ನಟ ರಾಹುಲ್ ರಾಮಕೃಷ್ಣ ಮುತ್ತಿಡುತ್ತಿರುವ ಫೋಟೋ ವೈರಲ್; ಇವಳು ಬಿಂದು ಅಲ್ಲ ಹರಿತಾ!

ವೈರಲ್ ಆಯ್ತು ನಟ ರಾಹುಲ್ ರಾಮಕೃಷ್ಣ ಕಿಸ್ಸಿಂಗ್ ಫೋಟೋ. ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟ ನಟ
 

Arjun Reddy fame Rahul ramakrishna announce his marriage with romantic picture vcs

ತೆಲುಗು ಚಿತ್ರರಂಗದ (Tollywood) ಖ್ಯಾತ ನಟ ಮತ್ತು ಬರಹಗಾರ ರಾಹುಲ್ ರಾಮಕೃಷ್ಣ  ಅರ್ಜುನ್ ರೆಡ್ಡಿ (Arjun Reddy) ಸಿನಿಮಾದಲ್ಲಿ ವಿಜಯ್ ದೇವರಕೊಂಡ (Vijay Deverakonda) ಅವರಿಗೆ ಸ್ನೇಹಿತನಾಗಿ ಕಾಣಿಸಿಕೊಂಡ ನಂತರ ಸಿನಿ ಜರ್ನಿಯಲ್ಲಿ ದೊಡ್ಡ ಬ್ರೇಕ್ ಪಡೆದುಕೊಂಡರು. ರಾಹುಲ್ ಒಪ್ಪಿಕೊಂಡ ಪ್ರತಿಯೊಂದು ಸಿನಿಮಾ ಸೂಪರ್ ಹಿಟ್, ಸಂಭಾವನೆ ಹೆಚ್ಚಿಸಿಕೊಂಡ ನಟ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದರು. ಆದರೆ ಸಣ್ಣ ಮನಸ್ತಾಪದಿಂದ ಮದುವೆ ಮುರಿದು ಬಿತ್ತು. ಹೀಗಾಗಿ ಮತ್ತೊಂದು ಮದುವೆ ಬಗ್ಗೆ ಭರ್ಜರಿಯಾಗಿ ಅನೌನ್ಸ್ ಮಾಡಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರು ರಾಹುಲ್ ರಾಮಕೃಷ್ಣ (Rahul Ramakrishna) ಹುಡಗಿಯೊಬ್ಬಳ ಜೊತೆ ಬಾಲ್ಕಾನಿಯಲ್ಲಿ ನಿಂತುಕೊಂಡು ಮುತ್ತಿಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. 'ಕೊನೆಗೂ ಮದುವೆ ಆಗುತ್ತಿರುವೆ. ಶೀಘ್ರದಲ್ಲಿ' ಎಂದು ಬರೆದುಕೊಂಡಿದ್ದಾರೆ. ನೆಚ್ಚಿನ ನಟ ಸೆಲೆಕ್ಟ್ ಮಾಡಿರುವ ಹುಡುಗಿ ಸೂಪರ್ ಎಂದು ಅಭಿಮಾನಿಗಳು ವಿಶ್ ಮಾಡುತ್ತಿದ್ದಾರೆ ಆದರೆ ಇನ್ನೂ ಕೆಲವರು ಕಾಲೆಳೆಯುತ್ತಿದ್ದಾರೆ.

Arjun Reddy fame Rahul ramakrishna announce his marriage with romantic picture vcs  
 
ಏನಿದು ಗೊಂದಲ?

ರಾಹುಲ್ ಫೋಟೋ ಹಂಚಿಕೊಂಡು ಮದುವೆ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ ಆದರೆ ಹುಡುಗಿ ಯಾರೆಂದು ರಿವೀಲ್ ಮಾಡಿಲ್ಲ. ಹೀಗಾಗಿ ನೆಟ್ಟಿಗರು ಇದು ಅವರ ಮಾಜಿ ಪ್ರೇಯಸಿ ಬಿಂದು (Bindu) ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಹುಡುಗಿಯರ ಕನ್ಫ್ಯೂಷನ್ ವೈರಲ್ ಆಗುತ್ತಿದ್ದಂತೆ ರಾಹುಲ್‌ 'ಸಣ್ಣ ಕ್ಲಾರಿಫಿಕೇಶನ್ - ಇವರು ನಾನು ಮದುವೆ ಆಗುತ್ತಿರುವ ಹುಡುಗಿ ಹರಿತಾ, ಬಿಂದು ಅಲ್ಲ' ಎಂದಿದ್ದಾರೆ. 

