ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಮಹಿಳಾ ದಿನಾಚರಣೆಯ ದಿನವೇ ತನ್ನ ಪುಟ್ಟ ಮಗುವಿನ ಜೊತೆ ಮೊದಲ ಫೋಟೋ ಶೇರ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಎರಡನೇ ಮಗುವನ್ನು ಸ್ವಾಗತಿಸಿದ ಸೈಫ್-ಕರೀನಾ ದಂಪತಿ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ. ಮಗುವನ್ನು ಎದೆಗಪ್ಪಿಹಿಡಿದ ಫೋಟೋ ಶೇರ್ ಮಾಡಿದ ನಟಿ ಅದರ ಜೊತೆ ಸ್ಪೆಷಲ್ ಮೆಸೇಜ್ ಒಂದನ್ನು ಕೊಟ್ಟಿದ್ದಾರೆ.

ಬಾಲಿವುಡ್‌ನ ಯಂಗ್‌ ಮತ್ತು ಪ್ರಾಮಿಸ್ಸಿಂಗ್‌ ನಟಿಯರಿವರು!

ಮಗುವಿನ ಮುಖವನ್ನು ಸಂಪೂರ್ಣವಾಗಿ ತೋರಿಸಿಲ್ಲ. ಆದ್ರೂ ಫ್ಯಾನ್ಸ್ ಮಾತ್ರ ಫುಲ್ ಖುಷ್ ಆಗಿದ್ದಾರೆ. ಮಹಿಳೆ ಮಾಡಲಾಗದ್ದು ಏನೂ ಇಲ್ಲ. ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ನಟಿ ಬರೆದಿದ್ದಾರೆ.

ಫೆಬ್ರವರಿ 21ರಂದು ಸೈಫೀನಾ ಎರಡನೇ ಮಗುವನ್ನು ಸ್ವಾಗತಿಸಿದ್ದರು. ಇವರಿಗೆ 4 ವರ್ಷದ ಮಗ ತೈಮೂರ್ ಕೂಡಾ ಇದ್ದಾನೆ. ನಟಿ ಬ್ರೀಚ್ ಕ್ಯಾಂಟಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.