ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಸುದ್ದಿಯಾದ ನಟನ ಮಾಜಿ ಗರ್ಲ್‌ಫ್ರೆಂಡ್ ಕಿರುತೆರೆ ನಟಿ ಅಂಕಿತಾ ಲೋಖಂಡೆ ಅವಳಿ ಮಕ್ಕಳ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಅಂಕಿತಾ ಅಕ್ಕ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಅಕ್ಕನ ಇಬ್ಬರು ಮಕ್ಕಳ ಜೊತೆ ಫೋಟೋ ಶೇರ್ ಮಾಡಿದ್ದಾರೆ.

ಸಹ ನಟ ಮತ್ತು ಮಾಜಿ ಬಾಯ್‌ಫ್ರೆಂಡ್ ಸುಶಾಂತ್ ಸಾವಿನಿಂದ ನೊಂದಿದ್ದ ಅಂಕಿತಾ ಮುಖದಲ್ಲಿ ಮಂದಹಾಸ ಮೂಡಿದೆ. ಹಸುಗೂಸನ್ನು ಕೈಯಲ್ಲಿ ಹಿಡಿದುಕೊಂಡ ಫೋಟೋ ಹಂಚಿಕೊಂಡಿದ್ದಾರೆ. 

ಮಾಧ್ಯಮಗಳಿಂದ ಬೇಜಾರಾಗಿ ಆತ್ಮಹತ್ಯೆಗೆ ಶರಣಾದ್ರಾ ಸುಶಾಂತ್..! ಅಂಕಿತಾ ಹೇಳಿದ್ದಿಷ್ಟು..!

ಮಾಜಿ ಗೆಳೆಯನ ಸಾವಿನಿಂದ ನೋವಿಗೊಳಗಾಗಿದ್ದ ಕಿರುತೆರೆ ನಟಿ ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸಿನವನಲ್ಲ ಎಂದು ಬಲವಾಗಿ ನಂಬಿದ್ದರು. ಇದನ್ನೇ ಮಾಧ್ಯಮಗಳಿಗೂ ತಿಳಿಸಿದ್ದರು.

ಇದೀಗ ಅಂಕಿತಾ ನವಜಾತ ಅವಳಿ ಮಕ್ಕಳೊಂದಿಗೆ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಹೊಸ ಜೀವನ ಆರಂಭ, ನಮ್ಮ ಕುಟುಂಬಕ್ಕೆ ಖುಷಿ. ನಮ್ಮ ಕುಟುಂಬ ಈ ಮದ್ದುಮಕ್ಕಳ ಜನನದಿಂದ ಇನ್ನಷ್ಟು ಶ್ರೀಮಂತವಾಗಿದೆ. ಅಬೀರ್, ಅಬೀರ ವೆಲ್‌ಕಂ ಎಂದು ಬರೆದುಕೊಂಡಿದ್ದಾರೆ.

ದೀಪವು ನಿನ್ನದೆ..ಗಾಳಿಯೂ ನಿನ್ನದೆ.. ಸುಶಾಂತ್ ಸಾವಿನ ನಂತರ ಅಂಕಿತಾ ಮೊದಲ ಪೋಸ್ಟ್

ಸುಶಾಂತ್ ಸಾವಿನ ನಂತರ ಅಂಕಿತಾ ಇನ್‌ಸ್ಟಾಗ್ರಾಂ ತುಂಬಾ ಸುಶಾಂತ್ ಕುರಿತಾದ ಪೋಸ್ಟ್‌ಗಳೇ ಇದ್ದವು. ಸುಶಾಂತ್ ತಾಯಿಯ ಫೋಟೋ ಶೇರ್ ಮಾಡಿ ಈಗ ತಾಯಿ ಹಾಗೂ ಮಗ ಜೊತೆಯಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದರು. ಸುಶಾಂತ್ ಸಾವಿನ ತನಿಖೆ ಸಿಬಿಐ ವಹಿಸಿಕೊಂಡಾಗಲು ಅಂಕಿತಾ ಪೋಸ್ಟ್ ಹಾಕಿ ನಾವು ಕಾಯುತ್ತಿದ್ದ ಸಮಯ ಬಂತು ಎಂದು ಬರೆದುಕೊಂಡಿದ್ದರು.

ಪವಿತ್ರ ರಿಶ್ತಾ ಸೀರಿಯಲ್‌ನಲ್ಲಿ ಸುಶಾಂತ್ ಸಹ ನಟಿ ಅಂಕಿತಾ ಉದ್ಯಮಿ ವಿಕ್ಕಿ ಜೈನ್ ಅವರನ್ನು ಮದುವೆಯಾಗಲಿದ್ದು, ಜೂನ್ 2020 11ರಂದು ಇಬ್ಬರ ಎಂಗೇಜ್‌ಮೆಂಟ್ ಆಗಿತ್ತು.