Sonakshi Sinha ನಿಶ್ಚಿತಾರ್ಥ? ಹುಡುಗನ ಜೊತೆ ನಿಂತು ಉಂಗುರ ತೋರಿಸುತ್ತಿರುವ ನಟಿ!

2019ರಲ್ಲಿ ರಾಹುಲ್ ಸಮುದ್ರ ತೀರದಲ್ಲಿ ಮಂಡಿಯೂರಿ ಹುಡುಗಿ ಕೈ ಹಿಡಿದುಕೊಂಡಿರುವ ಫೋಟೋ ಹಂಚಿಕೊಂಡಿದ್ದರು. 'ನಾನು ಜನವರಿ 15, 2019ರಲ್ಲಿ ಮದುವೆ ಆಗುತ್ತಿದ್ದೀನಿ ಯಾರಿಗೂ ಹೇಳಬೇಡಿ'ಎಂದು ಬರೆದುಕೊಂಡಿದ್ದರು. ವೃತ್ತಿಯಲ್ಲಿ ಸಾಪ್ಟ್‌ವೇರ್‌ ಇಂಜಿನಿಯರ್‌ (Software Engineer) ಆಗಿದ್ದ ಬಿಂದು ಖಾಸಗಿ ಕಾರ್ಯಕ್ರಮದಲ್ಲಿ ರಾಹುಲ್‌ರನ್ನು ಭೇಟಿ ಮಾಡಿದ್ದರು. ರಾಹುಲ್ ಅವರಿಗೆ ಮನೆಗೆ ಹೋಗಲು ದಾರಿ ಹುಡುಕಲು ಕಷ್ಟ ಪಡುತ್ತಿದ್ದರು ಆಗ ಬಿಂದು ಸಹಾಯ ಮಾಡಿ, ತಮ್ಮ ಬೈಕ್‌ನಲ್ಲಿ ಡ್ರಾಪ್ ಕೂಡ ಕೊಟ್ಟರು ಹೀಗಾಗಿ ಬಿಂದು ಮನಸ್ಸು ತುಂಬಾ ಒಳ್ಳೆಯದು ಎಂದು ರಾಹುಲ್ ಈ ಹಿಂದೆ ಸಂದರ್ಶನದಲ್ಲಿ ಹೇಳಿದ್ದರು. 

ಸರಳವಾಗಿ ಮದುವೆ ಮಾಡಿಕೊಳ್ಳಬೇಕು ಎಂದು ರಾಹುಲ್ -ಬಿಂದು ಪ್ಲ್ಯಾನ್ ಮಾಡಿದ್ದರು ಆದರೆ ವೈ ಮನಸ್ಸಿನಿಂದ ಮದುವೆ ಮುರಿದು ಬಿತ್ತು ಎನ್ನಲಾಗಿ. ಹೀಗಾಗಿ ಟ್ರೋಲ್ (Troll) ಮಾಡುತ್ತಿರುವ ಪ್ರತಿಯೊಬ್ಬರಿಗೂ ಈಕೆ ಬಿಂದು ಅಲ್ಲ ಹರಿತಾ ಎಂದು ಸ್ಪಷ್ಟನೆ ಕೊಡುತ್ತಿದ್ದಾರೆ.

 

31 ವರ್ಷಕ್ಕೆ ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ ಯುವ ಹಾಸ್ಯ ನಟ!

