Asianet Suvarna News Asianet Suvarna News

ನಿರ್ದೇಶಕ ರಾಜಮೌಳಿ ಮದ್ವೆಯಾಗಿದ್ದು ಮಗುವಿನ ತಾಯಿಯಾಗಿದ್ದ ವಿವಾಹಿತೆಯನ್ನು!

ತೆಲುಗಿನ ಪ್ರತಿಭಾವಂತ ನಿರ್ದೇಶಕ ರಾಜಮೌಳಿ ಅವರ ಲವ್‌ಸ್ಟೋರಿಯೇ ಸಿನಿಮಾ ಕಥೆಯ ಹಾಗಿದೆ. ವಿವಾಹಿತೆ, ಒಂದು ಮಗುವಿನ ತಾಯಿಯ ಜೊತೆಗೆ ಅವರು ಲವ್ವಲ್ಲಿ ಬಿದ್ದ ಸಖತ್‌ ಇಂಟ್ರೆಸ್ಟಿಂಗ್‌ ಸ್ಟೋರಿ ಇಲ್ಲಿದೆ.

 

Bahubali director Rajamouli got married to woman with a son
Author
Bengaluru, First Published May 27, 2021, 1:42 PM IST

ಮಗಧೀರ, ಈಗ, ಬಾಹುಬಲಿ, ಈಗ ಆರ್‌ಆರ್‌ಆರ್‌ನಂಥಾ ಅದ್ದೂರಿ ಬಜೆಟ್ ಚಿತ್ರಗಳ ಯಶಸ್ವೀ ನಿರ್ದೇಶಕ ರಾಜಮೌಳಿ. ಇವಳ ಲೈಫು ಯಾವ ಸಿನಿಮಾ ಸ್ಟೋರಿಗೂ ಕಮ್ಮಿಯಿಲ್ಲ. ಇವರು ಮದುವೆಯಾಗಿದ್ದು ಒಬ್ಬ ವಿವಾಹಿತ ಹೆಣ್ಣು ಮಗಳನ್ನ. ಅಷ್ಟೇ ಅಲ್ಲ, ಇವರನ್ನು ಮದುವೆಯಾಗುವ ಹೊತ್ತಿಗೆ ಆಕೆ ಒಂದು ಮಗುವಿನ ತಾಯಿಯೂ ಆಗಿದ್ದರು. ಮತ್ತೊಂದು ವಿಷಯ ಏನು ಗೊತ್ತಾ, ರಾಜಮೌಳಿ ಪತ್ನಿ ಅವರಿಗಿಂತ ನಾಲ್ಕೈದು ವರ್ಷ ದೊಡ್ಡವರು. ಇಷ್ಟೆಲ್ಲ ಇದ್ದರೂ ಇವರಿಬ್ಬರನ್ನು ಜೀವಸಂಗಾತಿಗಳನ್ನಾಗಿಸಿ ಲೈಫು ಸೂಪರು ಅನ್ನೋ ಹಾಗೆ ಮಾಡಿದ್ದು ಪರಿಶುದ್ಧ ಪ್ರೀತಿ. 

