ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಟಿ ಅನುಷ್ಕಾ ಶರ್ಮಾ, ೧೩ನೇ ವಯಸ್ಸಿನಲ್ಲಿಯೇ ಮಾಡೆಲಿಂಗ್‌ ಆರಂಭಿಸಿದ್ದರು. ಫ್ಯಾಷನ್ ಸ್ಟೈಲಿಸ್ಟ್ ಪ್ರಸಾದ್ ಬಿದ್ದಪ್ಪ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅನುಷ್ಕಾ, ಬಾಲಿವುಡ್‌ನಲ್ಲಿ ಯಶಸ್ವಿ ನಟಿ, ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ.

ಅನುಷ್ಕಾ ಶರ್ಮಾ ಎಂದರೆ ಸಾಕು, ಆಕೆಗೆ ಬೇರೆ ಪರಿಚಯ ಬೇಕಿಲ್ಲ. ಬಾಲಿವುಡ್‌ನ ಸ್ಟಾರ್​ ನಟಿ, ಕ್ರಿಕೆಟಿಗ ವಿರಾಟ್​ ಕೊಹ್ಲಿ ಪತ್ನಿ, ಅನೇಕ ಹಿಟ್ ಚಿತ್ರಗಳನ್ನು ನೀಡಿರುವ ತಾರೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಜನಿಸಿದರೂ ಬೆಂಗಳೂರಿಗೂ ಅನುಷ್ಕಾಗೂ ನಂಟಿದೆ. ಏಕೆಂದರೆ ಇವರು ಓದಿದ್ದು ಬೆಂಗಳೂರಿನಲ್ಲಿ. ಇವರ ತಂದೆ ಆರ್ಮಿಯಲ್ಲಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ, ಅನುಷ್ಕಾ ಅವರು ಬೆಂಗಳೂರಿನ ಆರ್ಮಿ ಸ್ಕೂಲ್‌ನಲ್ಲಿ ಹೈಸ್ಕೂಲ್​ ಕಲಿತರು, ಕಾಲೇಜು ಕೂಡ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮುಗಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲಿಂಗ್​ ಲೋಕಕ್ಕೂ ಎಂಟ್ರಿ ಕೊಟ್ಟು ಅಲ್ಲಿಯೂ ಸಕ್ಸಸ್​​ ಕಂಡಿದ್ದಾರೆ ಅನುಷ್ಕಾ. ಬೆಂಗಳೂರಿನ ಫ್ಯಾಷನ್ ಸ್ಟೈಲಿಸ್ಟ್ ಪ್ರಸಾದ್ ಬಿದಪ್ಪ ಗರಡಿಯಲ್ಲಿ ಮಾಡೆಲಿಂಗ್ ಆರಂಭಿಸಿದ ಅನುಷ್ಕಾ ಶರ್ಮಾ ಬಗ್ಗೆ ಇದೀಗ ಪ್ರಸಾದ್​ ಅವರು ಹೇಳಿರುವ ವಿಡಿಯೋ ಒಂದು ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಅಂದಹಾಗೆ ಪ್ರಸಾದ್​ ಬಿದ್ದಪ್ಪ ಅವರು ನಟರಾದ ಅಂಬರೀಶ್​- ಸುಮಲತಾ ಸೊಸೆ ಅವಿವಾ ಅವರ ತಂದೆ. 

ಅನುಷ್ಕಾ ಶರ್ಮಾ ಅವರ ಗುಣಗಾನ ಮಾಡುತ್ತಲೇ ಪ್ರಸಾದ್​ ಬಿದ್ದಪ್ಪ ಅವರು, ಆಗಿನ್ನೂ ಅನುಷ್ಕಾ 13 ವಯಸ್ಸಿನವಳು ಇದ್ದಳು. ಅವಳ ಅಪ್ಪ ನನ್ನ ಬಳಿ ಬಂದು, ಇವಳು ಮಾಡೆಲ್​ ಆಗಬೇಕು ಎಂದು ಇದ್ದಾಳೆ. ಮನೆ ಬಿಟ್ಟು ಓಡಿ ಹೋಗುವ ಪ್ಲ್ಯಾನ್​ ಕೂಡ ಇದೆ. ನೀವೇ ಏನಾದರೂ ಮಾಡಿ ಎಂದರು. ಆಕೆ ಹುಚ್ಚಿಯಾಗಿಬಿಟ್ಟಿದ್ದಾಳೆ, ಯಾರ ಮಾತೂ ಕೇಳುತ್ತಿಲ್ಲ ಎಂದರು. ಆಗ ನಾನು ಓಕೆ ಎಂದು ಆಕೆಯನ್ನು ಕುಳ್ಳರಿಸಿಕೊಂಡು ಮಾಡೆಲಿಂಗ್​ ಪ್ರಪಂಚದ ಬಗ್ಗೆ ಒಂದಿಷ್ಟು ತಿಳಿಸಿದೆ. ಈಗಲೇ ಬೇಡ, ಮೊದಲು ಎಜುಕೇಷನ್​ ಮುಗಿಸು, ಆಮೇಲೆ ಮಾಡೆಲಿಂಗ್​ಗೆ ಹೋಗಬಹುದು ಎಂದೆಲ್ಲಾ ಬುದ್ಧಿಮಾತು ಹೇಳಿದೆ.

