ಬೀದಿಗೆ ಬಂದ ಖ್ಯಾತ ನಟನ ಮನೆ ಜಗಳ; ತಂದೆಯಿಂದಲೇ ಅರೆಸ್ಟ್ ಆದ ಮಂಚು ಮನೋಜ್
ಖ್ಯಾತ ನಟ, ನಿರ್ಮಾಪಕ ಮೋಹನ್ ಬಾಬು ಕುಟುಂಬ ಸಿನಿಮಾಗಳಿಗಿಂತ ಜಾಸ್ತಿ ಕಾಂಟ್ರವರ್ಸಿಯಲ್ಲಿ ಹೆಚ್ಚು ಸೌಂಡ್ ಮಾಡ್ತಿದೆ. ಇವರ ಮನೆ ಜಗಳ ಬೀದಿಗೆ ಬಂದು ರಂಪಾಟ ಆಗಿದ್ದು ಆಯ್ತು. ಈಗ ಮತ್ತೆ ತಂದೆಯೇ ಮಗನ ವಿರುದ್ಧ ದೂರು ನೀಡಿದ್ದಾರೆ.

ನಟ ಮೋಹನ್ ಬಾಬು ಮನೆಯ ಜಗಳ ಬೀದಿಗೆ ಬಂದು ಬಹಳ ಸಮಯ ಕಳೆದಿದೆ. ಆದರೆ ಇದು ಮುಗಿಯುವ ಹಾಗೆ ಕಾಣ್ತಿಲ್ಲ. ಈಗ ಕೊಟ್ಟ ದೂರಿನ ಪ್ರಕಾರ ಮಂಚು ಮನೋಜ್ ಅವರು ಅರೆಸ್ಟ್ ಆಗಿದ್ದಾರಂತೆ. ಹೌದು, ತಿರುಪತಿಯಲ್ಲಿರುವ ಮನೆಯಲ್ಲಿ ಮಂಚು ಮನೋಜ್ ಅವರನ್ನು ವಶಕ್ಕೆ ಪಡೆದು, ಭಕಾರ್‌ಪೇಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು.
ರಾಜಕೀಯದಲ್ಲಿ ಆಸಕ್ತಿ
ಕೌಟುಂಬಿಕ ವಿವಾದ ಉಂಟಾಗಿದ್ದಕ್ಕೆ ಮಗನ ವಿರುದ್ಧವೇ ಮೋಹನ್ ಬಾಬು ಅವರು ದೂರು ನೀಡಿದ್ದಾರೆ. ಇದರ ಹಿಂದಿನ ದಿನ ಜಲ್ಲಿಕಟ್ಟು ಇವೆಂಟ್‌ನಲ್ಲಿ ಮಂಚು ಮನೋಜ್ ಭಾಗವಹಿಸಿದ್ದರು. ಆ ವೇಳೆ ಅವರು ರಾಜಕೀಯ ಕ್ಷೇತ್ರದಲ್ಲಿ ಸಾಧಿಸಬೇಕಿರುವ ಕಾರ್ಯದ ಬಗ್ಗೆ ಮನೋಜ್ ಮಾತನಾಡಿದ್ದರು.
ಮೋಹನ್ ಬಾಬು ಮನೆ ರಣರಂಗ...ಅಪ್ಪ-ಮಗನ ಮಾರಾಮಾರಿ; ವಿಲನ್ ಆದ ಹೀರೋ!
ತಂದೆ-ಮಕ್ಕಳ ಸಂಬಂಧ ಚೆನ್ನಾಗಿಲ್ಲ
ಕಳೆದ ವರ್ಷ ಮೋಹನ್ ಬಾಬು, ಮಂಚು ಮನೋಜ್ ಕೂಡ ನಡುವೆ ಒಂದಷ್ಟು ಸಮಸ್ಯೆ ಉಂಟಾಗಿತ್ತು. ನನ್ನ ಮನೆಯನ್ನು ಅತಿಕ್ರಮಣ ಮಾಡುತ್ತಿದ್ದಾರೆ ಎಂದು ಮನೋಜ್ ಹಾಗೂ ಅವರ ಪತ್ನಿ ಮೌನಿಕಾ ವಿರುದ್ಧ ಮೋಹನ್ ಬಾಬು ಅವರೇ ದೂರು ಕೊಟ್ಟಿದ್ದರು. ನನ್ನ ಮನೆಗೆ ಕೆಲವರು ಬಂದು ದೌರ್ಜನ್ಯ ನಡೆಸಿದ್ದಾರೆ ಎಂದು ಮನೋಜ್ ಕೂಡ ದೂರು ಸಲ್ಲಿಸಿದ್ದರು.
