ಆಲಿಯಾ ಭಟ್ ಹಾಡಿ ಹೊಗಳಿದ ಅನುಪಮ್​ ಖೇರ್​: ಕಂಗನಾ ಕಾಲೆಳೆದ ನೆಟ್ಟಿಗರು!

ಸಿದ್ಧಾರ್ಥ್ ಮಲ್ಹೋತ್ರಾ  ಮತ್ತು ಕಿಯಾರಾ ಅಡ್ವಾಣಿ ಮದುವೆಯ ಸಂದರ್ಭದಲ್ಲಿ ನಟ ಅನುಪಮ್​ ಖೇರ್​, ನಟಿ ಆಲಿಯಾ ಭಟ್​ ಜೊತೆ ಫೋಟೋ ತೆಗೆಸಿಕೊಂಡು, ಆಲಿಯಾ ಅವರನ್ನು ಹೊಗಳಿದ್ದಾರೆ. ಇದನ್ನು ನೋಡಿ ನಟಿ ಕಂಗನಾ ರಣಾವತ್​ ಕ್ಷೇಮವಾಗಿದ್ದಾರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಏಕೆ? 
 

Anupam Kher praised Alia Netizens question whether Kangana is healthy

ಕಾಂಟ್ರವರ್ಸಿ ಕ್ವೀನ್​ ಎಂದೇ ಹೆಸರು ಪಡೆದಿರುವ ಕಂಗನಾ ರಣಾವತ್​ ಅವರು ಸದಾ ಒಂದಿಲ್ಲೊಂದು ವಿವಾದದ ಅಂಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತಲಿದ್ದರೆ, ಟ್ರೋಲಿಗರು ಅವರ ಕಾಲೆಳೆಯಲು ಕಾಯುತ್ತಲೇ ಇರುತ್ತಾರೆ. ಕಂಗನಾ (Kangana Ranaut) ಕೆಲವೊಮ್ಮೆ ತುಂಬಾ ಸೀರಿಯಸ್​ ಆಗಿರುವ ವಿಷಯಗಳನ್ನೂ ಪ್ರಸ್ತಾಪಿಸಿದರೂ, ಆಕೆಯನ್ನು ಕಂಡರೆ ಆಗದವರು ಒಂದಿಲ್ಲೊಂದು ರೀತಿಯಲ್ಲಿ ಆ ಪೋಸ್ಟ್​ ಬಗ್ಗೆ ಟ್ರೋಲ್​  ಮಾಡುತ್ತಿರುತ್ತಾರೆ. ಕೆಲವೊಮ್ಮೆ ಇಲ್ಲಸಲ್ಲದ ವಿಷಯಗಳಿಗೂ ಕಂಗನಾ ಮೂಗು ತೂರಿಸುವುದು ಇದೆ. ಅದೇ ರೀತಿ ಕಳೆದ ವರ್ಷ ಆಲಿಯಾ ಭಟ್​​ ನಟನೆಯ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶದನ ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ಬಿಡುಗಡೆಗೂ ಮುನ್ನ ಕಂಗನಾ ರಣಾವತ್​ ಅವರು ಟೀಕೆ ಮಾಡಿದ್ದರು. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋಲಲಿದೆ ಎಂದು ಕಂಗನಾ ಭವಿಷ್ಯ ನುಡಿದಿದ್ದರು. ‘ಇದು ಬಿಡುಗಡೆಯಾಗಲಿರುವ ದಿನ  ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿ ಸುಟ್ಟು ಬೂದಿಯಾಗಲಿದೆ. ಸಿನಿಮಾ ಇಂಡಸ್ಟ್ರಿಯ ಸಂಸ್ಕೃತಿಯನ್ನು ಆಲಿಯಾ ತಂದೆ (ಮಹೇಶ್​ ಭಟ್​) ಹಾಳು ಮಾಡಿದ್ದಾರೆ. ಅವರ ಸಿನಿಮಾಗಳನ್ನು ಜನರು ನೋಡುವುದನ್ನು ನಿಲ್ಲಿಸಬೇಕು. ಈ ಶುಕ್ರವಾರ ರಿಲೀಸ್​ ಆಗುತ್ತಿರುವ ಸಿನಿಮಾ ಕೂಡ ಸೋಲು ಕಾಣಲಿದೆ’ ಎಂದಿದ್ದರು ಕಂಗನಾ. ಆದರೆ ಈ ಚಿತ್ರ ಬ್ಲಾಕ್​ ಬಸ್ಟರ್​ ಆಗಿರುವುದು ಈಗ ಇತಿಹಾಸ. 

