ಭಾರತಕ್ಕೆ ಬಂದಿರುವ ಆಪಲ್ ಸಿಇಒ ಟಿಮ್ ಕುಕ್‌ಗೆ ಮಧುರಿ ದೀಕ್ಷಿತ್ ವಡಾ ಪಾವ್‌ ಪಾರ್ಟಿ ಕೊಡಿಸಿದ್ದಾರೆ. ಇಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಟೆಕ್ ದೈತ್ಯ ಆಪಲ್ ಸಿಇಒ ಟಿಮ್ ಕುಕ್ ಸದ್ಯ ಭಾರತ ಪ್ರವಾಸದಲ್ಲಿದ್ದಾರೆ. ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಕಾರ್ಯಾರಂಭಗೊಂಡಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ಆ್ಯಪಲ್ ಸ್ಟೋರ್ ಉದ್ಘಾಟನೆಗೊಂಡಿದೆ. ಈ ಕಾರ್ಯಕ್ರಮಕ್ಕಾಗಿ ಆಪಲ್ ಸಿಇಒ ಟಿಮ್ ಕುಕ್ ಭಾರತಕ್ಕೆ ಆಗಮಿಸಿದ್ದು ಉತ್ತಮ ಸಮಯ ಕಳೆಯುತ್ತಿದ್ದಾರೆ. ಭಾರತದ ಅನೇಕ ಗಣ್ಯರನ್ನು ಭೇಟಿ ಮಾಡುತ್ತಿರುವ ಟಿಮ್ ಕುಕ್ ಇತ್ತೀಚೆಗಷ್ಟೆ ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರನ್ನು ಭೇಟಿಯಾಗಿದ್ದಾರೆ. ವಿಶೇಷ ಎಂದರೆ ಇಬ್ಬರೂ ಮುಂಬೈ ಬೀದಿಯಲ್ಲಿ ವಡಾ ವಾಸ್ ಸವಿದಿದ್ದಾರೆ.

ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಟಿ ಮಾಧುರಿ, 'ವಡಾ ಪಾವ್‌ಗಿಂತ ಮುಂಬೈಗೆ ಉತ್ತಮ ಸ್ವಾಗತ ಕೋರಲು ಸಾಧ್ಯನಿಲ್ಲ' ಎಂದು ಹೇಳಿದ್ದಾರೆ. ಜೊತೆಗೆ ಮಾಧುರಿ ಇನ್‌ಸ್ಟಾಗ್ರಾಮ್‌ನಲ್ಲಿ ಇಬ್ಬರು ರೆಸ್ಟೋರೆಂಟ್‌ನಲ್ಲಿ ವಡಾ ಪಾವ್ ಸವಿಯುತ್ತಿರುವ ಫೋಟೋವನ್ನು ಮಾಧುರಿ ಹಂಚಿಕೊಂಡಿದ್ದಾರೆ.

View post on Instagram

ಮಾಧುರಿ ಶೇರ್ ಮಾಡಿರುವ ಫೋಟೋಗೆ ಪ್ರತಿಕ್ರಿಯೆ ನೀಜಿರುವ ಟಿಮ್ ಕುಕ್ ಧನ್ಯವಾದ ತಿಳಿಸಿದ್ದಾರೆ. 'ಧನ್ಯವಾದಗಳು ಮಾಧುರಿ ದೀಕ್ಷಿತ್. ಮೊದಲ ಬಾರಿಗೆ ವಡಾ ಪಾವ್ ನನಗೆ ಪರಿಚಯಿಸಿದ್ದಕ್ಕಾಗಿ. ತುಂಬಾ ರುಚಿಕರವಾಗಿತ್ತು' ಎಂದು ಹೇಳಿದ್ದಾರೆ.

Scroll to load tweet…

ಟಿಮ್ ಕುಕ್ ಬಾಲಿವುಡ್‌ನ ಅನೇಕ ಗಣ್ಯರನ್ನು ಭೇಟಿಯಾಗಿದ್ದಾರೆ. ನಟಿ ಸೋನಂ ಕಪೂರ್, ನೇಹಾ ದೂಪಿಯಾ, ಎಆರ್ ರಹಮಾನ್, ಮೌನಿ ರಾಯ್ ದಂಪತಿ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರ ಜೊತೆ ಟಿಮ್ ಕುಕ್ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಗಣ್ಯರು ಸಹ ಫೋಟೋ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 62 ವರ್ಷದ ಟಿಮ್ ಕುಕ್ ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. 

ಭಾರತಕ್ಕೆ ಆಗಮಿಸಿರುವ ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿ ದಿನ ಸ್ಯಾಲರಿ 1.10 ಕೋಟಿ ರೂ!

ಭಾರತದಲ್ಲಿ ಮೊದಲ ಆ್ಯಪಲ್ ಸ್ಟೋರ್ ಉದ್ಘಾಟಿಸಿ ಭಾರತವನ್ನು ಆ್ಯಪಲ್ ಪ್ರಮುಖ ಮಾರುಕಟ್ಟೆಯನ್ನಾಗಿ ಮಾಡಿಕೊಂಡಿದೆ. ವಿದೇಶಕ್ಕೆ ಗರಿಷ್ಠ ಫೋನ್ ರಫ್ತುವಿನಲ್ಲಿ ಆ್ಯಪಲ್ ಐಫೋನ್ ಮೊದಲ ಸ್ಥಾನದಲ್ಲಿದೆ. ಇನ್ನು ಭಾರತದಲ್ಲಿ ಐಫೋನ್ ಬಳಕೆಯೂ ಹೆಚ್ಚಾಗಿದೆ. ಹೀಗಾಗಿ ಆ್ಯಪಲ್ ಕಂಪನಿಗೆ ಇದೀಗ ಭಾರತ ಪ್ರಮುಖ ಮಾರುಕಟ್ಟೆಯಾಗಿದೆ. ಮುಂಬೈ ಉಪನಗರದ ಜಿಯೋ ವಲ್ಡ್‌ರ್‍ ಡ್ರೈವ್‌ ಮಾಲ್‌ನಲ್ಲಿ ಆ್ಯಪಲ್ ಮಳಿಗೆ ತರೆಯಲಾಗಿದ್ದು, ಇದಕ್ಕೆ ‘ಆ್ಯಪಲ್‌ ಬಿಕೆಸಿ’ ಎಂದು ಹೆಸರಿಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟಿಮ್‌ ಕುಕ್‌, ‘ಮುಂಬೈನಲ್ಲಿ ಆ್ಯಪಲ್‌ ಸ್ಟೋರ್‌ ಆರಂಭಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ಸ್ಫೂರ್ತಿದಾಯಕವಾಗಿದೆ. ಅತ್ಯದ್ಭುತ ಪ್ರತಿಕ್ರಿಯೆ ನೋಡುತ್ತುತ್ತಿದ್ದೇವೆ. ಭಾರತದ ಮೊದಲ ಆ್ಯಪಲ್‌ ಬಿಕೆಸಿ ಸ್ಟೋರ್‌ ಆರಂಭಿಸಲು ಸಂತಸವಾಗುತ್ತಿದೆ’ ಎಂದಿದ್ದಾರೆ.