Asianet Suvarna News Asianet Suvarna News

ದೀಪಿಕಾ ಪಡುಕೋಣೆ-ರಣವೀರ್‌ಗೆ ಗಂಡು ಮಗು, ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಗಂಡು ಮಗುವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಖ್ಯಾತ ಜ್ಯೋತಿಷಿ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಈ ಮಗುವಿನಿಂದ ದೀಪಿಕಾ ದಂಪತಿ ಕುಟುಂಬದಲ್ಲಾಗುವ ಮಹತ್ತರ ಬದಲಾವಣೆಯನ್ನೂ ಜ್ಯೋತಿಷಿ ಹೇಳಿದ್ದಾರೆ.
 

Astrologer predicts deepika padukone and ranveer singh welcome baby boy on September ckm
Author
First Published Jul 4, 2024, 7:47 PM IST

ಮುಂಬೈ(ಜು.04) ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ದಂಪತಿಗೆ ಹುಟ್ಟುವಿನ ಮಗುವಿನ ಕುರಿತು ಕುತೂಹಲ, ಚರ್ಟೆಗಳು ನಡೆಯುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಈ ಸೆಲೆಬ್ರೆಟಿ ಜೋಡಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಈ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕಾರಣ ಖ್ಯಾತ ಜ್ಯೋತಿಷಿ ಪಂಡಿತ್ ಜಗನ್ನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ. ದೀಪಿಕಾ ಹಾಗೂ ರಣವೀರ್ ಗಂಡು ಮಗುವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಜ್ಯೋತಿಷಿ ಹೇಳಿದ್ದಾರೆ. ಈ ಮಗು ದಂಪತಿಗಳಿಗೆ ರಾಜಯೋಗ ತರಲಿದೆ ಎಂದಿದ್ದಾರೆ.

ಕಲ್ಕಿ ನಟಿ ದೀಪಿಕಾ ಹಾಗೂ ರಣವೀರ್ ಸಿಂಗ್‌ಗೆ ಹುಟ್ಟಲಿರುವ ಗಂಡು ಮಗುವಿಗೆ ಸಂಪೂರ್ಣ ದೇವರ ಅನುಗ್ರಹವಿದೆ. ಮಗುವಿನ ಶುಕ್ರ ದೆಸೆ ಸೆಲೆಬ್ರೆಟಿ ದಂಪತಿಗಳ ಯಶಸ್ಸು ದಪ್ಪುಟ್ಟು ಮಾಡಲಿದೆ ಎಂದು ಜಗನ್ನಾಥ ಗುರೂಜಿ ಹೇಳಿದ್ದಾರೆ. ದೀಪಿಕಾ ಹಾಗೂ ರಣವೀರ್ ಬಾಳಲ್ಲಿ ಗಂಡು ಮಗು ಹೊಸ ಯಶಸ್ಸನ್ನು ನೀಡಲಿದೆ. ಈ ಜೋಡಿಯ ಪ್ರೀತಿ, ಖುಷಿ ಹಾಗೂ ಸಂಭ್ರವನ್ನು ಹೆಚ್ಚಿಸಲಿದೆ ಎಂದು ಜ್ಯೋತಿಷಿ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಐವಿಎಫ್ ತಜ್ಞೆ ಅನುಮಾನ, ಬೇಬಿ ಬಂಪ್‌ ಶೇಪ್ ಬಗ್ಗೆ ಕಮೆಂಟ್‌!

ದೀಪಿಕಾ ಪಡುಕೋಣೆ ತಾವು ಗರ್ಭಿಣಿ ಅನ್ನೋ ಮಾಹಿತಿಯನ್ನು ಫೆಬ್ರವರಿ 29ರಂದು ಘೋಷಿಸಿದ್ದರು.  ಸರಳ ಪೋಸ್ಟ್‌ನಲ್ಲಿ ಮಗುವಿನ ಆಟಿಕೆ ಸಾಮಗ್ರಿಗಳ ಹಂಚಿಕೊಂಡಿರುವ ದಂಪತಿ ಈ ವರ್ಷದ ಸೆಪ್ಟೆಂಬರ್‌ ವೇಳೆಗೆ ಮಗುವಿನ ನಿರೀಕ್ಷೆ ಇರುವುದಾಗಿ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ದೀಪಿಕಾ ಪಡುಕೋಣೆ ಈ ಮಾಹಿತಿ ಹಂಚಿಕೊಂಡಿದ್ದರು. ಇದಾದ ಬಳಿಕ ದೀಪಿಕಾ ಎಲ್ಲೆ ಹೋದರು ಬಾರಿ ಸುದ್ದಿಯಾಗುತ್ತಿದೆ. ಕಲ್ಕಿ ಚಿತ್ರದ ಪ್ರಮೋಶನ್ ವೇಳೆ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಗಳು ವೈರಲ್ ಆಗಿತ್ತು.

ಪ್ರಮೇಶನ್ ವೇಳೆ ದೀಪಿಕಾ ಪಡುಕೋಣೆ  ಬಾಡಿಕಾನ್‌ ಡ್ರೆಸ್‌ ಜೊತೆಗೆ ಅದಕ್ಕೆ ಮ್ಯಾಚಿಂಗ್‌ ಆಗುವ ಹೈ ಹೀಲ್ಸ್‌ ಧರಿಸಿ ಬಂದಿದ್ದರು.ಬಾಲಿವುಡ್‌ನಲ್ಲಿ ಸೆಲೆಬ್ರಿಟಿಗಳು ಗರ್ಭವತಿಯರಾದಾಗ ಹೀಲ್ಸ್‌ ಧರಿಸೋದು ಹೊಸ ಟ್ರೆಂಡ್ ಆಗಿ ಬದಲಾಗಿದೆ. ತುಂಬು ಗರ್ಭಿಣಿ ಚೂಪಾದ ಪೆನ್ಸಿಲ್‌ ಹೀಲ್ಸ್‌ನಲ್ಲಿ ಸರ್ಕಸ್‌ ಮಾಡುತ್ತಾ ಎಲ್ಲಿ ಬಿದ್ದು ಬಿಡುತ್ತಾರೋ ಎಂಬ ಆತಂಕದಲ್ಲಿ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಓಡೋಡಿ ಬಂದು ಪಡುಕೋಣೆಗೆ ಸಹಾಯ ಮಾಡಿದ್ದರು.

ದೀಪಿಕಾ ಸುಳ್ಳು ಗರ್ಭಿಣಿ ಎಂದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ರಿಚಾ ಚಡ್ಡಾ!

ಗರ್ಭಿಣಿಯಾಗಿರುವ ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮ ಮೊದಲ ಮಗುವಿನ ಹೆರಿಗೆಯನ್ನು ಬೆಂಗಳೂರಿನಲ್ಲೇ ಮಾಡಿಸಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ದೀಪಿಕಾ ಬೆಂಗಳೂರಿನಲ್ಲಿರುವ ತಮ್ಮ ಪೋಷಕರ ಮನೆಗೆ ಆಗಮಿಸಿದ್ದು, ಇಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.  
 

Latest Videos
Follow Us:
Download App:
  • android
  • ios