ಇದೇ ಚಿತ್ರ, ಹಾಗೂ ಕಂಗನಾ ನೀಡಿದ್ದ ಹೇಳಿಕೆ ಎರಡೂ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣ, ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಮತ್ತು ಕಿಯಾರಾ ಅಡ್ವಾಣಿ (Kiara Adwani) ಅವರ ಮದುವೆಯ ಸಮಾರಂಭದಲ್ಲಿ ನಟ ಅನುಪಮ್ ಖೇರ್​ ಅವರು ಆಲಿಯಾ ಭಟ್​ ಜೊತೆ ತೆಗೆಸಿಕೊಂಡಿರುವ ಫೋಟೊ. ಇದೇ 12ರಂದು  ಮುಂಬೈನ ಸೇಂಟ್ ರೆಜಿಸ್ ಹೋಟೆಲ್‌ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರ ವಿವಾಹದ ಆರತಕ್ಷತೆ ರಣವೀರ್ ಸಿಂಗ್, ವಿಕ್ಕಿ ಕೌಶಲ್, ಅಭಿಷೇಕ್ ಬಚ್ಚನ್, ಅನುಪಮ್ ಖೇರ್, ಆಲಿಯಾ ಭಟ್, ಅಜಯ್ ದೇವಗನ್, ಕಾಜೋಲ್, ಗೌರಿ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳಿಂದ ತುಂಬಿ ಹೋಗಿತ್ತು.  ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್, ಕರಣ್ ಜೋಹರ್ ಸೇರಿದಂತೆ ಅಸಂಖ್ಯ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಹಾಜರು ಇದ್ದರು.  ಈ ಸಂದರ್ಭದಲ್ಲಿ  ಅನುಪಮ್ ಖೇರ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಮದುವೆಯ ಸಂಭ್ರಮ ಹಂಚಿಕೊಂಡಿದ್ದಾರೆ.  ಆಲಿಯಾ ಭಟ್ (Alia Bhat) ಜೊತೆಗಿನ ಫೋಟೋ ಶೇರ್​ ಮಾಡಿಕೊಂಡಿದ್ದಾರೆ.

Rakul Preeth Singh: ಎರಡು ಕಾಂಡೋಮ್ ಒಟ್ಟಿಗೇ​ ಧರಿಸಿದ್ರೆ ಏನಾಗತ್ತೆ? ನಟಿ ವಿವರಿಸಿದ್ದು ಹೀಗೆ!

ಈ ಫೋಟೋದಲ್ಲಿ  ಅನುಪಮ್​ ಖೇರ್​ (Anupam Kher) ಮಿನುಗುವ ಕಪ್ಪು ಕುರ್ತಾ-ಪೈಜಾಮ ಧರಿಸಿದ್ದರೆ, ಆಲಿಯಾ ಸೀರೆಯಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ. ಫೋಟೋ ಶೇರ್​ ಮಾಡಿರುವ ಅನುಪಮ್​ ಖೇರ್​,   ಗಂಗೂಬಾಯಿ ಕಾಠಿಯಾವಾಡಿಯಲ್ಲಿ ಆಲಿಯಾ ಭಟ್ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ.  'ಪ್ರೀತಿಯ ಆಲಿಯಾ,  ಈ ಮದುವೆಯ ಆರತಕ್ಷತೆಯಲ್ಲಿ ಬಹಳ ಸಮಯದ ನಂತರ ನಿಮ್ಮನ್ನು ಭೇಟಿಯಾಗುವುದು ತುಂಬಾ ಖುಷಿಕೊಡುತ್ತಿದೆ.  ನೀವು ಶಾಲೆಯಲ್ಲಿ ಓದುತ್ತಿದ್ದ ದಿನಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನೀವೊಬ್ಬ  ಹುಟ್ಟು ನಟಿ ಎಂದು ಆಗಲಿಂದಲೇ ನಾನು ಯಾವಾಗಲೂ ನಿಮ್ಮನ್ನು ಹೇಗೆ ಕೀಟಲೆ ಮಾಡುತ್ತಿದ್ದೆ. ನಿಮ್ಮ ಅಭಿನಯವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಅದರಲ್ಲಿಯೂ  ವಿಶೇಷವಾಗಿ  ಗಂಗೂಬಾಯಿಯಾಗಿ ನಿಮ್ಮ ಪಾತ್ರ ಅದ್ಭುತವಾಗಿದೆ. ಹೀಗೆಯೇ ಮುಂದುವರೆಯಿತು. ಯಾವಾಗಲೂ ಪ್ರೀತಿ ಮತ್ತು ಪ್ರಾರ್ಥನೆ ನಿಮ್ಮ ಜೊತೆಗೆ ಇರುತ್ತದೆ' ಎಂದು ಬರೆದಿದ್ದಾರೆ. 

ರಾಮ್ ಚರಣ್​ಗೆ ಇಷ್ಟವಿಲ್ಲದಿದ್ರೂ ಲಿಪ್​ಲಾಕ್​ ಮಾಡಿದ್ರಾ ಸಮಂತಾ?

ಇದು ವೈರಲ್​ ಆಗುತ್ತಲೇ ನೆಟ್ಟಿಗರ ದೃಷ್ಟಿ ಕಂಗನಾ ರಣಾವತ್​ ಅವರ ಮೇಲೆ ಹೋಗಿದೆ. ಕಂಗನಾರ ವಿರುದ್ಧ ಥಹರೇವಾರಿ ಕಮೆಂಟ್​ಗಳ ಸುರಿಮಳೆ ಮಾಡುತ್ತಿರುವ ನೆಟ್ಟಿಗರು, 'ಅನುಪಮ್​ ಖೇರ್​ ಅವರ ಮಾತನ್ನು ಕಂಗನಾ ಕೇಳಿಸಿಕೊಂಡಿದ್ದಾರಾ? ಈಗೇನೆನ್ನುತ್ತಾರೆ? ಏನಾದರೂ ಮಾತು ಹೊರಕ್ಕೆ ಬರುತ್ತಿವೆಯಾ?' ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು ಕೆಲವರು ಅರೆರೆ... ಕಂಗನಾ ಇನ್ನೂ ಕ್ಷೇಮವಾಗಿದ್ದಾರಾ ಎಂದು ಟೀಕಿಸಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Anupam Kher (@anupampkher)

Latest Videos
Follow Us:
Download App:
  • android
  • ios