'2022 ನನ್ನ ಕೊನೆ ಜರ್ನಿ. ನಾನು ಇನ್ನು ಮುಂದೆ ಸಿನಿಮಾ ಮಾಡುವುದಿಲ್ಲ. ನಾನು ಕೇರ್ ಮಾಡುವುದಿಲ್ಲ, ನೀವು ಯಾರೂ ನನ್ನ ಬಗ್ಗೆ ಕೇರ್ ಮಾಡಬೇಡಿ,' ಎಂದು ಟ್ಟೀಟ್ ಮಾಡಿದ್ದರು. ರಾಹುಲ್ ಟ್ಟೀಟ್ ನೋಡಿ ಅವರ ಕುಟುಂಬದವರೇ ಶಾಕ್ ಆಗಿತ್ತಂತೆ. ಎಸ್‌.ಎಸ್‌ ರಾಜಮೌಳಿ (SS Rajamouli) ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ (RRR) ಸಿನಿಮಾದಲ್ಲಿ ಹಾಗೂ ವಿರಾಠ ಪರ್ವ (Virata Parva) ಸಿನಿಮಾದಲ್ಲಿಯೂ ಇವರು ನಟಿಸಿದ್ದಾರೆ. ಎರಡೂ ಬಿಗ್ ಬಜೆಟ್ ಸಿನಿಮಾ ಆಗಿದ್ದು ರಾಹುಲ್ ವೃತ್ತಿ ಜೀವನವನೇ ಬದಲಾಯಿಸಲಿದೆ. ಆದರೆ ಈ ನಿರ್ಧಾರ ತೆಗೆದುಕೊಂಡಿರುವುದು ತಪ್ಪು ಎಂದು ಹಲವರು ಕರೆ ಮಾಡಿ, ಬುದ್ಧಿ ಹೇಳಿದ್ದಾರೆ ಇನ್ನೂ ಕೆಲವರು ಮುಂದಿನ ದಿನಗಳು ಚೆನ್ನಾಗಿರಲಿ ಎಂದು ಶುಭ ಹಾರೈಸಿದ್ದಾರಂತೆ. ನಾನ್ ಸ್ಟಾಪ್ ಮೆಸೇಜ್ ಮತ್ತು ಕರೆ ಬರುತ್ತಿದ್ದ ಕಾರಣ ರಾಹುಲ್ ಮತ್ತೊಂದು ಟ್ಟೀಟ್ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿ, ರಶ್ಮಿಕಾರ ನಿಶ್ಚಿತಾರ್ಥ ಮುರಿಯಲು Vijay Devarakonda ಕಾರಣ?

'ಅಯ್ಯೋ ದೇವರೆ. ಇದು ತಮಾಷೆ ಕಣ್ರೋ Fools. ಹೆಚ್ಚಿನ ಸಂಭಾವನೆ, ಜೀವನಕ್ಕೆ ಬೇಡ ಬೇಡ ಅಂದರೂ ಬರುತ್ತಿರುವ Luxuryನ ಬೇಡ ಎಂದು ಹೇಳಿ ಕೆಲಸ ಬಿಟ್ಟು ಹೇಗೆ ಕಳಿತುಕೊಳ್ಳಲಿ?ನನಗೆ ನಂಬಲು ಆಗದ ವಿಚಾರ ಏನೆಂದರೆ ನನ್ನ ಸ್ನೇಹಿತರು ಕರೆ ಮಾಡಿ ಶುಭ ಹಾರೈಸುತ್ತಿದ್ದಾರೆ. ನನ್ನ ನಿವೃತ್ತಿ ಏನ್ ಮಜಾನೋ ನಿಮ್ಗೆ?' ಎಂದು ಮತ್ತೆ ಟ್ಟೀಟ್ ಮಾಡಿದ್ದಾರೆ. ಇದು ಏಪ್ರಿಲ್ ತಿಂಗಳಲ್ಲ ಆದರೂ ರಾಹುಲ್ ಯಾಕೆ ಇಷ್ಟು ಗಂಭೀರವಾದ ವಿಚಾರಕ್ಕೆ ಈ ರೀತಿ ಜೋಕ್ ಮಾಡಿದ್ದಾರೆಂದು ಯಾರಿಗೂ ಆರ್ಥವಾಗಿಲ್ಲ.

Latest Videos
Follow Us:
Download App:
  • android
  • ios