Asianet Suvarna News Asianet Suvarna News

ಅತ್ಯಂತ ಜನಪ್ರಿಯ 10 ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣಗೆ ಸ್ಥಾನ, ಬಾಲಿವುಡ್ ಗೆ ಮಣೆ ಹಾಕೋರೇ ಇಲ್ಲ!

ಓರ್ಮ್ಯಾಕ್ಸ್ ಮೀಡಿಯಾ 2024 ರ ಅತ್ಯಂತ ಜನಪ್ರಿಯ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆಲಿಯಾ ಭಟ್ ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಭಾರತದ ನಟಿಯರ ಪ್ರಾಬಲ್ಯವನ್ನು ಪಟ್ಟಿ ಸೂಚಿಸುತ್ತದೆ.

Ormax Media Most Popular Female Film Star In India 2024 Samantha Ruth Prabhu Overtakes gow
Author
First Published Aug 24, 2024, 3:31 PM IST | Last Updated Aug 24, 2024, 3:31 PM IST

Ormax Media ನ  2024 ರ ಅತ್ಯಂತ ಜನಪ್ರಿಯ  ಹಿರೋಯಿನ್ ಗಳ ಪಟ್ಟಿ ರಿಲೀಸ್‌ ಮಾಡಿದೆ.   ನಟಿ ಆಲಿಯಾ ಭಟ್‌ನಿಂದ ಹಿಡಿದು ಹಲವು ನಟಿಯರ ಹೆಸರಿದ್ದು ರಶ್ಮಿಕಾ ಮಂದಣ್ಣ ಕೂಡ ಟಾಪ್ 10 ರಲ್ಲಿ  ಸ್ಥಾನ ಪಡೆದಿರುವುದು ಮಾತ್ರವಲ್ಲ. ಕನ್ನಡದ ಏಕೈಕ ನಟಿ ಎನಿಸಿಕೊಂಡಿದ್ದಾರೆ.

ರಾಷ್ಟ್ರೀಯ ವೇದಿಕೆಯಲ್ಲಿ ದಕ್ಷಿಣ ಭಾರತದ ತಾರೆಗಳ ನಿರಂತರ ಪ್ರಭಾವವನ್ನು ಒತ್ತಿ ಹೇಳುತ್ತಿದೆ ನಟಿ ಆಲಿಯಾ ಭಟ್  ಮೊದಲ ಸ್ಥಾನ ಪಡೆದರೆ ಸಮಂತಾ ರುತು ಪ್ರಭು ಬಾಲಿವುಡ್‌ ನ ಹಲವು ತಾರೆಯರನ್ನು ಹಿಂದಿಕ್ಕಿ ಎರಡನೇ ಸ್ಥಾನ ಪಡೆದಿರುವುದು ಆಶ್ಚರ್ಯ ತರಿಸಿದೆ.   ಯಾರೆಲ್ಲ ಓರ್ಮ್ಯಾಕ್ಸ್ ಮೀಡಿಯಾದ  2024 ರ ಭಾರತದ ಅತ್ಯಂತ ಜನಪ್ರಿಯ ಮಹಿಳಾ ಚಲನಚಿತ್ರ ತಾರೆ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ ನೋಡೋಣ.

ಬಾಲಿವುಡ್‌ ಮಂದಿ ಹಿಂದಿಕ್ಕಿ ಪ್ರಭಾಸ್‌ ನಂ-1 ಪಟ್ಟ ವಿಜಯ್ ಸೆಕೆಂಡ್‌, ಕನ್ನಡ ಆ್ಯಕ್ಟರ್ಸ್ ಯಾರಿದ್ದಾರೆ?

ದಕ್ಷಿಣ ಭಾರತದ ತಾರೆಯರ ಜನಪ್ರಿಯತೆ ಹೆಚ್ಚುತ್ತಲೇ ಇರುವುದರಿಂದ, ಓರ್ಮ್ಯಾಕ್ಸ್ ಪಟ್ಟಿಯಲ್ಲಿ ಸೌತ್ ಸಿನಿ ತಾರೆಯರ ಹೆಸರು ಕೂಡ ಹೆಚ್ಚಿದೆ. ಭಾರತೀಯ ಚಿತ್ರರಂಗದಲ್ಲಿ ಬದಲಾಗುತ್ತಿರುವ ಡೈನಾಮಿಕ್ಸ್ ಅನ್ನು ಇದು ಹೇಳುತ್ತಿದೆ. ಕನ್ನಡತಿ ರಶ್ಮಿಕಾ ಮಂದಣ್ಣ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ.

ಸೌತ್ ಸಿನಿಗೆ ಮುಖ ಮಾಡಿದ ಬಾಲಿವುಡ್ ತಾರೆಗಳು, ರಿಲೀಸ್‌ಗೆ ಸಿದ್ಧ ಈ ಚಿತ್ರಗಳು!

ಟಾಪ್ 10 ಜನಪ್ರಿಯ ಮಹಿಳಾ ತಾರೆಯರ ಪಟ್ಟಿ ಇಲ್ಲಿದೆ:
ಆಲಿಯಾ ಭಟ್
ಸಮಂತಾ ರುತ್ ಪ್ರಭು
ದೀಪಿಕಾ ಪಡುಕೋಣೆ
ಕಾಜಲ್ ಅಗರ್ವಾಲ್
ನಯನತಾರಾ
ಕತ್ರಿನಾ ಕೈಫ್
ತ್ರಿಷಾ
ಕಿಯಾರಾ ಅಡ್ವಾಣಿ
ಕೃತಿ ಸನೋನ್
ರಶ್ಮಿಕಾ ಮಂದಣ್ಣ

Latest Videos
Follow Us:
Download App:
  • android
  • ios