Asianet Suvarna News Asianet Suvarna News

ಭಾರತವಾಯ್ತು, ಅಮೆರಿಕದಲ್ಲೂ 'ಅನಿಮಲ್' ದಾಖಲೆ! ಹೆಣ್ಣಿನ ದೌರ್ಜನ್ಯ, ಕ್ರೌರ್ಯದ ಚಿತ್ರಕ್ಕೆ ಇನ್ನೊಂದು ಯಶಸ್ಸು

ನಟಿ ಸಂಪೂರ್ಣ ಬೆತ್ತಲಾಗುವುದು, ನಟ ಹಾಗೂ ವಿಲನ್​ ಹೆಣ್ಣಿನ ಮೇಲೆ ವಿಪರೀತ ದೌರ್ಜನ್ಯ ನಡೆಸುವುದನ್ನು ನೋಡಿ ಖುಷಿಪಡುತ್ತಿರುವ ಪ್ರೇಕ್ಷಕರ ವರ್ಗ ಇನ್ನಷ್ಟು ಹೆಚ್ಚಿದೆ. ಅನಿಮಲ್​ ಚಿತ್ರ ಇನ್ನೊಂದು ಮೈಲಿಗಲ್ಲು ಸಾಧಿಸಿದೆ! 
 

Animal is third biggest Hindi film in North America ends theatrical run with 125 crores suc
Author
First Published Feb 17, 2024, 5:49 PM IST

ಬಾಲಿವುಡ್​ ಪುರುಷ ಪ್ರಧಾನವಾಗಿದ್ದು, ಮಹಿಳೆಯರು ಇಲ್ಲಿ ಬಟ್ಟೆ ಬಿಚ್ಚಲು ಅಷ್ಟೇ ಸೀಮಿತರು ಎನ್ನುವ ಮಾತು ಬಹಳ ವರ್ಷಗಳಿಂದಲೂ ರೂಢಿಯಲ್ಲಿದೆ. ಅದಕ್ಕೆ ತಕ್ಕನಾಗಿ ಇಂದಿನ ನಟಿಯರೂ ಹಿಂದೆ ಬಿದ್ದಿಲ್ಲ. ಪೈಪೋಟಿಗೆ ಬಿದ್ದವರಂತೆಯೇ ಬಟ್ಟೆ ಬಿಚ್ಚುತ್ತಿದ್ದಾರೆ. ಅನಿಮಲ್​ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣನ ಹಸಿಬಿಸಿ ದೃಶ್ಯ ಹಾಗೂ ತೃಪ್ತಿ ಡಿಮ್ರಿ ಅವರು ಸಂಪೂರ್ಣ ಬೆತ್ತಲಾದ ಮೇಲಂತೂ ಇಂದು ಬಾಲಿವುಡ್​ ಇಂಡಸ್ಟ್ರಿಯಲ್ಲಿ ನಟಿಯರಿಗೆ ಇರುವ ಸ್ಥಾನದ ಬಗ್ಗೆ ಪರಿಪೂರ್ಣವಾಗಿ ತೋರಿಸಲಾಗಿದೆ. ಈ ಚಿತ್ರ ಭರ್ಜರಿ ಯಶಸ್ಸು ಕಂಡು ಹಲವಾರು ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿರುವುದನ್ನು ನೋಡಿದರೆ ಪ್ರೇಕ್ಷಕರ ಅಭಿರುಚಿ ಯಾವ ಮಟ್ಟಿಗೆ ಹೋಗಿದೆ ಎನ್ನುವುದೂ ಅರ್ಥವಾಗುತ್ತದೆ. ಮಹಿಳೆಯರ ಮೇಲೆ ಮಿತಿಮೀರಿದ ದೌರ್ಜನ್ಯ, ಮೂರು ಪತ್ನಿಯರ ಮೇಲೆ ನಡೆಸುವ ಅತ್ಯಾಚಾರ, ಮಹಿಳೆಯನ್ನು ಕಾಮದ ವಸ್ತು ಎಂದು ಅಂದುಕೊಳ್ಳುವುದು, ಬೂಟನ್ನು ನೆಕ್ಕು ಎಂದು ಪತ್ನಿಗೆ ನಾಯಕ ಹೇಳುವುದು... ಇವೆಲ್ಲವನ್ನೂ ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವಾಗತಿಸಿ ಅನಿಮಲ್​ ಚಿತ್ರಕ್ಕೆ ಭರ್ಜರಿ ಯಶಸ್ಸು ತಂದುಕೊಟ್ಟಿದ್ದಾರೆ. 

ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ ಮತ್ತು ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ನಟಿಸಿದ ಈ ಚಿತ್ರದ ಭರಾಟೆ ಇನ್ನೂ ನಿಂತಿಲ್ಲ.  ಸಿನಿಮಾ ಬಿಡುಗಡೆಯಾಗಿ ಮೂರು ತಿಂಗಳಾಗುತ್ತಾ ಬಂದಿದೆ. ಆದರೂ ಸಿನಿಮಾ ಜಗತ್ತಿನಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಇದೀಗ ಉತ್ತರ ಅಮೆರಿಕದಲ್ಲಿ US $15 ಮಿಲಿಯನ್ (ಅಂದರೆ ಸುಮಾರು 125 ಕೋಟಿ ರೂಪಾಯಿ) ಒಟ್ಟು ಗಲ್ಲಾಪೆಟ್ಟಿಗೆ ಸಂಗ್ರಹದೊಂದಿಗೆ  ಮೂರನೇ ಅತಿ ಹೆಚ್ಚು ಹಣ ಗಳಿಸಿದ ಹಿಂದಿ ಚಲನಚಿತ್ರವೆಂಬ ಖ್ಯಾತಿ ಗಳಿಸಿದೆ.   ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಇಲ್ಲಿಯವರೆಗೆ  ಸುಮಾರು 915 ಕೋಟಿ ರೂಪಾಯಿ ವ್ಯವಹಾರ ಮಾಡಿದೆ.  