Bahubali director Rajamouli got married to woman with a son

ಅದು 2001ನೇ ಇಸವಿಯ ಆಸುಪಾಸು. ರಾಯಚೂರು ಮಾನ್ವಿ ಮೂಲದ, ಟಾಲಿವುಡ್ನಲ್ಲಿ ಪ್ರಸಿದ್ಧ ಸ್ಕ್ರಿಪ್ಟ್ ರೈಟರ್ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರ ಮಗ ತನ್ನ ವಿಭಿನ್ನ ಆಲೋಚನೆಗಳ ಮೂಲಕ ಗಮನ ಸೆಳೆಯುತ್ತಿದ್ದ. ಸದಾ ತನ್ನ ಫ್ಯಾಂಟಸಿಯಲ್ಲಿ ಮುಳುಗಿರುತ್ತಿದ್ದ ಆ ಯುವಕನಿಗೆ ತನ್ನ ಯೋಚನೆಗಳನ್ನು ಸ್ಕ್ರೀನ್‌ ಮೇಲೆ ತರೋದೇ ದೊಡ್ಡ ಚಾಲೆಂಜ್‌ ಅನಿಸುತ್ತಿತ್ತು. ಕೆ. ರಾಘವೇಂದ್ರ ರಾವ್‌ ಅವರ ಮಾರ್ಗದರ್ಶನದಲ್ಲಿ ಶಾಂತಿ ನಿವಾಸ ಎಂಬ ಸೀರಿಯಲ್‌ ನಿರ್ದೇಶನ ಮಾಡುತ್ತಿದ್ದರೂ, ಅತೃಪ್ತಿ ಮುಳ್ಳಿನಂತೆ ಸದಾ ಚುಚ್ಚುತ್ತಾ ಇರುತ್ತಿತ್ತು. ಅಂಥದ್ದೊಂದು ವಿಚಿತ್ರ ಸನ್ನಿವೇಶದಲ್ಲಿ ಆತ ಖ್ಯಾತ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಅವರ ಮನೆಗೆ ಹೋಗುತ್ತಾನೆ. ಅವರು ದೂರದಲ್ಲಿ ಈತನ ಸಂಬಂಧಿಯೂ ಹೌದು. ಹಾಗೆ ಹೋದಾಗ ಸಿಕ್ಕವರು ಕೀರವಾಣಿ ಅವರ ಪತ್ನಿ ಶ್ರೀವಲ್ಲಿ ಅವರ ತಂಗಿ ರಮಾ. ಸಣ್ಣ ಸಂಕೋಚದ ನಗು, ಉಭಯ ಕುಶಲೋಪರಿ ಮಾತುಕತೆಗಳ ಮೂಲಕ ಶುರುವಾದ ಅವರ ಒಡನಾಡ ಒಂದು ಹಂತದಲ್ಲಿ ಪ್ರೀತಿಗೆ ತಿರುಗುತ್ತದೆ. 

ಸೀರಿಯಲ್‌ನಲ್ಲಿ ಬರೀ ರೆಸಾರ್ಟ್ ಸೀನ್ಸ್, ದೊಡ್ಡೋರೆಲ್ಲ ಮಂಗಮಾಯ, ಏಕೆ? ...

ಇದು ಜಗತ್ತು ತಿರುಗಿ ನೋಡುವ ಪ್ರತಿಭಾವಂತ ನಿರ್ದೇಶಕ ಎಂದೇ ಖ್ಯಾತರಾದ ರಾಜಮೌಳಿ ಅವರ ಕತೆ. ಅವರಿಗೆ ಸಿಕ್ಕ ರಮಾ ಮುಂದೆ ಅವರ ಜೀವನ ಸಂಗಾತಿಯಾಗುತ್ತಾರೆ. ಆದರೆ ಇವರನ್ನು ಭೇಟಿ ಮಾಡುವ ಹೊತ್ತಿಗಾಗಲೇ ರಮಾ ಅವರು ವಿವಾಹಿತೆ. ಒಂದು ಮಗುವಿನ ತಾಯಿ. ರಮಾ ಅವರು ಪದವಿ ಓದುತ್ತಿರುವಾಗಲೇ ಹೆತ್ತವರು ಮದುವೆ ಮಾಡುತ್ತಾರೆ. ಆದರೆ ಸದಾ ಕಿರುಕುಳ ಕೊಡುವ ಗಂಡನ ಜೊತೆಗೆ ಹೆಚ್ಚು ಕಾಲ ಇರಲಾಗುವುದಿಲ್ಲ. ಆತನ ಜೊತೆಗಿನ ಸಂಬಂಧದಲ್ಲಿ ಒಂದು ಮಗುವಿದ್ದರೂ, ಆ ಮಗುವಿನೊಂದಿಗೇ ಆತನಿಂದ ಬೇರ್ಪಡುತ್ತಾರೆ ರಮಾ. ಅಕ್ಕ ಶ್ರೀವಲ್ಲಿ ಅವರ ಮನೆಯಲ್ಲಿದ್ದುಕೊಂಡು ಯೆಲ್ಲೋ ಮೀಡಿಯಾ ಅನ್ನೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಆಗ ಕೀರವಾಣಿ ಅವರ ಸಂಬಂಧಿ ರಾಜಮೌಳಿ ಅವರ ಪರಿಚಯವಾಗುತ್ತದೆ. ಇಬ್ಬರ ಯೋಚನೆಗಳು, ವೇವ್‌ಲೆಂಥ್ ಎಷ್ಟರ ಮಟ್ಟಿಗೆ ಕನೆಕ್ಟ್ ಆಗುತ್ತೆ ಅಂದರೆ ಸಿನಿಮಾದಲ್ಲಿ ಮಾತಾಡಲು ಕೂತರೆ ಇಬ್ಬರಿಗೂ ಸಮಯ ಸರಿದದ್ದೇ ತಿಳಿಯೋದಿಲ್ಲ. ಒಂದು ಹಂತದಲ್ಲಿ ಇಬ್ಬರಿಗೂ ಮದುವೆಯ ಯೋಚನೆ ಬರುತ್ತದೆ. ಜೀವನ ಸಂಗಾತಿಗಳಾಗಲು ನಿರ್ಧರಿಸುತ್ತಾರೆ. ಕೆಲವೇ ಗೆಳೆಯರ ಸಮ್ಮುಖದಲ್ಲಿ ಸಿನಿಮಾ ಶೂಟಿಂಗ್ ವೇಳೆಯಲ್ಲೇ ಇವರಿಬ್ಬರೂ ಸರಳವಾಗಿ ಮದುವೆಯಾಗುತ್ತಾರೆ. 

