Asha Parekh: ನಟನಿಗೆ ವಯಸ್ಸಾದ್ರೆ ಹಾಗೆ, ನಟಿಗೆ ಆದ್ರೆ ಹೀಗೆ! ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದ ನಟಿ
ನಟನಿಗೆ ವಯಸ್ಸಾದರೆ ಒಂದು ನ್ಯಾಯ ನಟಿಗೆ ಆದರೆ ಇನ್ನೊಂದು ನ್ಯಾಯ ಏಕೆ ಎಂದು ಪ್ರಶ್ನಿಸಿರೋ ಹಿರಿಯ ಬಾಲಿವುಡ್ ನಟಿ ಆಶಾ ಪರೇಖ್ ಹೇಳಿದ್ದೇನು?
1960- 1970 ರ ದಶಕಗಳಲ್ಲಿ ಬಾಲಿವುಡ್ ಆಳಿದ ತಾರೆಯರಲ್ಲಿ ಒಬ್ಬರು ಆಶಾ ಫರೇಖ್ (Asha Parekh). 1942ರಲ್ಲಿ ಜನಿಸಿರೋ ಆಶಾ ಅವರಿಗೆ ಈಗ 80 ವರ್ಷ ವಯಸ್ಸು. ಇವರು ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ ಕೂಡ. ತಮ್ಮ ಸಮಯದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆ ಪಡೆದಿರೋ ಆಶಾ ಫರೇಖ್ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾಗಿರುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಕೂಡ ಪಡೆದವರು. 2020ರಲ್ಲಿ ಇವರಿಗೆ ಪ್ರಶಸ್ತಿ ಲಭಿಸಿದ್ದು, ಚಲನಚಿತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಬೇಬಿ ಆಶಾ ಪರೇಖ್ ಎಂಬ ಪರದೆಯ ಹೆಸರಿನಲ್ಲಿ ಬಾಲ ಕಲಾವಿದೆಯಾಗಿ 10ನೇ ವಯಸ್ಸಿನಲ್ಲಿಯೇ ನಟನೆ ಶುರು ಮಾಡಿದ ಆಶಾ, ಅವರು ನೂರಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 16ನೇ ವಯಸ್ಸಿನಲ್ಲಿಯೇ ನಾಯಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ತೀಸ್ರಿ ಮಂಜಿಲ್, ಬಹಾರೋ ಕೆ ಸಪ್ನೆ, ಪ್ಯಾರ್ ಕಾ ಮೌಸಮ್ ಮತ್ತು ಕಾರವಾನ್ ನಂತಹ ಚಿತ್ರಗಳಲ್ಲಿ ನಟಿಸಿ ಸಕತ್ ಫೇಮಸ್ ಆಗಿರುವ ನಟಿ ಇವರು.