ಮೋಹನ್ ಬಾಬುರ ಮೂವರು ಮಕ್ಕಳು
ನಟ ಮೋಹನ್ ಬಾಬು ಅವರಿಗೆ ಮೂವರು ಮಕ್ಕಳು. ವಿದ್ಯಾ ದೇವಿ ಹಾಗೂ ಮೋಹನ್ ಬಾಬು ಅವರಿಗೆ ವಿಷ್ಣು ಮಂಚು, ಲಕ್ಷ್ಮೀ ಮಂಚು ಎಂಬ ಮಕ್ಕಳಿದ್ದರೆ. ವಿದ್ಯಾ ಸಾವಿನ ನಂತರದಲ್ಲಿ ಮೋಹನ್ ಅವರು ನಿರ್ಮಲಾ ದೇವಿಯನ್ನು ಮದುವೆಯಾಗಿದ್ದರು. ನಿರ್ಮಲಾ-ಮೋಹನ್ ಅವರ ಪುತ್ರ ಮನೋಜ್.
ಮೀಡಿಯಾ ಪ್ರತಿನಿಧಿ ಮೇಲಿನ ಹಲ್ಲೆಗೆ ಮೋಹನ್ ಬಾಬು ವಿರುದ್ಧ ಅಯ್ಯಪ್ಪ ಭಕ್ತರು ತಿರುಗಿಬಿದ್ದಿದ್ದು ಯಾಕೆ?
ಆಸ್ತಿ ಸಮಸ್ಯೆಯೇ?
ವರ್ಷಗಳಿಂದ ವಿಷ್ಣು ಹಾಗೂ ಮನೋಜ್ ಮಧ್ಯೆ ಮನಸ್ತಾಪ ಇದೆ. ಕುಟುಂಬದ ಆಸ್ತಿ, ಉದ್ಯಮ ಹಂಚಿಕೆ ಬಗ್ಗೆ ಇವರ ಮಧ್ಯೆ ಜಗಳ ನಡೆಯುತ್ತಲಿದೆ ಎನ್ನಲಾಗಿದೆ. ಮೋಹನ್ ಬಾಬು ಹೆಸರಿನಲ್ಲಿ ಸಾಕಷ್ಟು ವಿದ್ಯಾಸಂಸ್ಥೆಗಳಿವೆ. ಮೂರು ವಿದ್ಯಾಸಂಸ್ಥೆಯನ್ನು ವಿಷ್ಣು ಅವರು ನೋಡಿಕೊಳ್ಳುತ್ತಿದ್ದಾರೆ. ಆದರೆ ಮನೋಜ್ ಅವರು ಅಷ್ಟಾಗಿ ಜವಾಬ್ದಾರಿ ತಗೊಳ್ತಿಲ್ಲ ಎನ್ನಲಾಗಿದೆ.
ಸ್ವಂತ ಉದ್ಯಮ ಆರಂಭಿಸಿರೋ ಮನೋಜ್!
ಮಂಚು ಮನೋಜ್ ಅವರು ಮೌನಿಕಾರನ್ನು ಮದುವೆಯಾಗಿದ್ದು ಮೋಹನ್ ಬಾಬು ಕುಟುಂಬಕ್ಕೆ ಇಷ್ಟ ಇರಲಿಲ್ಲ ಎನ್ನಲಾಗಿದೆ. ಹೈದರಾಬಾದ್‌ನ ಲಕ್ಷ್ಮೀ ಮನೆಯಲ್ಲಿ ಮನೋಜ್ ಮದುವೆ ನಡೆದಿತ್ತು. ಇನ್ನುಳಿದ ಪ್ರೊಡಕ್ಷನ್ ಹೌಸ್, ಉದ್ಯಮಗಳನ್ನು ಮನೋಜ್, ಲಕ್ಷ್ಮೀ ನೋಡಿಕೊಳ್ಳುತ್ತಿದ್ದಾರೆ. ಮನೋಜ್ ಅವರು 2019ರಲ್ಲಿ ಸ್ವಂತ ಉದ್ಯಮ ಆರಂಭಿಸಿದ್ದರು.
ಮನೋಜ್‌ಗೆ ಎರಡನೇ ಮದುವೆ
ಈ ಹಿಂದೆ ಮನೋಜ್‌ಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು. ಇದಾದ ಬಳಿಕ ಅವರು ಮೌನಿಕಾರನ್ನು ಮದುವೆಯಾಗಿದ್ದಾರೆ. ಮೌನಿಕಾಗೂ ಕೂಡ ಡಿವೋರ್ಸ್ ಆಗಿದ್ದು ಓರ್ವ ಮಗನಿದ್ದಾನೆ. ಮನೋಜ್ ಅವರನ್ನು ಮದುವೆಯಾದ ಬಳಿಕ ಮೌನಿಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೋಜ್ ಹಾಗೂ ಮೌನಿಕಾ ಜೊತೆಗೆ ಮಗ ಕೂಡ ಇದ್ದಾನೆ.