ವಯಸ್ಸು ಮ್ಯಾಟರ್ ಆಗಲ್ಲ, ಸಂತೋಷ ಮುಖ್ಯ: 2ನೇ ಮದುವೆಯಾದ 57ರ ಆಶಿಶ್ ವಿದ್ಯಾರ್ಥಿ ರಿಯಾಕ್ಷನ್
ಮದುವೆಗೆ ವಯಸ್ಸು ಮುಖ್ಯವಲ್ಲ ಸಂತೋಷ ಮುಖ್ಯವಾಗುತ್ತದೆ ಎಂದು 2ನೇ ಮದುವೆಯಾದ 57 ವರ್ಷದ ನಟ ಆಶಿಶ್ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಿದ್ದಾರೆ.
ಬಹುಭಾಷಾ ನಟ ಆಶಿಶ್ ವಿದ್ಯಾರ್ಥಿ 57ನೇ ವಯಸ್ಸಿನಲ್ಲಿ 2ನೇ ಮದುವೆಯಾಗುವ ಮೂಲಕ ಅಚ್ಚರಿ ಮೂಡಿಸಿದರು. ಅಸ್ಸಾಂ ಮೂಲದ ಫ್ಯಾಷನ್ ಸ್ಟೋರ್ ಒಡತಿ ರೂಪಾಲಿ ಬರುವಾ ಅವರ ಜೊತೆ 2ನೇ ಬಾರಿಗೆ ದಾಂಪತ್ಯಕ್ಕೆ ಕಾಲಿಟ್ಟರು. ಮೊದಲ ಪತ್ನಿ ಪಿಲ್ಪ್ ಅವರಿಂದ ದೂರಾಗಿ ಒಂಟಿಯಾಗಿದ್ದ ಆಶಿಶ್ ವಿದ್ಯಾರ್ಥಿ ಇದೀಗ ಮತ್ತೆ ಜಂಟೆಯಾಗಿದ್ದಾರೆ. ಗುರುವಾರ ನಡೆದ ಸರಳ ವಿವಾಹದಲ್ಲಿ ಆಶಿಶ್ ಮತ್ತು ರೂಪಾಲಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡರು. ಇಬ್ಬರ ವಿವಾಹ ಸಮಾರಂಭದಲ್ಲಿ ಆಪ್ತರು ಮತ್ತು ಕುಟುಂಬದ ಕೆಲವೇ ಕೆಲವು ಸದ್ಯರು ಭಾಗಿಯಾಗಿದ್ದರು. ಇಬ್ಬರ ಮದುವೆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅನೇಕರು ಆಶಿಶ್ ವಿದ್ಯಾರ್ಥಿ ಜೋಡಿಯನ್ನು ಟ್ರೋಲ್ ಮಾಡುತ್ತಿದ್ದಾರೆ. ಈ ವಯಸ್ಸಿನಲ್ಲಿ ಮದುವೆ ಬೇಕಿತ್ತಾ ಎಂದು ಕಾಲೆಳೆಯುತ್ತಿದ್ದಾರೆ.
ಈ ಬಗ್ಗೆ ಆಶಿಶ್ ವಿದ್ಯಾರ್ಥಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಮೂಲಕ ಆಶಿಶ್ ವಿದ್ಯಾರ್ಥಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ಮೊದಲ ಪತ್ನಿಯ ಬಗ್ಗೆಯೂ ಮಾತನಾಡಿದ್ದಾರೆ. 22 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿ ಪಿಲೂ ಅವರನ್ನು ಹೇಗೆ ಭೇಟಿಯಾದರು ಮತ್ತು ಒಬ್ಬ ಮಗ ಇದ್ದ ಬಗ್ಗೆ ಬಹಿರಂಗ ಪಡಿಸಿದರು. ಪಿಲೂ ಮತ್ತು ಆಶಿಶ್ ಇಬ್ಬರೂ ವಿಭಿನ್ನವಾಗಿ ಭವಿಷ್ಯ ನೋಡಿದ ಕಾರಣ ದೂರ ಆದೆವು ಎಂದು ಹೇಳಿದ್ದಾರೆ.
