ನಟಿ ತ್ರಿಷಾ ಕೃಷ್ಣನ್-ಚಾರ್ಮಿ ಕೌರ್ ಮದುವೆ | ತ್ರಿಷಾ ಬರ್ತಡೆಗೆ ಪ್ರಪೋಸ್ ಮಾಡಿದ ಚಾರ್ಮಿ ಕೌರ್ | ತ್ರಿಷಾಗೆ ಕಿಸ್ ಕೊಡುತ್ತಿರುವ ಫೋಟೋ ಶೇರ್ ಮಾಡಿ ಪ್ರಪೋಸ್ ಮಾಡಿದ ಚಾರ್ಮಿ 

ಪ್ರೀತಿಗೆ ವಯಸ್ಸು, ಲಿಂಗಬೇಧವಿಲ್ಲ ಎನ್ನುವ ಮಾತನ್ನು ಆಗಾಗ ಕೇಳುತ್ತಿರುತ್ತೇವೆ. ಈ ಮಾತಿಗೆ ಸಾಕ್ಷಿ ಎನ್ನುವಂತೆ ಈ ಮದುವೆಗೂ ಲಿಂಗಭೇದವಿಲ್ಲ. ಕಾಲಿವುಡ್ ನಟಿ ತ್ರಿಷಾ ಕೃಷ್ಣನ್ ಹಾಘೂ ಚಾರ್ಮಿ ಕೌರ್ ಮದುವೆಯಾಗುತ್ತಿದ್ದಾರೆ! ಅರೇ! ಇದೇನಿದು ಎಂದು ಅಚ್ಚರಿಪಡಬೇಡಿ. ತಾವು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. 

Add Asianetnews Kannada as a Preferred SourcegooglePreferred

ತ್ರಿಷಾ ಕೃಷ್ಣನ್ ಮೇ 04 ರಂದು ಹುಟ್ಟುಹಬ್ಬ ಆಚರಿಸಿಕೊಂಡರು. ತ್ರಿಷಾಗೆ ಸ್ನೇಹಿತೆ ಚಾರ್ಮಿ ಕೌರ್ ವಿಶ್ ಮಾಡುತ್ತಾ, ಬೇಬಿ, ಈ ಲವ್ ಯೂ ಫಾರೆವರ್. ನಾವಿಬ್ಬರೂ ಮದುವೆಯಾಗೋಣವೇ? ನಿನ್ನ ಸಮ್ಮತಿಗಾಗಿ ನಿನ್ನ ಮೊಣಕಾಲ ಬಳಿ ಕುಳಿತು ಕಾಯುತ್ತೇನೆ’ ಎಂದು ಚಾರ್ಮಿ ಕೇಳಿಕೊಂಡಿದ್ದಾರೆ. 

Scroll to load tweet…

ಈ ಟ್ವೀಟ್ ಗೆ ತ್ರಿಷಾ ಉತ್ತರಿಸುತ್ತಾ, ಥ್ಯಾಂಕ್ಯೂ. ನಾನು ಈಗಾಗಲೇ ಯೆಸ್ ಹೇಳಿದ್ದೇನೆ ಎಂದು ಉತ್ತರಿಸಿದ್ದಾರೆ. 

Scroll to load tweet…

ಚಾರ್ಮಿ ಕೌರ್ ಹಾಗೂ ತ್ರಿಷಾ ಕೃಷ್ಣನ್ ಆತ್ಮೀಯ ಸ್ನೇಹಿತೆಯರು. ಚಾರ್ಮಿ ಕೌರ್ ಡ್ಯಾನ್ಸಿಂಗ್ ಸ್ಟಾರ್. ಲವಕುಶ, ದೇವ್ ಸನ್ ಆಫ್ ಮುದ್ದೇಗೌಡ, ಯಾರೇ ಕೂಗಾಡಲಿ ಚಿತ್ರಗಳಲ್ಲಿ ನಟಿಸಿದ್ದಾರೆ.