ಸುಶಾಂತ್‌ಗೆ ತಂದೆಯೊಂದಿಗೆ ಒಳ್ಳೆಯ ಸಂಬಂಧವಿರಲಿಲ್ಲ. ತಂದೆಯ ಎರಡನೇ ಮದುವೆ ಬಗ್ಗೆ ಸುಶಾಂತ್ ಬೇಸರಿಸಿಕೊಂಡಿದ್ದ ಎಂದು ಹೇಳಿಕೆ ಕೊಟ್ಟಿದ್ದ ಶಿವಸೇನಾ ಸಂದನಿಗೆ ಈಗ ಸಂಕಟ ಎದುರಾಗಿದೆ.

ಶಿವಸೇನಾ ಎಂಪಿ ಸಂಜಯ್ ರಾವತ್ ನೀಡಿರುವ ಹೇಳಿಕೆಗೆ ಕ್ಷಮೆ ಕೇಳಬೇಕು. ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಿದ್ಧರಾಗಿ ಎಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಹೋದರ ನೀರಜ್ ಬಾಬ್ಲು ತಿಳಿಸಿದ್ದಾರೆ.

ಸುಶಾಂತ್ ಸಾವಿಗೂ ಮುನ್ನ ಯಾರ ಸಂಪರ್ಕದಲ್ಲಿದ್ದರು ರಿಯಾ? ಮೊಬೈಲ್‌ ನಿಂದ ಶಾಕಿಂಗ್ ಮಾಹಿತಿ!

ಸುಶಾಂತ್ ತಂದೆ ಕೆಕೆ ಸಿಂಗ್ ಬಗ್ಗೆ ಸಂಜಯ್ ರಾವತ್‌ ಹೇಳಿಕೆ ಶುದ್ಧ ಸುಳ್ಳು. ಸಂಸದ ಬಹಿರಂಗವಾಗಿ ಕ್ಷಮೆ ಕೇಳದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಸುಶಾಂತ್ ಸಾವಿನ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವುದನ್ನು ಆರಂಭದಿಂದಲೇ ವಿರೋಧಿಸಿದ ಸಂಜಯ್ ರಾವತ್, ತನಿಖೆಯಲ್ಲಿ ಸುಶಾಂತ್ ಹಾಗೂ ಆತನ ತಂದೆ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ ಎಂದು ತಿಳಿದು ಬಂದಿದೆ. ಸುಶಾಂತ್ ತಂದೆಯನ್ನು ಎಷ್ಟು ಸಲ ಭೇಟಿಯಾಗಿದ್ದ ಎಂದು ಪ್ರಶ್ನಿಸಿದ್ದರು.

ಸುಶಾಂತ್‌ಗೆ ಓವರ್‌ಡೋಸ್ ಔಷಧ ಕೊಟ್ಟಿದ್ದ ಗರ್ಲ್‌ಫ್ರೆಂಡ್ ರಿಯಾ..!

ಸುಶಾಂತ್ ಸಾವಿನ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಈ ಕೇಸನ್ನು ಮುಂಬೈ ಪೊಲೀಸರ ಕೈಯಿಂದ ತೆಗೆದುಕೊಳ್ಳುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದರು.

ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಮುಂಬೈನಲ್ಲಿ, ಬಿಹಾರದಲ್ಲಿ ಎಫ್‌ಐಆರ್ ದಾಖಲಿಸಿದ್ದೇಕೆ..? ಘಟನೆ ನಡೆದು 40 ದಿನಗಳ ಬಳಿಕ ಕುಟುಂಬ ಕೇಸ್ ಕೊಡಲು ಮುಂದಾಗಿದೆ ಎಂದು ಸಂಜಯ್ ತಮ್ಮ ಅಂಕಣದಲ್ಲಿ ಹೇಳಿದ್ದರು.

ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

ಈ ಸಂಬಂಧ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಅವರು ಸಂಜಯ್ ರಾವತ್ ವಿರುದ್ಧ ವಾಗ್ದಾಳಿ ನಡೆಸಿದ್ದು, ತಂದೆ ಮಗನ ಸಂಬಂಧದ ಬಗ್ಗೆ ಹೇಳಿಕೆ ನೀಡಿರುವುದನ್ನು ಖಂಡಿಸಿದ್ದಾರೆ.