ಅದೇ ಇನ್ನೊಂದೆಡೆ, ಇದೇ ವಯಸ್ಸಿನ ಅಮಿತಾಭ್ ಬಚ್ಚನ್ (Amitabh Bachchan) ಕೂಡ ಆಶಾ ಪರೇಖ್ ಅವರಷ್ಟೇ ಖ್ಯಾತನಾಮರು. ಇಬ್ಬರೂ ಒಂದೇ ಇಸ್ವಿಯಲ್ಲಿ ಹುಟ್ಟಿರುವುದು ವಿಶೇಷ. ಆದರೆ ಇವರಿಬ್ಬರ ಹೋಲಿಕೆ ಇಲ್ಲೇಕೆ ಎನ್ನುವುದೇ ಇರುವುದು ವಿಶೇಷ. ಬ್ಲ್ಯಾಕ್ ಆ್ಯಂಡ್ ವೈಟ್ ಕಾಲದ ಹೀರೋಗಳನ್ನೊಮ್ಮೆ ನೆನಪಿಸಿಕೊಳ್ಳಿ. ಅದು ಬಾಲಿವುಡ್ಡೇ ಆಗಿರಬೇಕೆಂದೇನೂ ಇಲ್ಲ. ಯಾವುದೇ ಚಿತ್ರ ತೆಗೆದುಕೊಂಡರೂ, ಮೊದಲಿಗೆ ನಾಯಕನಿಗೆ ನಾಯಕಿಯಾಗಿ ನಟಿಯರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುತ್ತಾರೆ. ಅವರ ಜೋಡಿ ಸಕತ್ ಫೇಮಸ್ ಕೂಡ ಆಗಿರುತ್ತದೆ, ಅವರಿಬ್ಬರ ಕೆಮೆಸ್ಟ್ರಿಯನ್ನು ಫ್ಯಾನ್ಸ್ ಇಷ್ಟಪಟ್ಟಿರುತ್ತಾರೆ. ಆದರೆ ಕೆಲವೇ ವರ್ಷಗಳಲ್ಲಿ ಅವರಿಬ್ಬರಿಗೂ ವಯಸ್ಸಾಗುತ್ತದೆ. ಅಸಲಿಗೆ ನಾಯಕನಿಗಿಂತ ನಾಯಕಿಯಾದವಳಿಗೆ ತೀರಾ ಕಡಿಮೆ ವಯಸ್ಸಿರುತ್ತದೆ. ಇದರ ಹೊರತಾಗಿಯೂ ನಾಯಕನಿಗೆ ಇದೇ ನಟಿ ಕೆಲ ವರ್ಷಗಳ ಬಳಿಕ ತಾಯಿಯಾಗಿಯೋ, ಹಿರಿಯಕ್ಕಳಾಗಿಯೋ ನಟಿಸುವುದನ್ನು ನೋಡಿರಬಹುದು. ಹಿಂದೊಮ್ಮೆ ಇವರದ್ದೇ ಜೋಡಿ ಫೇಮಸ್ ಆಗಿದ್ದಾ ಎಂದು ಸಂದೇಹ ಬರುವಂತೆ ಅವರು ಅಮ್ಮ-ಮಗನಾಗಿ ನಟಿಸುತ್ತಾರೆ.
ಬಂಜೆ ಎಂಬ ಹೀಯಾಳಿಕೆಯಿಂದ ಡಿವೋರ್ಸ್: ವಿಚ್ಛೇದನದ ಬಳಿಕ ಮಗುವಿನ ಅಮ್ಮ!
ಇದೇ ವಿಷಯವನ್ನೇ ಆಶಾ ಪರೇಖ್ ಕೂಡ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ನಲ್ಲಿ 50 ಪ್ಲಸ್ ನಟರು 20 ಪ್ಲಸ್ ನಟಿಯರ ಜೊತೆ ರೊಮಾನ್ಸ್ (Romance) ಮಾಡುವುದು, ನಟಿಯರು ಬಿಕಿನಿ ಡ್ರೆಸ್ನಲ್ಲಿ ಡಬಲ್ ವಯಸ್ಸಿನ ಹೀರೋ ಜೊತೆ ಸ್ವಲ್ಪ ಹೆಚ್ಚಿಗೇ ಎನ್ನುವಷ್ಟು ನಟಿಸುವುದು ಎಲ್ಲವೂ ಮಾಮೂಲೇ. ಇಂಥ ಪರಿಸ್ಥಿತಿಯಲ್ಲಿ ನಾಯಕನಿಗೆ ಸಿಗುವ ಸೌಲಭ್ಯ ನಾಯಕಿಗೆ ಏಕಿಲ್ಲ, ನಟಿಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆಯೇ ಅಮ್ಮ, ತಾಯಿಯ ಪಾರ್ಟ್ ಕೊಟ್ಟು ಕುಳಿಸುವುದು ಯಾವ ನ್ಯಾಯ ಎಂದು ನಟಿ ಆಶಾ ಪರೇಖ್ ಪ್ರಶ್ನಿಸಿದ್ದಾರೆ. ಮೈತ್ರಿ: ಫೀಮೇಲ್ ಫಸ್ಟ್ ಕಲೆಕ್ಟಿವ್ ಎಂಬ ಟಾಕ್ ಸೆಷನ್‌ನಲ್ಲಿ ಭಾಗವಹಿಸಿದ್ದ ಅವರು, ಈ ಪ್ರಶ್ನೆಯನ್ನು ಕೇಳಿದ್ದಾರೆ.
