Asianet Suvarna News Asianet Suvarna News

ವಿಕ್ಕಿ ಕೌಶಲ್ ಜೊತೆ ಹೀಗೆಲ್ಲ ಕಾಣಿಸಿಕೊಂಡ್ರಾ ರಶ್ಮಿಕಾ.. ಛೀ ಅಂತಿದ್ದಾರೆ ಅಭಿಮಾನಿಗಳು

ಸೌತ್‌ ಇಂಡಿಯನ್‌ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ಬಾಲಿವುಡ್‌ ಮೂವಿಗಳಲ್ಲೂ ಮಿಂಚುತ್ತಿರುವ ರಶ್ಮಿಕಾ ಇದೀಗ ಮತ್ತೆ ಟ್ರೋಲಿಗೊಳಗಾಗಿದ್ದಾರೆ. ಕಾರಣ ವಿಕ್ಕಿ ಕೌಶಲ್‌ ಜೊತೆಗೆ ಆಕೆ ಕಾಣಿಸಿಕೊಂಡ ರೀತಿ. ಈಗ ಇದೆಲ್ಲ ಬೇಕಿತ್ತಾ ಅನ್ನುತ್ತಲೇ ಛೀ ಅಂತ ಮುಖ ತಿರುಗಿಸುತ್ತಿದ್ದಾರೆ ಆಕೆಯ ಫ್ಯಾನ್ಸ್.

 

Appearence of Rashmika Mandanna in Inner ware advertisement getting trolled
Author
Bengaluru, First Published Sep 26, 2021, 3:53 PM IST
  • Facebook
  • Twitter
  • Whatsapp

ರಶ್ಮಿಕಾ ಮಂದಣ್ಣ ಸಿನಿಮಾದ ಜೊತೆಗೆ ಇತರೇ ಕಾರಣಕ್ಕೂ ಸಾಕಷ್ಟು ಟ್ರೋಲ್‌ಗೆ ಒಳಗಾಗ್ತಾ ಇದ್ದಾರೆ. ಅವರು ಟ್ರೋಲ್, ವಿವಾದಗಳಿಗೆ ಯಾವ ಪರಿ ಅಡ್ಜೆಸ್ಟ್ ಆಗಿದ್ದಾರೆ ಅಂದರೆ ಯಾವ ವಿವಾದವೂ ಇಲ್ಲ ಅಂದ್ರೆ ರಶ್ಮಿಕಾಗೆ ಏನೋ ಕಳ್ಕೊಂಡ ಫೀಲ್ ಆಗುತ್ತಂತೆ. ಆದರೆ ಇದೀಗ ಹಿಂದೆಂದೂ ಕಾಣದ ಅವತಾರವೊಂದರಲ್ಲಿ ವಿಕ್ಕಿ ಕೌಶಲ್ ಜೊತೆಗೆ ಕಿರಿಕ್ ಸುಂದರಿ ಕಾಣಿಸಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದ ಹಾಗಿದೆ. 'ಇಷ್ಟೂ ಸೆನ್ಸ್ ಇಲ್ವಾ ರಶ್ಮಿಕಾಗೆ ಅಂತ ಪಡ್ಡೆಗಳೂ ಮಾತಾಡ್ಕೊಳ್ಳೋ ಹಾಗಾಗಿದೆ. ಹಾಗಿದ್ರೆ ರಶ್ಮಿಕಾ ಮಾಡಿರುವ ಅಂಥಾ ಕೆಲಸ ಏನು.. 

