ಶತಮಾನಗಳಿಂದ ಚರ್ಚಾಸ್ಪದವಾಗಿದ್ದ ರಾಮ ಮಂದಿರ- ಬಾಬ್ರಿ ಮಸೀದಿ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ವಿವಾದಿತ 2.77 ಎಕರೆ ಭೂಮಿಯನ್ನು ರಾಮಲಲ್ಲಗೆ ವಹಿಸಿ ರಾಮ ಮಂದಿರ ನಿರ್ಮಾಣಕ್ಕೆ ಅಸ್ತು ಎಂದಿದೆ. ಇದಕ್ಕೆ ಪರ್ಯಾಯವಾಗಿ ಮುಸಲ್ಮಾನರಿಗೆ 5 ಎಕರೆ ಪ್ರತ್ಯೇಕ ಭೂಮಿಯನ್ನು ನೀಡಬೇಕೆಂದು ಸುಪ್ರೀಂ ಹೇಳಿದೆ. 

ಮುಖ್ಯ ನ್ಯಾ. ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠದ ಈ ಐತಿಹಾಸಿಕ ತೀರ್ಪನ್ನು ಇಡೀ ದೇಶ ಸ್ವಾಗತಿಸಿದೆ. ಇದು ಯಾರ ಗೆಲುವೂ ಅಲ್ಲ, ಯಾರ ಸೋಲೂ ಅಲ್ಲ ಸಾಮರಸ್ಯ ಕಾಪಾಡಿ ಎಂದು  ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. 

ಅಯೋಧ್ಯೆ ಮಹಾತೀರ್ಪನ್ನು ಸಿನಿಮಾ ಸೆಲಬ್ರಿಟಿಗಳು ಸ್ವಾಗತಿಸಿದ್ದು ಹೀಗೆ. 

 

ನವೆಂಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