ಅವರು ತಮ್ಮ ವಯಸ್ಸಿನ ನಟ ಅಮಿತಾಭ್ ಬಚ್ಚನ್ ಅವರ ಉದಾಹರಣೆಯನ್ನು ನೀಡಿದ್ದಾರೆ. 80 ವರ್ಷ ವಯಸ್ಸಾದರೂ ಅಮಿತಾಭ್ ಬಚ್ಚನ್ ಇವತ್ತಿಗೂ ಸಹ ಹಿಂದಿ ಚಲನಚಿತ್ರೋದ್ಯಮದ ಅತ್ಯಂತ ಬ್ಯುಸಿಯಾಗಿರುವ ನಟರಲ್ಲಿ ಒಬ್ಬರು. ವಾಸ್ತವವಾಗಿ, ಅವರು ಸಿನೆಮಾಗಳಲ್ಲಿ (Cinema) ಒಮ್ಮೆ ಮಾಡಿದ ಪಾತ್ರ ಮತ್ತೆ ಅವರು ಮಾಡುವುದನ್ನು ನೀವು ಎಂದಿಗೂ ನೋಡುವುದಿಲ್ಲ. ಆದರೆ ಇನ್ನೊಂದು ವಿಷಯ ಎಂದರೆ ಅವರಿಗಾಗಿಯೇ ಕಥೆಗಳನ್ನು ಬರೆಯಲಾಗುತ್ತದೆ. ಆದರೆ ನಟಿಯರಿಗೆ ಈ ರೀತಿ ಏಕೆ ಮಾಡುವುದಿಲ್ಲ? ನಟಿಗೆ ಸ್ವಲ್ಪ ವಯಸ್ಸಾದ ಬಳಿಕ ಅವರಿಗಾಗಿಯೇ ಕಥೆ ಬರೆಯಲು ಹಿಂದೇಟು ಹಾಕುವುದು ಏಕೆ? ಅಮಿತಾಭ್ ಅಂಥ ನಟರಿಗೆ ಒಂದು ನ್ಯಾಯ, ತಮ್ಮಂಥ ನಟಿಯರಿಗೆ ಇನ್ನೊಂದು ನ್ಯಾಯವಾ ಎಂದು ಆಶಾ ಪರೇಖ್ ಪ್ರಶ್ನಿಸಿದ್ದಾರೆ.
Honey Rose: ಮದುವೆ ಯಾಕೆ, ರಿಲೇಷನ್ ಓಕೆ ಎಂದು ಆಫರ್ ಕೊಟ್ಟಿದ್ದಾರೆ ಸ್ನಿಗ್ಧ ಸುಂದರಿ
ನಾವು ಸಹ ಚಿತ್ರಕ್ಕೆ ಮುಖ್ಯವಾದ ಕೆಲವು ಪಾತ್ರಗಳನ್ನು ಪಡೆಯಬೇಕು. ಅದು ನಮಗೆ ಇಲ್ಲಿ ಸಿಗುತ್ತಿಲ್ಲ. ನಾವು ಬರೀ ತಾಯಿ, ಅಜ್ಜಿ ಅಥವಾ ಸಹೋದರಿಯಾಗಿ ನಟಿಸುವ ಪಾತ್ರಗಳನ್ನು (Roles) ಪಡೆಯುತ್ತಿದ್ದೇವೆ. ಯಾರಿಗೂ ಆಸಕ್ತಿ ಇಲ್ಲ ನೋಡಿ ನಮಗಾಗಿ ಪಾತ್ರ ಬರೆಯೋದಕ್ಕೆ" ಅಂತ ಆಶಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮದುವೆಯಾದರೆ ನಟಿಯ ಸಿನಿಮಾ ಜೀವನ ಮುಗಿತು ಎಂದೇ ಅಂದುಕೊಳ್ಳುತ್ತಿದ್ದರು. ಈಗ ಅದು ಹಾಗಿಲ್ಲ, ತುಂಬಾನೇ ಬದಲಾವಣೆ ಆಗಿದೆ. ನಾಯಕ ನಟನ ವಯಸ್ಸು 50 ಅಥವಾ 55 ವರ್ಷಗಳು ಮತ್ತು ಅವರು 20 ವರ್ಷ ವಯಸ್ಸಿನವರೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅದು ಇಂದಿಗೂ ಜನರು ಒಪ್ಪುತ್ತಾರೆ ಮತ್ತು ಮೆಚ್ಚಿಕೊಳ್ಳುತ್ತಾರೆ. ಆದರೂ ಅವರಿಗಾಗಿ ಚಿತ್ರ ಬರೆಯುವವರೇ ಇಲ್ಲ ಎಂದು ಆಶಾ ಹೇಳಿದ್ದಾರೆ.