ನವದೆಹಲಿ: ಗಾಯಕ ರೆಹೆಮಾನ್‌ ತಮ್ಮನ್ನು ಉತ್ತಮ ಹಿಂದಿ ಚಿತ್ರಗಳಿಗೆ ಕಾರ್ಯನಿರ್ವಹಿಸುವುದರಿಂದ ವಂಚಿತನನ್ನಾಗಿ ಮಾಡಿದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರ ವೇಳೆ ನೀವೇಕೆ ಹೆಚ್ಚಾಗಿ ಹಿಂದಿ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ, ‘ನಾನು ಯಾವತ್ತೂ ಉತ್ತಮ ಚಿತ್ರಗಳಿಗೆ ಇಲ್ಲ ಎಂದು ಹೇಳಿಲ್ಲ.

ಸ್ಯಾಂಡಲ್‌ವುಡ್‌ನಲ್ಲಿ ಸ್ವಜನಪಕ್ಷಪಾತದ ಅಪಸ್ವರ; ನಟ JK ಆರೋಪ! 

ಆದರೆ, ನನ್ನ ವಿರುದ್ಧ ಗುಂಪೊಂದು ಅಪಪ್ರಚಾರದಲ್ಲಿ ತೊಡಗಿದೆ. ದಿಲ್‌ ಬೇಚಾರಾ ಚಿತ್ರದ ನಿರ್ದೇಶಕ ಮುಕೇಶ್‌ ಚೋಪ್ರಾ ಅವರಿಗೆ ನಾನು 2 ದಿನದಲ್ಲಿ 4 ಹಾಡುಗಳಿಗೆ ಸಂಗೀತ ಸಂಯೋಜಿಸಿಕೊಟ್ಟಿದ್ದೆ. ಈ ವೇಳೆ ಚೋಪ್ರಾ ಬಹಳಷ್ಟುಜನರು ನನ್ನ ಬಳಿ ತೆರಳದಂತೆ ಸೂಚಿಸಿದ್ದರು ಎಂಬ ವಿಷಯವನ್ನು ನನ್ನ ಗಮನಕ್ಕೆ ತಂದರು. ಆಗ ನನಗೆ ಗುಂಪೊಂದು ನನ್ನ ವಿರುದದ್ಧ ವದಂತಿ ಹಬ್ಬಿಸುತ್ತಿರುವ ವಿಷಯ ಬೆಳಕಿಗೆ ಬಂತು ಎಂದು ಹೇಳಿದ್ದಾರೆ.

ಅತ್ತ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಬಾಲಿವುಡ್‌ನ ನೆಪೋಟಿಸಂ ಕೂಗು ಸಿಕ್ಕಾಪಟ್ಟೆ ಮುನ್ನಲೆಗೆ ಬರುತ್ತಿದೆ. ಈ ಹೊತ್ತಲ್ಲೇ ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ನಟ ಜೆಕೆ ಅಲಿಯಾಸ್‌ ಜಯರಾಮ್‌ ಕಾರ್ತಿಕ್‌  ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ನೆಪೊಟಿಸಂ ಬಗ್ಗೆ ಮಾತನಾಡಿದ್ದಾರೆ.