ಬಂಡೀಪುರದಲ್ಲಿ ಪತ್ನಿಯೊಂದಿಗೆ ರಾಜಮೌಳಿ

ಮದುವೆಯಾದ ಕೆಲವು ವರ್ಷಗಳ ತನ್ನ ಯೋಚನೆಗಳನ್ನ ಸಿನಿಮಾಕ್ಕಿಳಿಸಲು ರಾಜಮೌಳಿ ಕಷ್ಟಪಟ್ಟರೂ ಒಂದು ಹಂತದಲ್ಲಿ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಾರೆ. ಇವರೆಲ್ಲ ಕೆಲಸಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಾ, ಚಿತ್ರಗಳಿಗೆ ವಸ್ತ್ರವಿನ್ಯಾಸ ಮಾಡುತ್ತಾ ಹೆಗಲು ಕೊಟ್ಟವರು ರಮಾ. 'ಎಲ್ಲಾ ಹುಡುಗರ ಹಾಗೇ ನನಗೂ ನನ್ನ ಹುಡುಗಿಯ ಬಗ್ಗೆ ಕನಸುಗಳಿದ್ದವು. ಅವನ್ನೆಲ್ಲ ನನಸು ಮಾಡಿದವಳು ರಮಾ,' ಎಂದು ಪತ್ನಿಯ ಬಗ್ಗೆ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ ರಾಜಮೌಳಿ. ರಮಾ ಮಗನನ್ನು ಸ್ವಂತ ಮಗನಂತೆ ಬೆಳೆಸಿದ್ದಾರೆ. ಆತನಿಗೀಗ ಮದುವೆಯೂ ಆಗಿದೆ. ಈ ದಂಪತಿ ಹೆಣ್ಣು ಮಗುವೊಂದನ್ನು ದತ್ತು ಪಡೆದು ಪೋಷಿಸುತ್ತಿದ್ದಾರೆ. RRR ಸೇರಿ ರಾಜಮೌಳಿ ಅವರ ಎಲ್ಲ ಸಿನಿಮಾಗಳಿಗೂ ವಸ್ತ್ರ ವಿನ್ಯಾಸ ಮಾಡಿದವರು ರಮಾ. ಕಾಸ್ಟ್ಯೂಮ್‌ ಡಿಸೈನಿಂಗ್‌ಗಾಗಿ ಮೂರು ಬಾರಿ ಪ್ರತಿಷ್ಠಿತ ನಂದಿ ಅವಾರ್ಡ್ ಪಡೆದ ಪ್ರತಿಭಾವಂತೆ ಈ ರಮಾ ರಾಜಮೌಳಿ.

ಪ್ರಭಾಸ್ ಹಾಗೂ ರಾಜಮೌಳಿ ಅಷ್ಟು ಫ್ರೆಂಡ್ಸ್ ಆಗಿದ್ದು ಹೇಗೆ? ರಿವೀಲ್ ಮಾಡಿದ ಡೈರೆಕ್ಟರ್
 

Follow Us:
Download App:
  • android
  • ios