ಅನುಷ್ಕಾ- ವಿರಾಟ್‌ ದಾಂಪತ್ಯದಲ್ಲಿ ಬಿರುಕು? ಕೊಹ್ಲಿ ಭಾವನಾತ್ಮಕ ಪೋಸ್ಟ್‌ಗೆ ಫ್ಯಾನ್ಸ್ ಶಾಕ್‌!

ಅವಳು ನನ್ನ ಮಾತು ಕೇಳಿದಳು. ಬೇಸಿಗೆ ರಜೆಯಲ್ಲಿ ಮಾಡೆಲಿಂಗ್​ ತರಬೇತಿ ಕೊಟ್ಟೆ. 16-17ನೇ ವಯಸ್ಸಿನಲ್ಲಿಯೇ ಸೂಪರ್​ ಮಾಡೆಲ್​ ಆದಳು. ಬಾಂಬೆಗೆ ಆಡಿಷನ್​ಗೆ ಹೋದಳು. ಆಡಿಷನ್​ ಎಂದ್ರೆನೇ ಗೊತ್ತಿರಲಿಲ್ಲ ಆಕೆಗೆ. ಆಗ ರಬ್​ ನೇ ಬನಾದಿ ಜೋಡಿ ಚಿತ್ರಕ್ಕಾಗಿ ಆಡಿಷನ್​ ಕೊಟ್ಟಿದ್ದಳು. ಏಳೇ ತಿಂಗಳಿನಲ್ಲಿ ಆಕೆಗೆ ಆಫರ್​ ಬಂದಿತು. ಸಿಕ್ಕಾಪಟ್ಟೆ ಟ್ಯಾಲೆಂಟ್​ ಇದೆ ಅವಳಲ್ಲಿ. ಇದೀಗ ಮಾಡೆಲಿಂಗ್​, ನಟನೆ ಮಾತ್ರವಲ್ಲದೇ ಯಶಸ್ವಿ ಉದ್ಯಮಿ ಕೂಡ ಆಗಿದ್ದಾಳೆ. ಅವಳು ಏನು ಬೇಕಾದರೂ ಸಾಧಿಸುತ್ತಾಳೆ. ಅವಳಿಗೆ ಇನ್ನೂ ಉಜ್ವಲ ಭವಿಷ್ಯವಿದೆ ಎಂದು ಕೊಂಡಾಡಿದ್ದಾರೆ ಪ್ರಸಾದ್​ ಬಿದ್ದಪ್ಪ.

ಇನ್ನು ಅನುಷ್ಕಾ ಕುರಿತು ಹೇಳುವುದಾದರೆ, 2008ರಲ್ಲಿ ತೆರೆಗೆ ಬಂದ ರಬ್ ನೇ ಬನಾದಿ ಜೋಡಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ಬಳಿಕ ಬದ್ಮಾಶ್ ಕಂಪನಿ, ಪಟಿಯಾಲಾ ಹೌಸ್, ಜಬ್ ತಕ್ ಹೇ ಜಾನ್, ಪಿಕೆ, ಬಾಂಬೆ ವೆಲ್ವೆಟ್, ಸುಲ್ತಾನ್, ಪರಿ, ಸಂಜು, ಝೀರೋ ಮುಂತಾದ ಸಿನಿಮಾಗಳಲ್ಲಿ ಅನುಷ್ಕಾ ಶರ್ಮಾ ಮಿಂಚಿದ್ದಾರೆ. ಕೆಟರ್ ವಿರಾಟ್ ಕೊಹ್ಲಿ ಅವರನ್ನು ಮದುವೆಯಾಗಿರುವ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ತಾಯಿ ಆಗಿದ್ದಾರೆ. cinemadbs ಶೇರ್​ ಮಾಡಿಕೊಂಡಿರುವ ವಿಡಿಯೋ ನೋಡಿ...

View post on Instagram