Asianet Suvarna News Asianet Suvarna News

ಭಯೋತ್ಪಾದಕ ದಾಳಿಗೆ ಬಲಿಯಾದ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಮಗಳಿಗೆ ನಟ ಅನುಪಮ್ ಖೇರ್ ನೆರವು

ಭಯೋತ್ಪಾದಕ ದಾಳಿಗೆ ಹತ್ಯೆಗೀಡಾದ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರ ಏಳು ವರ್ಷದ ಮಗಳ ನೆರವಿಗೆ ನಿಂತಿದ್ದಾರೆ ಬಾಲಿವುಡ್ ಖ್ಯಾತ ನಟ ಏನುಪಮ್ ಖೇರ್.

Anupam Kher offers helps education to Diksha, daughter of Sanjay Sharma sgk
Author
First Published Mar 1, 2023, 3:27 PM IST | Last Updated Mar 1, 2023, 3:36 PM IST

ಭಯೋತ್ಪಾದಕ ದಾಳಿಗೆ ಹತ್ಯೆಗೀಡಾದ ಕಾಶ್ಮೀರಿ ಪಂಡಿತ್ ಸಂಜಯ್ ಶರ್ಮಾ ಅವರ ಏಳು ವರ್ಷದ ಮಗಳ ನೆರವಿಗೆ ನಿಂತಿದ್ದಾರೆ ಬಾಲಿವುಡ್ ಖ್ಯಾತ ನಟ ಏನುಪಮ್ ಖೇರ್. ಸಂಜಯ್ ಶರ್ಮಾ ಅವರ ಪುತ್ರಿ ದೀಕ್ಷಾ ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಅನುಪಮ್ ಖೇರ್ ಹೇಳದ್ದಾರೆ. ದೀಕ್ಷಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕೆಯ ಮುಗ್ದ ಮುಖ ಎಂತವರಿಗಾದರೂ ಕಣ್ಣೀರು ತರಿಸುತ್ತದೆ. ದೀಕ್ಷಾ ತಂದೆ ಸಂಜಯ್ ಶರ್ಮಾ ಮೃತದೇಹ ಅವರ ಮನೆಯ ಕಾಂಪೌಂಡ್ ನಲ್ಲಿ ಇರಿಸಲಾಗಿದ್ದು ಮುಸ್ಲಿಂಮರ ದೊಡ್ಡ ಗುಂಪೊಂದು ಶವದ ಸುದ್ದಿ ತುಂಬಿದೆ. ದೀಕ್ಷಾ ತನ್ನ ಕೈ ಮೇಲೆ ತಲೆ ಇಟ್ಟು ಎಲ್ಲೋ ಕಳೆದುಹೋದವಳಂತೆ ಚಿಂತಿಸುತ್ತಿದ್ದಾರೆ. ದೀಕ್ಷಾ ಈ ಫೋಟೋ ಎಂಥವರಿಗಾದರೂ ಚುರುಕ್ ಎನ್ನದೆ ಇರದು. 

ದೀಕ್ಷಾ ಫೋಟೋ ವೈರಲ್ ಆಗುತ್ತಿದ್ದಂತೆ ಅನುಪಮ್ ಖೇರ್ ಆಕೆಯ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳಲು ಮುಂದಾಗಿದ್ದಾರೆ. ಗ್ಲೋಬಲ್ ಕಾಶ್ಮೀರಿ ಪಂಡಿತ್ ಡಯಾಸ್ಪೊರಾ ಸಂಸ್ಥೆಗೆ ಖೇರ್ ಅವರು ಮಗುವಿಗೆ ಶಿಕ್ಷಣ ನೀಡುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಹೇಳಿ ಪತ್ರ ಬರೆದಿದ್ದಾರೆ. 'ಅವಳು ಬಯಸಿದಷ್ಟು ವಿದ್ಯಾಭ್ಯಾಸ ಮಾಡಬಹುದು ಮತ್ತು ನಾನು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ.' ಎಂದು ಅನುಪಮ್ ಖೇರ್ ಸಂಸ್ಥೆಗೆ ಕಳುಹಿಸಿರುವ ಧ್ವನಿ ಸಂದೇಶದಲ್ಲಿ ತಿಳಿಸಿದ್ದಾರೆ.