ಕೊಡಗಿನ ಕಲಾವಿದೆ ರಶ್ಮಿಕಾ ಮಂದಣ್ಣ ಅಂದ್ರೆ ಒಂದು ಕಾಲಕ್ಕೆ ಎಲ್ಲ ಕನ್ನಡಿಗರ ಮೆಚ್ಚಿನ ಹುಡುಗಿ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆಕೆ ಹೇಳಿದ ಮಾತು ಕನ್ನಡಿಗರಿಗೆ ಬೇಸರ ತರಿಸುವ ಹಾಗಿತ್ತು. ರಕ್ಷಿತ್ ಬ್ರೇಕ್ ಅಪ್ ಕೇಸ್‌ನಲ್ಲಿ ಒಂದಿಷ್ಟು ಜನರ ಕೆಟ್ಟ ಕಮೆಂಟ್ ಗಳು ಆಕೆಯನ್ನು ಹರ್ಟ್ ಮಾಡಿರಬಹುದು, ಆದರೆ ಆಕೆ ಈಗ ಆಡಿರುವ ಮಾತು ಕನ್ನಡ ಪ್ರೀತಿ ಇರುವ ಎಲ್ಲರಿಗೂ ಹರ್ಟ್ ಮಾಡಿತ್ತು. ಕನ್ನಡ ಸಿನಿಮಾಗಳಲ್ಲಿ ನಟಿಸೋದಕ್ಕೆ ತನಗೆ ಟೈಮಿಲ್ಲ. ಹೇಗಿದ್ರೂ ಪಾನ್ ಇಂಡಿಯಾ ಸಿನಿಮಾಗಳಲ್ಲಿ ನಟಿಸುತ್ತಿದ್ದೇನಲ್ವಾ, ಅದೇ ಕನ್ನಡಕ್ಕೂ ಬರುತ್ತೆ. ಅಲ್ಲೇ ಕನ್ನಡಿಗರು ತನ್ನನ್ನು ನೋಡಬಹುದು ಅಂತ ಉಡಾಫೆಯ ಉತ್ತರವನ್ನು ಈ ಹುಡುಗಿ ಕೊಟ್ಟಿದ್ರು. ಈಕೆಯನ್ನು ಬೆಳೆಸಿ ಪೋಷಿಸಿದ ಕನ್ನಡತನವನ್ನೇ ಮರೆತಿರೋದು ಕನ್ನಡಿಗರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ ಇದೀಗ ಅದನ್ನೂ ಮೀರಿ ಮುಜುಗರ ಪಡುವಂಥಾ ಕಾರಣಕ್ಕೆ ರಶ್ಮಿಕಾ ಮತ್ತೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು 365 ದಿನ ಸಾಕಾಗಲ್ಲ ಎಂದ ರಶ್ಮಿಕಾ ಮಂದಣ್ಣ!

ವಿಕ್ಕಿ ಕೌಶಲ್ ಅವರ ಜೊತೆಗಿನ ಈಕೆಯ ಅಪೀಯರೆನ್ಸ್ ಅನೇಕರಿಗೆ ಮುಜುಗರ ತರಿಸಿದೆ. ಹಾಗಿದ್ರೆ ರಶ್ಮಿಕಾ ವಿಕ್ಕಿ ನಡುವೆ ಅಫೇರ್ ಶುರುವಾಗಿದೆಯಾ ಅಂತ ನೀವು ಕೇಳಬಹುದು. ಆದರೆ ವಿಷಯ ಅದಲ್ಲ. ರಶ್ಮಿಕಾ ವಿಕ್ಕಿ ಕೌಶಲ್ ಜೊತೆಗೆ ಪುರುಷರ ಒಳ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅಡ್ವರ್ಟೈಸ್‌ಮೆಂಟ್ ಇದೀಗ ಸಾಕಷ್ಟು ಚರ್ಚೆಗೆ ಒಳಗಾಗಿದೆ.  ಇದರಲ್ಲಿ ರಶ್ಮಿಕಾ ಮಂದಣ್ಣ ಯೋಗ ಟೀಚರ್​ ಆಗಿದ್ದಾರೆ. ಅವರ ಕ್ಲಾಸ್​ನಲ್ಲಿ ವಿಕ್ಕಿ ಕೌಶಲ್​ ಸೇರಿದಂತೆ ಕೆಲವರು ಯೋಗ ಮಾಡುತ್ತ ಇರುತ್ತಾರೆ. ಎರಡೂ ಕೈ ಮೇಲೆ ಎತ್ತಿರುವ ಭಂಗಿಯಲ್ಲಿ ವಿಕ್ಕಿ ಕೌಶಲ್​ ನಿಂತುಕೊಂಡಿರುವಾಗ ಸೊಂಟದ ಭಾಗದಲ್ಲಿ ಅವರ ಒಳ ಉಡುಪಿನ ಪಟ್ಟಿ ಕಾಣಿಸುತ್ತದೆ. ರಶ್ಮಿಕಾ ಅದನ್ನು ಕಂಡು ಆಕರ್ಷಿತರಾಗುತ್ತಾರೆ. ಮೈಮರೆಯುತ್ತಾ ಯೋಗ ಹೇಳಿಕೊಡೋದನ್ನೇ ನಿಲ್ಲಿಸಿಬಿಡುತ್ತಾರೆ! ಇದೇ ಪ್ರಾಡಕ್ಟ್ ನ ಇನ್ನೊಂದು ಜಾಹೀರಾತಿನಲ್ಲೂ ಇದೇ ಕಾಂಸೆಪ್ಟ್ ಇದೆ. ಯೋಗ ಕ್ಲಾಸ್ ಗೆ ವಿಕ್ಕಿ ಕೌಶಲ್​ ಬರುವಾಗ ಬೇಕಂತಲೇ ಅವರ ಯೋಗ ಮ್ಯಾಟ್​​ ಅನ್ನು ಎತ್ತರದ ಜಾಗದಲ್ಲಿ ರಶ್ಮಿಕಾ ಇಟ್ಟಿರುತ್ತಾರೆ. ಅದನ್ನು ತೆಗೆದುಕೊಳ್ಳಲು ವಿಕ್ಕಿ ಕೌಶಲ್​ ಕೈ ಎತ್ತಿ ಕಷ್ಟಪಡುವಾಗ ಅವರ ಒಳಉಡುಪಿನ ಪಟ್ಟಿ ಮತ್ತೆ ಕಾಣಿಸುತ್ತದೆ. ರಶ್ಮಿಕಾ ಅದನ್ನು ನೋಡಿ ಖುಷಿಪಡುತ್ತಾರೆ. ಸದ್ಯ ಯೂಟ್ಯೂಬ್​ನಲ್ಲೂ ಈ ಜಾಹೀರಾತುಗಳು ಬಿತ್ತರ ಆಗುತ್ತಿವೆ.

ಮಮ್ಮುಟ್ಟಿ ಮಗ ದುಲ್ಖರ್‌ಗೆ ರಶ್ಮಿಕಾ ಜೋಡಿ

ಇಷ್ಟೆಲ್ಲ ಸಿನಿಮಾ ಆಫರ್‌ಗಳಿರುವಾಗ ರಶ್ಮಿಕಾಗೆ ಇದೆಲ್ಲ ಬೇಕಿತ್ತಾ ಅಂತ ಜನ ಬೈಯ್ಯುತ್ತಿದ್ದಾರೆ. ಈ ಆಡ್ ನ ಮೂಲಕ ಆಕೆ ಕೆಟ್ಟದಾಗಿ ಬಿಂಬಿತಳಾಗಿರೋದರ ಜೊತೆಗೆ ರಾಂಗ್ ಮೆಸೇಜ್ ಅನ್ನೂ ನೀಡುತ್ತಿದ್ದಾಳೆ ಅಂತ ಜನ ಸೋಷಿಯಲ್ ಮೀಡಿಯಾದಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಮಿಷನ್ ಮಜ್ನು' ಹಾಗೂ 'ಗುಡ್​​ಬೈ' ಚಿತ್ರದ ಕೆಲಸಗಳಲ್ಲಿ ಈಗ ರಶ್ಮಿಕ ಬ್ಯುಸಿ ಆಗಿದ್ದಾರೆ. ಟಾಲಿವುಡ್​ನಲ್ಲಿ ಅಲ್ಲು ಅರ್ಜುನ್​ ಜೊತೆ ನಟಿಸಿರುವ 'ಪುಷ್ಪ' ಚಿತ್ರ ಈ ವರ್ಷ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ರಿಲೀಸ್​ ಆಗಲಿದೆ. ದುಲ್ಖರ್​ ಸಲ್ಮಾನ್​ ನಟನೆಯ ಹೊಸ ಚಿತ್ರದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಕೂಡ ಕೇಳಿಬರುತ್ತಿದೆ.

ರಶ್ಮಿಕಾ ಮಂದಣ್ಣ ಕ್ಯಾಮೆರಾಗೆ ಪೋಸ್‌ ಕೊಡಲು ಹೇಳಿಕೊಟ್ಟ ಸಿದ್ದಾರ್ಥ್ ಮಲ್ಹೋತ್ರಾ?

Follow Us:
Download App:
  • android
  • ios