'ಅನಿಮಲ್​' ಚಿತ್ರದಲ್ಲಿ ಮುಸ್ಲಿಂ ವ್ಯಕ್ತಿಯನ್ನು ವಿಲನ್​ ಮಾಡಿದ್ಯಾಕೆ? ನಿರ್ದೇಶಕ ಕೊಟ್ರು ಈ ಉತ್ತರ...

ಚಿತ್ರದ ಯಶಸ್ಸಿನ ಬಗ್ಗೆ ಇದಾಗಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.  ಇದರ ಯಶಸ್ಸನ್ನು ಕಂಡು ಗೀತ ರಚನೆಕಾರ ಜಾವೇದ್​ ಅಖ್ತರ್ ಶಾಕ್​  ಆಗಿ ಹೇಳಿಕೆಯೊಂದನ್ನು ನೀಡಿದ್ದರು.  ಪ್ರಸ್ತುತ ಚಲನಚಿತ್ರದ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.   ಅನಿಮಲ್​ ಚಿತ್ರವನ್ನು ನೇರವಾಗಿ ಉಲ್ಲೇಖಿಸದಿದ್ದರೂ ಅದರಲ್ಲಿರುವ ಮಿತಿ ಮೀರುವ ದೌರ್ಜನ್ಯದ ಬಗ್ಗೆ ಬೇಸರಿಸಿದ್ದರು. ಇಂದಿನ ಕಾಲಘಟ್ಟದಲ್ಲಿ ತಯಾರಾಗುತ್ತಿರುವ ಚಿತ್ರಗಳು ಮತ್ತು ಹಾಡುಗಳ ಯಶಸ್ಸಿನ ಜವಾಬ್ದಾರಿ ಕೂಡ ಪ್ರೇಕ್ಷಕರ ಮೇಲೆ ನಿಂತಿದೆ. ಯುವ ಚಲನಚಿತ್ರ ನಿರ್ಮಾಪಕರಿಗೆ ಇದು ಪರೀಕ್ಷಾ ಸಮಯ ಎಂದು ನಾನು ನಂಬುತ್ತೇನೆ. ಉದಾಹರಣೆಗೆ, ಪುರುಷನು ಮಹಿಳೆಗೆ ತನ್ನ ಶೂ ನೆಕ್ಕಲು ಕೇಳುವ ಚಲನಚಿತ್ರವಿದ್ದರೆ ಅಥವಾ ಮಹಿಳೆಗೆ ಕಪಾಳಮೋಕ್ಷ ಮಾಡುವುದು ಸರಿ ಎಂದು ಪುರುಷ ಹೇಳಿದರೆ ಆ ಚಿತ್ರ ಸೂಪರ್ ಹಿಟ್ ಆಗಿದ್ದರೆ ಅದು ತುಂಬಾ ಅಪಾಯಕಾರಿ ಎಂದು ಅಖ್ತರ್ ಹೇಳಿದ್ದರು.

‘ಈಗ ಸಿನಿಮಾದವರಿಗಿಂತಲೂ ಪ್ರೇಕ್ಷಕರ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಯಾವ ಸಿನಿಮಾವನ್ನು ಇಷ್ಟಪಡಬೇಕು ಎಂಬುದನ್ನು ಪ್ರೇಕ್ಷಕರು ನಿರ್ಧರಿಸಬೇಕು. ಒಳ್ಳೆಯ ಸಿನಿಮಾ ಮಾಡುವವರೂ ಇದ್ದಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ. ಅವರಿಗೆ ನೀವು ಎಲ್ಲಿಯವರೆಗೆ ಬೆಂಬಲ ನೀಡುತ್ತೀರಿ ಎಂಬುದರ ಮೇಲೆ ಅಂಥ ಸಿನಿಮಾಗಳ ಭವಿಷ್ಯ ನಿರ್ಧಾರ ಆಗಿರುತ್ತದೆ’ ಎಂದು ಜಾವೇದ್​ ಅಖ್ತರ್​ ಹೇಳಿದ್ದರು. ಇದು ಹಲವು ಗಣ್ಯರ ಅಭಿಪ್ರಾಯ ಕೂಡ ಆಗಿದೆ. ಆದರೆ ಇದರ ಹೊರತಾಗಿಯೂ ಅನಿಮಲ್​ ಯಶಸ್ಸಿನತ್ತ ಸಾಗುತ್ತಿದೆ. 

'ಅನಿಮಲ್'​ ಯಶಸ್ಸು ಡೇಂಜರಸ್​ ಎಂದ ಜಾವೇದ್​ ಅಖ್ತರ್! ನೀವು ಕಲಾವಿದನೇ ಅಲ್ಲ ಎಂದು ನಿರ್ದೇಶಕ ಗರಂ

Follow Us:
Download App:
  • android
  • ios