Asianet Suvarna News Asianet Suvarna News

ಏನು..! 30 ವರ್ಷದ ನೋರಾ ಫತೇಹಿ ಜೊತೆ 25ರ ಆರ್ಯನ್ ಡೇಟಿಂಗ್ ಹಾ; ಶಾರುಖ್ ಪುತ್ರನ ಲವ್ ಸ್ಟೋರಿ ವೈರಲ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಪುತ್ರ ಆರ್ಯನ್ ಮತ್ತು ನೋರಾ ಫತೇಹಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

Aryan Khan and Nora Fatehi are dating? Party photos are viral sgk
Author
First Published Jan 4, 2023, 5:35 PM IST

ಸಿನಿಮಾರಂಗದಲ್ಲಿ ಲವ್, ಬ್ರೇಕಪ್, ಡೇಟಿಂಗ್, ಮದುವೆ ವಿಚಾರಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಇದೀಗ ಮತ್ತೊಂದು ಪ್ರೇಮ್ ಕಹಾನಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಮತ್ಯಾರು ಅಲ್ಲ ಕಿಂಗ್ ಖಾನ್ ಶಾರುಖ್ ಪುತ್ರ ಆರ್ಯನ್ ಖಾನ್ ಅವರದ್ದು. ಸದ್ಯ ಬಾಲಿವುಡ್ ನಲ್ಲಿ ಆರ್ಯನ್ ಖಾನ್ ಡೇಟಿಂಗ್ ವಿಚಾರದ್ದೆ ಸದ್ದು. ಅಂದಹಾಗೆ ಶಾರುಖ್ ಪುತ್ರ ಆರ್ಯನ್ ಖಾನ್ ಬಾಲಿವುಡ್ ನ ಖ್ಯಾತ ನಟಿ, ಡಾನ್ಸರ್ ನೋರಾ ಫತೇಹಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ ಇಬ್ಬರ ಡೇಟಿಂಗ್ ವಿಚಾರ ಈ ಪರಿ ಸದ್ದು ಮಾಡಲು ಕಾರಣವಾಗಿದ್ದು ಇತ್ತೀಚಿಗಷ್ಟೆ ವೈರಲ್ ಆಗಿದ್ದ ಇಬ್ಬರ ಫೋಟೋ.  

ಸಾಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿದ್ದಾರೆ. ಆಗಾಗ ಆರ್ಯನ್ ಖಾನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಆದರೆ ಈ ಬಾರಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಆರ್ಯನ್ ಖಾನ್ ದುಬೈನಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಸಹೋದರಿ ಸುಹಾನಾ ಖಾನ್, ಕರಣ್ ಜೋಹರ್ ಕೂಡ ಜೊತೆಯಲ್ಲಿದ್ದರು. ಆದರೆ ನೋರಾ ಕೂಡ ದುಬೈನಲ್ಲಿ ಇದ್ದಾರೆ. ನೋರಾ ಮತ್ತು ಆರ್ಯನ್ ಇಬ್ಬರ ಪೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಅಲ್ಲದೆ ಇಬ್ಬರ ನಡುವೆ ಡೇಟಿಂಗ್ ವದಂತಿ ಸೃಷ್ಟಿಸಿದೆ.    

ವೈರಲ್ ಆಗಿರುವ ಫೋಟೋದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಅಭಿಮಾನಿಯೊಂದಿಗೆ ಪೋಸ್ ನೀಡಿದ್ದಾರೆ.  ಆದರೆ ಎರಡು ಫೋಟೋಗಳು ಒಂದೇ ಸ್ಥಳದಲ್ಲಿ ಕ್ಲಿಕ್ಕಿಸಲಾಗಿದೆ ಎನ್ನುವುದನ್ನು ನೆಟ್ಟಿಗರು ಗಮನಿಸಿದ್ದಾರೆ. ಇಬ್ಬರ ಫೋಟೋವನ್ನು ಕೊಲ್ಯಾಜ್ ಮಾಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, 'ನೋರಾ ಕರಣ್ ಜೋಹರ್‌ಗೆ ಹತ್ತರಿವಾಗುತ್ತಿದ್ದಾರೆ ಅಂತ ಅಂದುಕೊಂಡೆ. ಆದರೆ ಆರ್ಯನ್ ಜೊತೆ ಹ್ಯಾಂಗ್ ಔಟ್ ಮಾಡುತ್ತಿದ್ದಾರೆ. ಪಾರ್ಟಿಯಲ್ಲಿ ನೋರಾ ಕೂಡ ಇದ್ದರು' ಎಂದು ಹೇಳುತ್ತಿದ್ದಾರೆ.

  Aryan Khan and Nora Fatehi are dating? Party photos are viral sgk

ಇನ್ನು ಕೆಲವರು ಡೇಟಿಂಗ್ ವಂದತಿ ಹಬ್ಬಿಸಿದವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡ ಮಾತ್ರಕ್ಕೆ, ಡಿನ್ನರ್ ಮಾಡಿದ ಮಾತ್ರಕ್ಕೆ ಡೇಟಿಂಗ್ ಎಂದು ಹೇಳುತ್ತೀರಾ? ಗ್ರೋ ಅಪ್' ಎಂದು ಹೇಳಿದ್ದಾರೆ. 

ನೋರಾ ಫತೇಹಿ ಅನೇಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕರಣ್ ಜೋಹರ್, ಸುಹಾನಾ ಖಾನ್ ಸೇರಿದಂತೆ ಅನೇಕರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಆರ್ಯನ್ ಕೂಡ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಂದಹಾಗೆ ನೋರಾ ಫತೇಹಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿರುವ ಸುಖೇಶ್ ಚಂದ್ರಶೇಖರ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದರು. ಇದೀಗ ಆರ್ಯನ್ ಜೊತೆ ಡೇಟಿಂಗ್ ವಿಚಾರವಾಗಿ ಸುದ್ದಿಯಾಗಿದ್ದಾರೆ. 

ಆರ್ಯನ್ ಖಾನ್ ಸಿನಿಮಾ ಎಂಟ್ರಿ 

ಆರ್ಯನ್ ಖಾನ್ ನಿರ್ದೇಶಕನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಆರ್ಯನ್ ಖಾನ್ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಬಗ್ಗೆ ಇತ್ತೀಚಿಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದರು.  'ಸ್ಟ್ರಿಪ್ಟ್ ಬರೆದು ಮುಗಿತು. ಆಕ್ಷನ್‌ಗಾಗಿ ಕಾಯುತ್ತಿದ್ದೀನಿ' ಎಂದು ಹೇಳುವ ಮೂಲಕ ಕ್ಯಾಮರಾ ಇಮೋಜಿ ಶೇರ್ ಮಾಡಿ ಸಿನಿಮಾ ಎಂಟ್ರಿ ಬಗ್ಗೆ ಅಧಿಕೃತಗೊಳಿಸಿದ್ದರು. ಅಂದಹಾಗೆ ಆರ್ಯನ್ ಖಾನ್ ತಮ್ಮದೇ ಆದ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಸದ್ಯ ಸ್ಕ್ರಿಪ್ಟ್ ಕೆಲಸ ಮುಗಿಸಿರುವ ಆರ್ಯನ್ ಯಾವಾಗ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 
 

Follow Us:
Download App:
  • android
  • ios