ಆಶಿಶ್ ವಿದ್ಯಾರ್ಥಿ ಮದುವೆಯಾಗಿರುವ ರೂಪಾಲಿ ಬರುವಾ ಯಾರಿದು?
'ನಾವೆಲ್ಲರೂ ಸಂತೋಷವಾಗಿ ಇರಲು ಬಯಸುತ್ತೇವೆ. 22 ವರ್ಷಗಳ ಹಿಂದೆ ಪಿಲೂ ಮತ್ತು ನಾನು ಭೇಟಿಯಾದೆವು ಬಳಿಕ ಮದುವೆ ಆದೆವು ಅದ್ಭುತವಾಗಿತ್ತು. ನಮಗೆ ಈಗ 22 ವರ್ಷದ ಅರ್ಥ್ ಎನ್ನುವ ಮಗನಿದ್ದಾನೆ. ಈಗ ಕೆಲಸ ಮಾಡುತ್ತಿದ್ದಾನೆ. ಆದರೆ ಕಳೆದ ಎರಡು ವರ್ಷಗಳಿಂದ ಪಿಲೂ ಮತ್ತು ನಾನು ಭವಿಷ್ಯವನ್ನು ವಿಭಿನ್ನವಾಗಿ ನೋಡಿದ ಕಾರಣ ಪರಸ್ಪರ ವಿಭಿನ್ನವಾಗಿದೆ ಎಂದು ನಾವು ಭಾವಿಸಿದೆವು. ಅದು ಸಂತೋಷವನ್ನು ಕಸಿದುಕೊಳ್ಳುತ್ತದೆ. ಸಂತೋಷ ನಮಗೆ ಬೇಕು ತಾನೆ?' ಎಂದು ಹೇಳಿದ್ದಾರೆ.
ಆಶಿಶ್ ವಿದ್ಯಾರ್ಥಿ-ರೂಪಾಲಿ ಬರುವಾ ಮದುವೆ Exclusive ಫೋಟೋಸ್
'ನಾನು ಮತ್ತೆ ಮದುವೆಯಾಗಲು ಬಯಸಿದೆ. ಯಾಕೆಂದರೆ ನಾನು ಯಾರ ಜೊತೆಗಾದ್ರು ಪಯಣ ಮಾಡಲು ಬಯಸುತ್ತೇನೆ ಎಂದು ನನಗೆ ದೃಢವಾದ ನಂಬಿಕೆ ಇತ್ತು. ನಾನು ಆ ಸಮಯದಲ್ಲಿ 55 ವರ್ಷ ವಯಸ್ಸಿನವನಾಗಿದ್ದೆ. ಆಗ ನಾನು ಯಾರನ್ನಾದರೂ ಮದುವೆಯಾಗಲು ಬಯಸಿದೆ. ಆಗ ನಾನು ರೂಪಾಲಿ ಬರುವಾ ಅವರನ್ನು ಭೇಟಿ ಮಾಡಿದೆ. ಇಬ್ಬರೂ ಚಾಟಿಂಗ್ ಬಳಿಕ ವರ್ಷದ ಹಿಂದೆ ಭೇಟಿಯಾದೆವು. ನಾವು ಗಂಡ-ಹೆಂಡತಿಯಾಗಿ ಒಟ್ಟಿಗೆ ನಡೆಯಬಹುದೆಂದು ಅರಿತು ಕೊಂಡೆವು. ಹಾಗಾಗಿ ನಾನು ಮತ್ತು ರೂಪಾಲಿ ಮದುವೆಯಾದೆವು. ಆಕೆಗೆ 50 ವರ್ಷ. ನನ್ನ ವಯಸ್ಸು 57. ವಯಸ್ಸು ಮ್ಯಾಟರ್ ಆಗಲ್ಲ. ನಾವು ಸಂತೋಷವಾಗಿರುವುದು ಮುಖ್ಯ. ವಯಸ್ಸು ಏನೇ ಇರಲಿ, ಗೊರವದಿಂದ ಮುಂದೆ ಸಾಗೋಣ' ಎಂದು ಹೇಳಿದ್ದಾರೆ.