ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗ್ಯಾಬ್ರಿಲ್ಲಾ ಜೊತೆ ಡೇಟಿಂಗ್ ನಡೆಸುತ್ತಿದ್ದು ಆಕೆ ಈಗ ಪ್ರಗ್ನೆಂಟ್ ಎಂದು ಹೇಳಿಕೊಂಡಿದ್ದಾರೆ. 

‘ ನಿನ್ನನ್ನು ಪಡೆದ ನಾನು ಧನ್ಯ. ಇನ್ನೊಂದು ಬೇಬಿಯನ್ನು ಕೊಡಲು ಸಿದ್ಧರಾಗಿರುವ ಈ ಬೇಬಿಗೆ ಧನ್ಯವಾದಗಳು ’ ಎಂದು ಇನ್ಟ್ಸಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. 

 

 
 
 
 
 
 
 
 
 
 
 
 
 

Blessed to have you and start all over again....thank you baby for this baby 👶🏽

A post shared by Arjun (@rampal72) on Apr 23, 2019 at 9:38am PDT

ಅರ್ಜುನ್, ಮಾಡೆಲ್ ಮೆಹರ್ ಜೆಸ್ಸಿಯಾ ಎನ್ನುವವರನ್ನು ಈ ಹಿಂದೆಯೇ ಮದುವೆಯಾಗಿದ್ದರು. ಇವರಿಗೆ ಮಹಿಕಾ ಹಾಗೂ ಮೈರಾ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.  20 ವರ್ಷಗಳ ಇಬ್ಬರ ದಾಂಪತ್ಯ ವಿಚ್ಛೇದನದ ಮೂಲಕ ಅಂತ್ಯಗೊಂಡಿತ್ತು. ನಂತರ ಗ್ಯಾಬ್ರಿಲ್ಲಾ ಜೊತೆ ಡೇಟಿಂಗ್ ನಡೆಸುತ್ತಿದ್ದರು. 

ಮತ್ತೆ ಕನ್ನಡ ನಾಡಿನ ರಸಿಕರ ಮನವ ಗೆಲ್ಲಲು ಬರುತ್ತಿದ್ದಾಳೆ ’ರಂಗನಾಯಕಿ’

ಗ್ಯಾಬ್ರಿಲ್ಲಾ ಸೌತ್ ಆಫ್ರಿಕನ್ ಸೂಪರ್ ಮಾಡೆಲ್. 2009 ರಲ್ಲಿ ಮಿಸ್ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸಿದ್ದರು. ಬೇಬಿ ಬಂಪ್ ಪ್ರದರ್ಶಿಸುತ್ತಿರುವ ಫೋಟೋವೊಂದರಲ್ಲಿ ತಾವಿರುವ ಫೋಟೋವನ್ನು ಅರ್ಜುನ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.