ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾಳ ಫೋಟೋವನ್ನು ವಿಶ್ವ ಮಹಿಳಾ ದಿನಾಚರಣೆಯಂದು ಶೇರ್ ಮಾಡಿದ್ದಾರೆ. ಸೆಲೆಬ್ರಿಟಿ ಕಪಲ್ ಜನವರಿಯಲ್ಲಿ ಮೊದಲ ಮಗುವನ್ನು ಸ್ವಾಗತಿಸಿದ್ದರು.

ಫೋಟೋ ಶೇರ್ ಮಾಡಿದ ಕೊಹ್ಲಿ, ಮಗು ಹುಟ್ಟುವುದನ್ನು ನೋಡುವುದು ಮನುಷ್ಯ ಪಡೆಯಬಹುದಾದ ಅದ್ಭುತ ಅನುಭವ. ಅದನ್ನು ನೋಡಿದರೆ ಮಹಿಳೆಯ ನಿಜವಾದ ಶಕ್ತಿ, ದೈವಿಕತೆ ನಿಮಗೆ ಅರ್ಥವಾಗುತ್ತದೆ. ದೇವರು ಯಾಕೆ ಆಕೆಯಲ್ಲಿಯೇ ಇನ್ನೊಂದು ಜೀವ ಇಟ್ಟಿರುತ್ತಾನೆ ಎಂಬುದು ಅರ್ಥವಾಗುತ್ತದೆ. ಅವರು ನಾವು ಪುರುಷರಿಗಿಂತಲೂ ಸ್ಟ್ರಾಂಗ್.

ಮಗನ ಮೊದಲ ಫೋಟೋ ರಿವೀಲ್ ಮಾಡಿದ ಕರೀನಾ: ಮಹಿಳಾ ದಿನ ಕೊಟ್ರು ಸೂಪರ್ ಮೆಸೇಜ್.

ನನ್ನ ಜೀವನದ ಅತ್ಯಂತ ಸ್ಟ್ರಾಂಗ್, ಸಹಾನುಭೂತಿ ಮತ್ತು ಪವರ್‌ಫುಲ್ ಮಹಿಳೆಗೆ ಮತ್ತು ತಾಯಿಯಂತೆ ಬೆಳೆಯಲು ಹೊರಟಿರುವ ಮಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು. ಪ್ರಪಂಚದ ಎಲ್ಲ ಅದ್ಭುತ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಬರೆದಿದ್ದಾರೆ ವಿರಾಟ್.

ಅನುಷ್ಕಾ ಕಳೆದ ತಿಂಗಳು ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಅವರ ಮೊದಲ ಫೋಟೋದೊಂದಿಗೆ ಮಗಳ ಹೆಸರನ್ನು ಘೋಷಿಸಿದ್ದರು. ಇದೀಗ ಇಬ್ಬರೂ ಪುಟ್ಟ ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ.

 
 
 
 
 
 
 
 
 
 
 
 
 
 
 

A post shared by Virat Kohli (@virat.kohli)