ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮಾಜಿ ಪತ್ನಿ ಸೈರಾ ಭಾನು ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲಾದ ಸೈರಾ ಭಾನುಗೆ ತುರ್ತು ಸರ್ಜರಿ ಮಾಡಲಾಗಿದೆ.
ನವದೆಹಲಿ(ಫೆ.20) ಸಂಗೀತ ನಿರ್ದೇಶಕ ಏಆರ್ ರೆಹಮಾನ್ ಮಾಜಿ ಪತ್ನಿ ಸೈರಾ ಭಾನು ದಿಢೀರ್ ಆರೋಗ್ಯ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಸೈರಾ ಭಾನುಗೆ ತುರ್ತು ಸರ್ಜರಿ ಮಾಡಲಾಗಿದೆ. ಸದ್ಯ ಸೈರಾ ಭಾನು ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ಕೆಲ ದಿನಗಳ ವಿಶ್ರಾಂತಿಗೆ ಸೂಚಿಸಿದ್ದಾರೆ. ಸೈರಾ ಭಾನು ಆಸ್ತ್ರತ್ರೆ ದಾಖಲು ಹಾಗೂ ಶಸ್ತ್ರ ಚಿಕಿತ್ಸೆ ಕುರಿತು ಸೈರಾ ಭಾನು ವಕೀಲೆ ವಂದನಾ ಶಾ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಸೈರಾ ಭಾನು ವೈದ್ಯಕೀಯ ತುರ್ತು ಕಾರಣದಿಂದ ಆಸ್ಪತ್ರೆ ದಾಖಲಾಗಿದ್ದಾರೆ. ಚಿಕಿತ್ಸೆ ಒಳಗಾಗಿದ್ದ ಸೈರಾ ಭಾನುಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಸವಾಲಿನ ಸಮಯದಲ್ಲಿ ಸೈರಾ ಭಾನು ಅದಷ್ಟು ಬೇಗ ಗುಣಮುಖರಾಗಲು ಬಯಸಿದ್ದಾರೆ. ಇದೇ ವೇಳೆ ಸಂಕಷ್ಟದ ಸಮಯದಲ್ಲಿ ನೆರವಿಗೆ ಬಂದ ಹಾಗೂ ಶೀಘ್ರ ಗುಣಮುಖರಾಗಲು ಪ್ರಾರ್ಥಿಸಿದ ಎಲ್ಲರಿಗೂ ಸೈರಾ ಭಾನು ಧನ್ಯವಾದ ತಿಳಿಸಿದ್ದಾರೆ ಎಂದು ವಂದನಾ ಶಾ ಮಾಹಿತಿ ನೀಡಿದ್ದಾರೆ.
ಎ.ಆರ್.ರೆಹಮಾನ್ ಜೊತೆಗಿರುವ ಸಂಬಂಧವೇನು? ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಮೋಹಿನಿ ಡೇ!
ನೆರವಿಗೆ ಬಂದವರಿಗೆ ಧನ್ಯವಾದ ತಿಳಿಸುವ ವೇಳೆ ಸೈರಾ ಭಾನು ಮಾಜಿ ಪತಿ ಎಆರ್ ರೆಹಮಾನ್‌ಗೂ ಧನ್ಯವಾದ ತಿಳಿಸಿದ್ದಾರೆ. ಇದರ ಜೊತೆಗೆ ಲಾಸ್ ಎಂಜಲ್ಸ್‌ನ ಗೆಳೆಯರ ಬಳಗ, ರಸೂಲ್ ಪೂಕುಟ್ಟಿ ಹಾಗೂ ಪತ್ನಿ ಶಾದಿಯಾಗೂ ಧನ್ಯವಾದ ತಿಳಿಸಿದ್ದಾರೆ. ಯಾವ ಕಾರಣಕ್ಕೆ ಆಸ್ಪತ್ರೆ ದಾಖಲಾಗಿದ್ದಾರೆ ನ್ನೋ ಕುರಿತು ಮಾಹಿತಿ ನೀಡಿಲ್ಲ.
2024ರ ನವೆಂಬರ್ 19 ರಂದು ಎಆರ್ ರೆಹಮಾನ್ ಹಾಗೂ ಸೈರಾ ಭಾನು ಅಧಿಕೃತವಾಗಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಎ.ಆರ್. ರೆಹಮಾನ್ ಪತ್ನಿ ಸೈರಾ ಅವರು ಪತಿಯಿಂದ ಬೇರ್ಪಡುವ ಘೋಷಣೆ ಮಾಡಿದ್ದಾರೆ. ಸೈರಾ ಅವರ ವಕೀಲರಾದ ವಂದನಾ ಶಾ ಅವರು ಎ.ಆರ್. ರೆಹಮಾನ್ ಅವರಿಂದ ಬೇರೆಯಾಗುವ ನಿರ್ಧಾರದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದರು. ಇಬ್ಬರ ಮದುವೆಯಾಗಿ 29 ವರ್ಷಗಳಾಗಿದೆ. ಬಹಳ ಸಮಯದಿಂದ ಇಬ್ಬರ ನಡುವಿನ ಸಂಬಂಧ ಸರಿಯಾಗಿರಲಿಲ್ಲ. ಪರಸ್ಪರ ಗೌರವ ಮತ್ತು ಪ್ರೀತಿ ಇದ್ದರೂ, ರೆಹಮಾನ್ ಮತ್ತು ಅವರ ಪತ್ನಿ ಇಬ್ಬರೂ ಒಟ್ಟಿಗೆ ಇರುವುದು ಸಾಧ್ಯವಿಲ್ಲ ಎಂದು ಭಾವಿಸಿದ್ದಾರೆ. ಹೆಚ್ಚುತ್ತಿರುವ ಒತ್ತಡವು ದೂರವನ್ನು ಹೆಚ್ಚಿಸಿದೆ ಎಂದು ಸೈರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಸೈರಾ ಅವರ ಸುದೀರ್ಘ ಹೇಳಿಕೆಯಲ್ಲಿ, ಈ ನಿರ್ಧಾರ ತೆಗೆದುಕೊಳ್ಳುವುದು ತಮಗೆ ಸುಲಭವಾಗಿರಲಿಲ್ಲ ಎಂದು ಹೇಳಿದ್ದರು. ಅವರು ಬಹಳ ನೋವು ಮತ್ತು ಸಂಕಟವನ್ನು ಅನುಭವಿಸಿದ್ದಾರೆ. ತಮ್ಮ ಜೀವನದ ಅತ್ಯಂತ ಕಷ್ಟಕರವಾದ ಹಂತವನ್ನು ದಾಟುತ್ತಿದ್ದಾರೆ. ತಮ್ಮ ಖಾಸಗಿತನವನ್ನು ಗೌರವಿಸುವಂತೆ ಸೈರಾ ಜನರಲ್ಲಿ ವಿನಂತಿಸಿದ್ದರು.
