎರಡು ದಿನಗಳ ನಂತರ ತೆಲಗಿನ 'ಮಾ' ಅಸೋಸಿಯೇಷನ್ ಅವರ ಮೇಲಿನ ಅಮಾನತನ್ನು ಹಿಂತೆಗೆದುಕೊಂಡಿದೆ. ಹೀಗಾಗಿ ಮತ್ತೆ ಹೇಮಾ 'ಮಾ' ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ. ಇದು ಹೇಮಾಗೆ ದೊಡ್ಡ ನಿರಾಳತೆ  ತಂದುಕೊಟ್ಟಿದೆ.

ಬಾಲಿವುಡ್‌ ಮಂದಿ ಹಿಂದಿಕ್ಕಿ ಪ್ರಭಾಸ್‌ ನಂ-1 ಪಟ್ಟ ವಿಜಯ್ ಸೆಕೆಂಡ್‌, ಕನ್ನಡ ಆ್ಯಕ್ಟರ್ಸ್ ಯಾರಿದ್ದಾರೆ?

 ಆದರೆ ಹೇಮಾ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂದು 'ಮಾ'  ಅಸೋಸಿಯೇಷನ್(ಚಲನಚಿತ್ರ ಕಲಾವಿದರ ಸಂಘ)  ಷರತ್ತು ವಿಧಿಸಿದೆ ಎನ್ನಲಾಗಿದೆ. ಪೊಲೀಸರು ಹೇಮಾಗೆ ಮಾದಕ ವಸ್ತು ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಹೇಳಿದ್ದಾರೆ. ಹೇಮಾ ಮಾತ್ರ ನೆಗೆಟಿವ್ ಎಂದು ಹೇಳುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದರೆ ಇಂತಹ ವಿಷಯಗಳ ಬಗ್ಗೆ ಮತ್ತೆ ಚರ್ಚೆಗಳು ನಡೆಯುವ ಸಾಧ್ಯತೆ ಇದೆ. ಆದ್ದರಿಂದ ಮಾಧ್ಯಮಗಳೊಂದಿಗೆ ಮಾತನಾಡಬೇಡಿ ಎಂದು 'ಮಾ' ಅಸೋಸಿಯೇಷನ್ ಹೇಮಾಗೆ ಸೂಚಿಸಿದೆ ಎಂದು ವರದಿ ತಿಳಿಸಿದೆ. ಮಾಧ್ಯಮಗಳಲ್ಲಿ ಮಾತನಾಡಿ ಈ ವಿವಾದ ಇನ್ನಷ್ಟು ಹೆಚ್ಚಾಗಿ ಸಮಸ್ಯೆ ಮತ್ತಷ್ಟು ಬೆಳೆಯುವ ಸಾಧ್ಯತೆ ಇದೆ. ಅದಕ್ಕಾಗಿಯೇ ಹೇಮಾ ಮಾಧ್ಯಮಗಳಿಂದ ದೂರವಿರಬೇಕು ಷರತ್ತು ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

Latest Videos
Follow Us:
Download App:
  • android
  • ios