ಚೀನಾ, ಪಾಕ್‌ನಿಂದ ತರಬೇತಿ ಪಡೆದ ಡೇಂಜರಸ್‌ ವ್ಯಕ್ತಿ ದೇಶಕ್ಕೆ ಎಂಟ್ರಿ; ಮುಂಬೈನಲ್ಲಿ ಉಗ್ರ ದಾಳಿ ಸಂಭವ: NIA ಎಚ್ಚರಿಕೆ

ಸಂಜಯ್ ಶರ್ಮಾ ಹತ್ಯೆಯ ಬಗ್ಗೆ

ಸಂಜಯ್ ಶರ್ಮಾ 45 ವರ್ಷದ ಬ್ಯಾಂಕ್ ಎಟಿಎಂ ಕಾವಲುಗಾರ ಭಾನುವಾರ ಬೆಳಗ್ಗೆ ತನ್ನ ಗ್ರಾಮದ ಮಾರ್ಕೇಟ್‌ನಿಂದ ತನ್ನ ಪತ್ನಿಯೊಂದಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಭಾನುವಾರ ಬೆಳಗ್ಗೆ ಹ್ಯತ್ಯೆಮಾಡಲಾಗಿತ್ತು. ಮೂರು ದಶಕಗಳ ಹಿಂದೆ ಕಾಶ್ಮೀರ ಪಂಡಿತರ ಹಿಂಸಾಚಾರ ಮತ್ತು ಭಯೋತ್ಪಾದನೆಯ ಹಿನ್ನೆಲೆಯಲ್ಲಿ ಹಿಂದೂಗಳು ಕಣಿವೆಯನ್ನು ತೊರೆದಾಗ ಆ ಕಣಿವೆಯಲ್ಲಿ ವಾಸಿಸುತ್ತಿದ್ದ ಕೆಲವೇ ಕೆಲವೂ ಕಾಶ್ಮೀರಿ ಪಂಡಿತರಲ್ಲಿ ಅವರ ಕುಟುಂಬವೂ ಸೇರಿದೆ. ಕಾಶ್ಮೀರಿ ಸಂಜಯ್ ಶರ್ಮಾ ತನ್ನ ಪತ್ನಿ, ದೀಕ್ಷಾ ಮತ್ತು ಇನ್ನೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಹತ್ಯೆಯನ್ನು ಮುಸ್ಲಿಮರು ವ್ಯಾಪಕವಾಗಿ ಖಂಡಿಸಿದ್ದಾರೆ, 'ಭಯೋತ್ಪಾದಕ ಕೃತ್ಯಕ್ಕೆ ತಮ್ಮ ಬೆಂಬಲವಿಲ್ಲ' ಎಂದು ಹೇಳಿದ್ದಾರೆ.

ಮುಂಬೈ ದಾಳಿಗೆ 25 ಉಗ್ರರು ಸಜ್ಜು, ಅಂಬಾನಿ, ಬಚ್ಚನ್ ಸೇರಿ ಗಣ್ಯರ ಮನೆ ಸ್ಫೋಟಿಸುವ ಬೆದರಿಕೆ!

ಏಳು ವರ್ಷ ಪುಟ್ಟ ಬಾಲಕಿ ದೀಕ್ಷಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಯ ಫೋಟೋ ನೋಡಿದ ನೆಟ್ಟಿಗರು ಹತ್ಯೆ ಖಂಡಿಸಿ ದೀಕ್ಷಾಗೆ ಬೆಂಬಲಕ್ಕೆ ನಿಂತಿದ್ದಾರೆ. ಗ್ಲೋಬಲ್ ಕಾಶ್ಮೀರಿ ಪಂಡಿತ್ ಡಯಾಸ್ಪೊರಾದ ಯುಎಸ್ ಮೂಲದ ನಾಯಕ ಸುರೀಂದರ್ ಕೌಲ್ ಅವರು ಕುಟುಂಬವನ್ನು ಸಂಪರ್ಕಿಸಿ ಮತ್ತು ಕುಟುಂಬಕ್ಕೆ ತಮ್ಮ ಸಹಾಯವನ್ನು ನೀಡಲು ಅನಪಮ್ ಖೇರ್‌ ವ್ಯವಸ್ಥೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios