Asianet Suvarna News Asianet Suvarna News

ಅನುಪಮಾಗೆ ಮಗಳು ಎಂದ ಅಲ್ಲು ಅರ್ಜುನ್ ತಂದೆ; ಮಾವಯ್ಯ ಎಂದು ಕಾಲೆಳೆದ ನೆಟ್ಟಿಗರು

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಅವರನ್ನು ಮಗಳು ಎಂದ ಅಲ್ಲು ಅರವಿಂದ್‌ಗೆ ಅಭಿಮಾನಿಗಳು ಮಾವಯ್ಯ ಎಂದು ಕರೆಯುತ್ತಿದ್ದಾರೆ. 

Arvind Calls Anupama A Daughter and Fans Call Him Mamayya sgk
Author
First Published Dec 26, 2022, 12:33 PM IST

ಮಲಯಾಳಂ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ಸದ್ಯ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾಗಳನ್ನು ಮಾಡಿರುವ ನಟಿ ಅನುಪಮಾ ಸದ್ಯ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಅನುಪಮಾ ಪೇಜ್ 18 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ಅನುಪಮಾ ಗೌಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅಷ್ಟೆಯಲ್ಲದೇ ಸಿನಿ ಮಂದಿಗೂ ಅನುಪಮಾ ಫೇವರಿಟ್ ಆಗಿದ್ದಾರೆ. ಟಾಲಿವುಡ್ ಖ್ಯಾತ ನಿರ್ಮಾಪಕ, ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರಿಗೂ ಅನುಪಮಾ ತುಂಬಾ ಇಷ್ಟ. ಅನೇಕ ಬಾರಿ ಅನುಪಮಾಗೆ ತನ್ನ ಮಗಳು ಎಂದು ಹೇಳಿದ್ದಾರೆ ಅಲ್ಲು ಅರವಿಂದ್. 

ಇತ್ತೀಚಿಗಷ್ಟೆ ಈವೆಂಟ್ ವೊಂದರಲ್ಲಿ ಭಾಗಿಯಾಗಿದ್ದ ಅಲ್ಲು ಅರವಿಂದ್ ತಮ್ತೆ ಅನುಪಮಾ ಮಗಳು ಇದ್ದಹಾಗೆ ಎಂದು ಹೇಳಿದ್ದಾರೆ. 'ಒಂದು ವೇಳೆ ಮಗಳು ಇದ್ದಿದ್ದರೆ ಅನುಪಮಾ ಹಾಗೆ ಇರುತ್ತಿದ್ದಳು' ಎಂದು ಹೇಳಿದ್ದಾರೆ. ಅಲ್ಲು ಅರವಿಂದ್ ತನ್ನ ನಿರ್ಮಾಣದಲ್ಲಿ ಕೆಲಸ ಮಾಡುವ ಎಲ್ಲರನ್ನೂ ತನ್ನ ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ಅನುಪಮಾ ಎಂದರೆ ಅಲ್ಲಿ ಅರವಿಂದ್ ಅವರಿಗೆ ಮಗಳ ಪ್ರೀತಿ. 

ಬ್ಯಾಕ್ ಲೆಸ್ ಡ್ರೆಸ್‌ನಲ್ಲಿ 'ನಟಸಾರ್ವಭೌಮ' ನಟಿಯ ಹಾಟ್ ಪೋಸ್

ಪೇಜ್ 18 ಕಾರ್ಯಕ್ರಕ್ಕೆ ಹಾಜರಾಗಿದ್ದ ನಿರ್ಮಾಪಕ ಅಲ್ಲು ಅರವಿಂದ್ ಅವರು ತನ್ನ ಮಗಳು ಅನುಪಮಾ ಬಂದಿಲ್ವಾ ಎಂದು ಕೇಳಿದರು. ಅಲ್ಲು ಅರವಿಂದ್ ಹೀಗೆ ಹೇಳುತ್ತಿದ್ದಂತೆ ಅಲ್ಲಿಂದ ಅಭಿಮಾನಿಗಳು, ಅರವಿಂದ್ ಮಾವಯ್ಯ ಎಂದು ಕೂಗಲು ಪ್ರಾರಂಭಿಸಿದರು.  ಅಭಿಮಾನಿಗಳ ಮಾತು ಕೇಳಿ ಎಲ್ಲರೂ ಜೋರಾಗಿ ನಗಲು ಪ್ರಾರಂಭಿಸಿದರು. ಅಲ್ಲು ಅರವಿಂದ್ ಕೂಡ ತುಂಬಾ ಖುಷಿ ಪಟ್ಟರು. ಈ ಬಗ್ಗೆ ಸಾಕಷ್ಟು ಮೀಮ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅನೇಕ ಅಭಿಮಾನಿಗಳು ಅನುಪಮಾ ಪರಮೇಶ್ವರನ್ ಮತ್ತು ಅಲ್ಲು ಅರವಿಂದ್ ಫೋಟೋ ಇಟ್ಟು ಮಾವಯ್ಯ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 

ಅನುಪಮಾ ಮತ್ತುಅಲ್ಲು ಅರವಿಂದ್ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಂದಹಾಗೆ ಅನುಪಮಾ ತೆಲುಗು ಸಿನಿಮಾರಂಗದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಕೊನೆಯದಾಗಿ ಅನುಪಮಾ ಕಾರ್ತಿಕೇಯ 2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನು ಅನೇಕ ತೆಲುಗು ಸಿನಿಮಾಗಳಲ್ಲಿ ಅನುಪಮಾ ಬ್ಯುಸಿಯಾಗಿದ್ದಾರೆ. ತೆಲುಗು ಜೊತೆಗೆ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಕನ್ನಡ ಸಿನಿಮಾದಲ್ಲೂ ಅನುಪಮಾ ಮಿಂಚಿದ್ದಾರೆ.

 
 
 
 
 
 
 
 
 
 
 
 
 
 
 

A post shared by PakkaNaatu (@pakkanaatu)


ಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ನೆನಪಲ್ಲಿ ನಟಸಾರ್ವಭೌಮ ನಟಿ; ಫೋಟೋ ಹಂಚಿಕೊಂಡ ಅನುಪಮಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾವರ್ಭೌಮ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡ ಅಭಿಮಾನಿಗಳ ಮನಗೆದ್ದಿದ್ದರು. ಆ ಸಿನಿಮಾ ಬಳಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಅನುಪಮಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

Follow Us:
Download App:
  • android
  • ios