ರಿಷಬ್ ಶೆಟ್ಟಿ- ಹರಿಪ್ರಿಯಾ ಕಾಂಬಿನೇಶನ್‌ನಲ್ಲಿ ಮೂಡಿ ಬಂದ 'ಬೆಲ್ ಬಾಟಂ' ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಿತ್ತು. ಈ ಚಿತ್ರ ಬಾಲಿವುಡ್‌ಗೆ ರಿಮೇಕ್ ಆಗುತ್ತದೆ ಎನ್ನಲಾಗುತ್ತಿತ್ತು.  ಅಕ್ಷಯ್ ಕುಮಾರ್ ಈ ಚಿತ್ರವನ್ನು ಮಾಡುತ್ತಾರೆ ಎನ್ನುವ ಸುದ್ದಿಯಿತ್ತು. ಇದರ ಬಗ್ಗೆ ಅಕ್ಷಯ್ ಕುಮಾರ್ ಸ್ಪಷ್ಟೀಕರಣ ಕೊಟ್ಟಿದ್ದಾರೆ. 

 

'ಬೆಲ್ ಬಾಟಂ' ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡಿ, ಬೆಲ್ ಬಾಟಂ ಯಾವ ಸಿನಿಮಾದ ರಿಮೇಕ್ ಅಲ್ಲ. ನೈಜ ಕಥೆಯನ್ನು ಆಧರಿಸಿ ಮಾಡುತ್ತಿರುವ ಸಿನಿಮಾ ಇದಾಗಿದೆ' ಎಂದಿದ್ದಾರೆ. 

ಸಲ್ಲುಭಾಯ್ ವಿರುದ್ಧ ತೊಡೆ ತಟ್ಟಿದ ಸುದೀಪ್; ಅರೇ ಏನಾಯ್ತು ಕಿಚ್ಚನಿಗೆ?

ಅಕ್ಷಯ್ ಕುಮಾರ್ ಪ್ರತಿಕ್ರಿಯೆ ಸಹಜವಾಗಿ ಕುತೂಹಲ ಮೂಡಿಸಿದೆ.   ಬೆಲ್ ಬಾಟಂ ಚಿತ್ರದಲ್ಲಿ ಅಕ್ಷಯ್ 80 ರ ದಶಕಕ್ಕೆ ಕರೆದೊಯ್ಯುತ್ತಾರೆ. ಬೇಹುಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಬೆಲ್ ಬಾಟಂ ಚಿತ್ರವನ್ನು ರಂಜಿತ್ ಎಂ ತಿವಾರಿ ನಿರ್ದೇಶಿಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಜನವರಿ 22,  2021 ರಲ್ಲಿ ತೆರೆಗೆ ಬರಲಿದೆ. 

ಅಕ್ಷಯ್ ಕುಮಾರ್ ನಟನೆಯ 'ಮಿಷನ್ ಮಂಗಲ್' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಅದೇ ರೀತಿ ಹೌಸ್ ಫುಲ್ 4 ಗೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಒಟ್ಟು 103 ಕೋಟಿ ಬಾಕ್ಸಾಫೀಸ್ ಕಲೆಕ್ಷನ್ ಕಂಡಿತ್ತು.